Ad imageAd image

ನಿವೃತ್ತಿ ಯೋಧ ಸಂಗಪ್ಪ ರೋಣದ ಅವರಿಗೆ ಅದ್ದೂರಿ ಸ್ವಾಗತ 

Bharath Vaibhav
ನಿವೃತ್ತಿ ಯೋಧ ಸಂಗಪ್ಪ ರೋಣದ ಅವರಿಗೆ ಅದ್ದೂರಿ ಸ್ವಾಗತ 
WhatsApp Group Join Now
Telegram Group Join Now

ರಾಮದುರ್ಗ: ಭಾರತೀಯ ಸೇನೆಯಲ್ಲಿ 22 ವರ್ಷಗಳ ದೀರ್ಘ ಸೇವೆ ಸಲ್ಲಿಸಿ, ನಿವೃತ್ತಿ ಹೊಂದಿ ಸ್ವ ಗ್ರಾಮಕ್ಕೆ ಆಗಮಿಸಿದ ಅವರಾದಿ ಗ್ರಾಮದ ವೀರ ಯೋಧರಾದ ನಾಯಕ ಶ್ರೀ ಸಂಗಪ್ಪ ರುದ್ರಪ್ಪ ರೋಣದ ಅವರಿಗೆ ಭವ್ಯ ಮೆರವಣಿಗೆಯೊಂದಿಗೆ ವಾದ್ಯ ವೈಭವಗಳೊಂದಿಗೆ ಅದ್ದೂರಿಯಾಗಿ ಸ್ವಾಗತಿಸುವ ಮೂಲಕ ಅಭಿನಂಧನಾ ಸತ್ಕಾರ ಸಮಾರಂಭ ಕಾರ್ಯಕ್ರಮವು ಸುಕ್ಷೇತ್ರ ಅವರಾದಿ ಗ್ರಾಮದ ಶ್ರೀ ಫಲಾಹಾರೇಶ್ವರ ಭಸವ ಚೈತನ್ಯ ಕಲ್ಯಾಣ ಮಂಟಪದಲ್ಲಿ ಶ್ರೀಮಠದ ಪೂಜ್ಯ ಶ್ರೀ ಮ. ನಿ. ಪ್ರ. ಸ್ವ. ಶಿವಮೂರ್ತಿ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮವು ಜರುಗಿತು.

ಸಮಾರಂಭದ ಅಧ್ಯಕ್ಷತೆಯನ್ನು ಬಸಪ್ಪ ಮಲ್ಲಪ್ಪ ರೋಣದ ಹಾಗೂ ಬಸವರಾಜ ಕಾಳಪ್ಪ ಕಮ್ಮಾರ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಶ್ರೀ ಶೇಷಪ್ಪ ಪೋತರಡ್ಡಿ ಅಧ್ಯಕ್ಷರು, ಅಖಿಲ ಕರ್ನಾಟಕ ಸೈನಿಕರ ಸಂಘ ರಾಮದುರ್ಗ, ಎಸ್ ಎಸ್ ಮೇಟಿ, ಎಸ್ ಎಲ್ ಪಲ್ಲೇದ, ಬಸವರಾಜ ಕುಲಕರ್ಣಿ, ಶಿವಪ್ಪ ರೋಣದ, ಮಲ್ಲಿಕಾರ್ಜುನ ಯಲಿಗಾರ, ಬಸಪ್ಪ ಜಲಗೇರಿ, ಬಸಪ್ಪ ಚಿಕ್ಕೊಪ್ಪ, ಚನ್ನಪ್ಪ ತೋಟರ, ಈರಬಸು ಕಡಗದ, ನಿಂಗಪ್ಪ ಬಳಿಗೇರ, ನೀಲಪ್ಪ ಹರನಟ್ಟಿ, ಬಸವಂತಪ್ಪ ಮದಕಟ್ಟಿ, ಮಹಾದೇವಪ್ಪ ಮುದರಡ್ಡಿ, ಮೈಲಾರಪ್ಪ ರೋಣದ, ಕಾಶಪ್ಪ ಪ್ಯಾಟಿ, ಸಂಗಪ್ಪ ಮುದಕನ್ನವರ, ಮುತ್ತಪ್ಪ ಹೂಗಾರ, ಮುತ್ತಪ್ಪ ವಾಘಮೋಡೆ, ಬನಪ್ಪ ದೊಡ್ಡಗಾಣಿಗೇರ, ಸಿದ್ದಪ್ಪ ಕಲ್ಲಾಪೂರ, ಭಗವಂತ ಬಡಿಗೇರ ಉಪಸ್ಥಿತರಿದ್ದರು.

ಹಾಗೂ ವಿಶೇಷ ಆಹ್ವಾನಿತರಾಗಿ ಆತ್ಮೀಯ ಸೈನಿಕರ ಬಳಗ ಮತ್ತು ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರು ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ರಾಮದುರ್ಗ ಇವರು ಉಪಸ್ಥಿತರಿದ್ದರು. ಊರಿನ ಹಿರಿಯರು ಹಾಗೂ ಎಲ್ಲಾ ಗುರು ಹಿರಿಯರು ಹಾಗೂ ಯುವಕ ಮಂಡಳಗಳ, ಸ್ತ್ರೀ ಶಕ್ತಿ ಸಂಘಗಳ ಸದಸ್ಯರು ಪಾಲ್ಗೊಂಡಿದ್ದರು.
ಶಿಕ್ಷಕರಾದ ರಮೇಶ ಮೋಟೆ ಸ್ವಾಗತಿಸಿದರು, ರವಿ ಗಡದೆ ನಿರೂಪಿಸಿದರು.

ವರದಿ: ಕುಮಾರ ಎಂ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!