Ad imageAd image

ಅರ್ಥಪೂರ್ಣವಾಗಿ ಸಂಪನ್ನಗೊಂಡ ಮುತ್ನಾಳ ಮಠದ ಲಿಂಗೈಕ್ಯ ನೀಲಕಂಠ ಶಿವಾಚಾರ್ಯರ ಸ್ವಾಮೀಜಿಯವರ ಪುಣ್ಯರಾಧನೆ

Bharath Vaibhav
ಅರ್ಥಪೂರ್ಣವಾಗಿ ಸಂಪನ್ನಗೊಂಡ ಮುತ್ನಾಳ ಮಠದ ಲಿಂಗೈಕ್ಯ ನೀಲಕಂಠ ಶಿವಾಚಾರ್ಯರ ಸ್ವಾಮೀಜಿಯವರ ಪುಣ್ಯರಾಧನೆ
WhatsApp Group Join Now
Telegram Group Join Now

ಮುತ್ನಾಳ:- ಕೇದಾರ ಪೀಠದ ಶಾಖಾ ಮಠಗಳಾದ ಮುತ್ನಾಳ, ಬೆಟಸೂರ ಮಠಗಳ ಪೀಠಾಧ್ಯಕ್ಷರಾದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿಗಳ ಗರಡಿಯಲ್ಲಿ ಪಳಗಿದ್ದ ಕಿರಿಯ ಶ್ರೀಗಳಾದ ಶ್ರೀ ನೀಲಕಂಠ ಶಿವಾಚಾರ್ಯ ಸ್ವಾಮೀಜಿಯವರು ಲಿಂಗೈಕ್ಯ ರಾದ ನಿಮಿತ್ಯ ಇಂದು ಮುತ್ನಾಳ ಮಠದಲ್ಲಿ ಪೂಜ್ಯ ಶಿವಾನಂದ ಶಿವಾಚಾರ್ಯ ಸ್ವಾಮೀಜಿಗಳ ನೇತೃತ್ವದಲ್ಲಿ ಎಲ್ಲಾ ಸ್ವಾಮೀಜಿಗಳ ಸಮ್ಮುಖದಲ್ಲಿ, ಎಲ್ಲಾ ಭಕ್ತಾದಿಗಳ ಉಪಸ್ಥಿತಿಯಲ್ಲಿ ಪುಣ್ಯರಾಧನೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು

ಈ ಸಂದರ್ಭದಲ್ಲಿ ವಿವಿಧ ಭಾಗಗಳಿಂದ ಆಗಮಿಸಿದ ಸ್ವಾಮೀಜಿಗಳು, ಭಕ್ತಾದಿಗಳು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು, ವಿವಿಧ ಮಠಗಳ ಶ್ರೀಗಳಾದ ಹೂಲಿ, ಕಾರಂಜಿ, ಸಂಗೊಳ್ಳಿ, ತುರುಮುರಿ, ಹುಲಿಕಟ್ಟಿ, ಬಡೆಕೊಳ್ಳ ಮಠ, ಎಂಕೆ ಹುಬ್ಬಳ್ಳಿ ದರ್ಗಾದ ಆರಾಧಕ ಪೀರಾ, ಸವದತ್ತಿ ಹಾಗೂ ಕೇದಾರನಾಥ ದೇವಸ್ಥಾನದ ಮುಖ್ಯ ಅರ್ಚಕರು ಹಾಗೂ ವಿವಿಧ ಶಾಸ್ತ್ರಿಗಳು ಹಾಗೂ ಭಕ್ತಾದಿಗಳು ಬಾಗವಹಿಸಿದ್ದರು. ಮುತ್ನಾಳ ಗ್ರಾಮದ ಸಮಸ್ತ ಹಿರಿಯರ ನೇತೃತ್ವದಲ್ಲಿ ಹನುಮಂತ ದೇವಸ್ಥಾನದಲ್ಲಿ ಶ್ರೀಗಳ ಪುಣ್ಯರಾಧನೆ ನಿಮಿತ್ಯ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು, ಒಟ್ಟಾರೆ ಅರ್ಥಪೂರ್ಣವಾಗಿ ಈ ಪುಣ್ಯರಾಧನೆ ಕಾರ್ಯಕ್ರಮ ಸಂಪನ್ನಗೊಂಡಿತು

ವರದಿ:-  ಬಸವರಾಜು. 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!