Ad imageAd image

ಕಂದಾಯ ಇಲಾಖೆಯಿಂದ ಕ್ರಾಂತಿಕಾರಿ ನನ್ನ ಭೂಮಿ ಅಭಿಯಾನ 

Bharath Vaibhav
ಕಂದಾಯ ಇಲಾಖೆಯಿಂದ ಕ್ರಾಂತಿಕಾರಿ ನನ್ನ ಭೂಮಿ ಅಭಿಯಾನ 
krishna byre gowda
WhatsApp Group Join Now
Telegram Group Join Now

ದಾವಣಗೆರೆ : ರೈತರು ಮತ್ತು ಸಾರ್ವಜನಿಕರು ಕಂದಾಯ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಿ, ಅವರ ಮನೆ ಬಾಗಿಲಿಗೇ ಸೇವೆ ತಲುಪಿಸುವ ನಿಟ್ಟಿನಲ್ಲಿ ಕಂದಾಯ ಇಲಾಖೆ ಹಲವು ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.

ದಾವಣಗೆರೆಯಲ್ಲಿ ಕಂದಾಯ ಇಲಾಖೆ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲಾಖೆಯಲ್ಲಿ ಆಗಿರುವ ಪ್ರಮುಖ ಸುಧಾರಣೆಗಳನ್ನು ಹಂಚಿಕೊಂಡರು.

‘ನನ್ನ ಭೂಮಿ’ ಮತ್ತು ಪೋಡಿ ಮುಕ್ತ ಅಭಿಯಾನದಡಿ ಕಳೆದ ಒಂದು ವರ್ಷದಲ್ಲಿ ರಾಜ್ಯಾದ್ಯಂತ 1,89,300 ರೈತರ ಜಮೀನುಗಳ ಪೋಡಿ ದುರಸ್ತನ್ನು ಮಾಡಿಕೊಡಲಾಗಿದೆ. ಮುಂದಿನ 3-4 ತಿಂಗಳಲ್ಲಿ ಈ ಸಂಖ್ಯೆಯನ್ನು 2.5 ರಿಂದ 3 ಲಕ್ಷಕ್ಕೆ ಹೆಚ್ಚಿಸುವ ಗುರಿ ಇದೆ. ಜಿಲ್ಲೆಯಲ್ಲಿ ಮೃತಪಟ್ಟವರ ಹೆಸರಿನಲ್ಲಿದ್ದ ಸುಮಾರು 90,000 ಜಮೀನುಗಳ ಪೈಕಿ, ಮಾರ್ಚ್ ಅಂತ್ಯದೊಳಗೆ ಕನಿಷ್ಠ 50% ರಷ್ಟು ಪೌತಿ ಖಾತೆ ಆಂದೋಲನ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ, ಇದಕ್ಕಾಗಿ ರೈತರು ಅರ್ಜಿ ಹಾಕುವಂತಿಲ್ಲ, ಅಧಿಕಾರಿಗಳೇ ರೈತರ ಮನೆ ಬಾಗಿಲಿಗೆ ಹೋಗಿ ಕನಿಷ್ಠ ದಾಖಲಾತಿಗಳನ್ನು ಪಡೆದು ಪೋಡಿ ಖಾತೆ ದುರಸ್ತನ್ನು ಮಾಡಿಕೊಡಲಾಗುತ್ತಿದೆ.

ಈ ಹಿಂದೆ 2013 ರಿಂದ 2018 ರವರೆಗೆ 5840 ಪ್ರಕರಣಗಳು ಹಾಗೂ 2018 ರಿಂದ 2022 ರವರೆಗೆ 8500 ಪ್ರಕರಣ ಪೋಡಿ ಖಾತೆ ದುರಸ್ತನ್ನು ಮಾಡಲಾಗಿದೆ, ನನ್ನ ಅವಧಿಯಲ್ಲಿ ಕೇವಲ ಒಂದೇ ವರ್ಷದಲ್ಲಿ 1,89,300 ರೈತರ ಜಮೀನುಗಳ ಪೋಡಿ ದುರಸ್ತನ್ನು ಮಾಡಲಾಗಿದೆ ಎಂದು ತಿಳಿಸಿದರು.

ತಾಂಡಾ, ಹಟ್ಟಿ ಮತ್ತು ಆಡಿಗಳ ನಿವಾಸಿಗಳು ಸೇರಿದಂತೆ ಕೆಲವು ವಸತಿ ಪ್ರದೇಶಗಳಲ್ಲಿ ಜನರ ಬಳಿ ದಾಖಲೆಗಳು ಇಲ್ಲದೆ ವಾಸಿಸುತ್ತಿದ್ದರು, ಅವುಗಳನ್ನು ಗುರುತಿಸಿ ಹೊಸ ಕಂದಾಯ ಗ್ರಾಮಗಳೆಂದು ಘೋಷಿಸಿ ಅವರಿಗೆಲ್ಲ ಹಕ್ಕುಪತ್ರ ನೀಡಲಾಗುತ್ತಿದೆ. ಕಳೆದ ಎರಡೂವರೆ ವರ್ಷಗಳಲ್ಲಿ ಒಟ್ಟು 2,70,000 ಹಕ್ಕು ಪತ್ರಗಳನ್ನು ಸಿದ್ಧಪಡಿಸಲಾಗಿದೆ.

ಹೊಸಪೇಟೆಯಲ್ಲಿ ಸುಮಾರು 1,11,000 ಕಂದಾಯ ಗ್ರಾಮಗಳ ಹಕ್ಕು ಪತ್ರಗಳನ್ನು ವಿತರಿಸಲಾಗಿತ್ತು. ಫೆಬ್ರವರಿ 14 ರಂದು ಹಾವೇರಿಯಲ್ಲಿ ಸುಮಾರು 1,10,000 ಹಕ್ಕುಪತ್ರಗಳನ್ನು ವಿತರಿಸಲಾಗುವುದು.

ರಾಜ್ಯದಲ್ಲಿ 49 ಲಕ್ಷ ಜಮೀನುಗಳು ಮೃತರ ಹೆಸರಿನಲ್ಲಿವೆ, ಅವುಗಳನ್ನು ಗುರುತಿಸಿ ವಾರಸುದಾರ ಖಾತೆಗೆ ವರ್ಗಾವಣೆ ಮಾಡಲು ಕ್ರಮವಹಿಸಲಾಗಿದೆ, ಅದರಲ್ಲಿ 11 ಲಕ್ಷ ಜಮೀನನ್ನು ಇ-ಪೌತಿ ಅಭಿಯಾನದಡಿ ವಾರಸುದಾರರ ಹೆಸರಿಗೆ ಖಾತೆ ಮಾಡಲು ಕ್ರಮವಹಿಸಲಾಗಿದೆ ಎಂದರು.

 

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!