ಭಾಲ್ಕಿ :– ತಾಲೂಕಿನ ಖಟಕ ಚಿಂಚೋಳಿ ಗ್ರಾಮದಲ್ಲಿ ಜೈ ಭವಾನಿ ಉತ್ಸವ ಸಮಿತಿ ವತಿಯಿಂದ ನಡೆಯುತ್ತಿರುವ, ನವರಾತ್ರಿ ಉತ್ಸವ ಕಾರ್ಯಕ್ರಮದಲ್ಲಿ, ಸಪ್ತಮಿ ದಿನವಾದ ಇಂದು ವಿಶೇಷ ಪೂಜೆ ದೇವಿಯ ಪೂರಾಣ ರೇವಣಸಿದ್ದಯ್ಯ ಶಾಸ್ತ್ರಿ ನೆರವೆರಿಸಿದರು ನಂತರ ನಡೆದ ಧರ್ಮಸಭೆಯಲ್ಲಿ ಹಲಬಗಾ೯ ಶ್ರೀ ಮಠದ ಪೂಜ್ಯರಾದ ಹಾವಗಿಲಿಂಗ ಶಿವಾಚಾರ್ಯರು ಮಾತನಾಡಿ ಜೀವನದಲ್ಲಿ ಗುರುವಿನ ಮಾರ್ಗದರ್ಶನ, ಸನ್ನಡತೆ ಸಾತ್ವಿಕ ವಿಚಾರ ಆಚಾರ್ಯಗಳಿಂದ ಮನುಷ್ಯನ ಜೀವನ ಸಾರ್ಥಕವಾಗುತ್ತದೆ ಈ ನಿಟ್ಟಿನಲ್ಲಿ ಬೆರೆಯವರ ನಿಂದನೆಗೆ ಒಳಗಾಗದೆ ಸದಾ ಸತ್ಸಂಗ ಸತ್ಕಾರ್ಯ ಮಾಡಬೇಕು ಎಂದು ನುಡಿದರು.
ಅದೆರಿತಿ ಬಿಜೆಪಿ ಯುವ ಮುಖಂಡರು, ಉದ್ಯಮಿ ಚನ್ನಬಸವ ಬಳತೆ ಮಾತನಾಡಿ ಹಿಂದೂ ಸಂಸ್ಕೃತಿ ಹಾಗೂ ಪರಂಪರೆಯಲ್ಲಿ ಪ್ರತಿ ಹಬ್ಬ ಹರಿದಿನಗಳು ತನ್ನದೇ ಆದ ವಿಶೇಷತೆಯನ್ನು ಹೊಂದಿದೆ, ನವರಾತ್ರಿಯಲ್ಲಿ ದೇವಿ ಲೊಕ ಕಲ್ಯಾಣಕ್ಕಾಗಿ ವಿವಿಧ ಅವತಾರಗಳಲ್ಲಿ ಜನಿಸಿ ದೂಷ್ಟರನ್ನು ಸಂಹರಿಸಿದ್ದಾಳೆ, ಶಿಷ್ಟರನ್ನು ರಕ್ಷಿಸಿದ್ದಾಳೆ ಇಂದು ಪ್ರತಿಯೊಬ್ಬರು ತನ್ನಲ್ಲಿನ ಕೆಟ್ಟ ವಿಚಾರಗಳನ್ನು ದೂರಗೊಳಿಸಿ ಸದಾ ಸನ್ಮಾರ್ಗದಲ್ಲಿ ನಡೆಯಬೇಕು ಎಂದು ನುಡಿದರು.
ಬಿಜೆಪಿ ಯುವ ಮುಖಂಡರ ಕೆಡಿ ಗಣೆಶ ಮಾತನಾಡಿದರು.
ವರದಿಗಾರರಾದ ಸಂತೋಷ ಬಿ.ಜಿ. ಪಾಟಿಲ್. ಸೆರಿದಂತೆ ಸಮಿತಿಯ ಅಮರ ಮಾಕಾ ದಿಲಿಪ್ ಸೊನಕಾಂಬಳೆ, ರಾಜು ಚಿದ್ರಿ, ರಾಜಕುಮಾರ್ ಅಷ್ಟುರೆ, ಆನಂದ ರಟಕಲ್ಲೆ , ಪ್ರಮೋದ ಸಜ್ಜನಶೆಟ್ಟಿ, ಅಮರ ತಂಬಾಳೆ, ಅಭಿಷೇಕ್ ನರನಾಳೆ,ಪ್ರಶಾಂತ ಹುಗಾರ,ಬಸವರಾಜ ನಿಣ್ಣೆ ಲೋಕೇಶ್ ಪವಾರ್, ರಾಜು ಜಮಾದರ,ಸಂಗಮೇಶ , ಗುರು ಪಂಡರಗೆ, ಪ್ರಕಾಶ್ ಉಂಬರಗೆ, ಚಂದ್ರಶೇಖರ ರೆಡ್ಡಿ, ಗುರು ಸೆರಿದಂತೆ ಗ್ರಾಮದ ಯುವಕರು, ಮಹಿಳೆಯರು, ಗಣ್ಯರು ಉಪಸ್ಥಿತರಿದ್ದರು.
ವರದಿ:-ಸಂತೋಷ ಬಿಜಿ ಪಾಟೀಲ




