ಹಟ್ಟಿ ಚಿನ್ನದ ಗಣಿ : ಬೇಸಿಗೆ ಬಂತೆಂದರೆ ಸಾಕು, ಸುಡುಬಿಸಲು ಎಂಥವರಿಗೂ ಸಹ ದಾಹ ಆಗುವುದು ಸರ್ವೆ ಸಾಮಾನ್ಯ ಆದರೆ ಮನುಷ್ಯರಿಗೆ ದಾಹವಾದರೆ ನೀರು ಕೇಳಿ ಕುಡಿಯುವುದು ಸಾಮಾನ್ಯವಾಗಿದೆ ಮತ್ತು ಬೇಸಿಗೆ ಕಾಲದಲ್ಲಿ ನೀರಿನ ಹರವಟ್ಟಿಗೆ ಸಹ ಕೆಲ ಸ್ಥಳಗಳಲ್ಲಿ ಸಂಘ ಸಂಸ್ಥೆಯವರು ಮಾಡುತ್ತಾರೆ
ಜಾನುವಾರುಗಳಿಗೆ ದಾಹವಾದರೆ ನೀರು ಕುಡಿಯಲು ಯಾರನ್ನು ಕೇಳಬೇಕು ಎಲ್ಲಿಗೆ ಹೋಗಬೇಕು ಅನ್ನುವ ಪರಿಸ್ಥಿತಿ ಜಾನುವಾರುಗಳಾಗಿರುತ್ತದೆ, ಜಾನುವಾರಗಳ ಪರಿಸ್ಥಿತಿ ನೋಡಿ ಸ್ನೇಹಿತರ ಬಳಗ ಒಂದು
ಹಟ್ಟಿ ಕ್ಯಾಂಪ್ ಬಸ್ ನಿಲ್ದಾಣದ ಸ್ನೇಹಿತರ ಬಳಗ ಯೋಚಿಸಿ ಮನುಷ್ಯರು ಎಲ್ಲಿಯಾದರೂ ನೀರು ಕುಡಿಯಬಹುದು ಆದರೆ ಜಾನುವಾರುಗಳಿಗೆ ಎಲ್ಲಿ ನೀರು ಕುಡಿಯುತ್ತವೆ ಅದಕ್ಕಾಗಿ ನಾವೇ ಸ್ವಂತ ನಮ್ಮ ಖರ್ಚಿನಲ್ಲಿ ಜಾನುವಾರುಗಳಿಗೆ ನೀರು ಕುಡಿಯಲು ಏನಾದರೂ ವ್ಯವಸ್ಥೆ ಮಾಡಬೇಕೆಂದು ಅಂದುಕೊಂಡು ಈಗಾಗಲೇ ಹೊಸ ಬಸ್ ನಿಲ್ದಾಣದ ಮುಂಭಾಗದಲ್ಲಿ ಹಟ್ಟಿ ಚಿನ್ನದ ಗಣಿ ಕಂಪನಿಯವರು ಮೂರು ನಲ್ಲುಗಳನ್ನು ಹಾಕುವ ಮೂಲಕ ಕುಡಿಯಲು ನೀರಿನ ವ್ಯವಸ್ಥೆ ಮಾಡಿದ್ದಾರೆ, ಅದರ ಪಕ್ಕದಲ್ಲಿ ನಾವು ಜಾನ್ ಊರುಗಳು ಕುಡಿಯಲು ನೀರು ಸಂಗ್ರಹ ಮಾಡುವ ನೀರಿನ ತೊಟ್ಟಿಯನ್ನು ನಿರ್ಮಾಣ ಮಾಡೋಣ ಎಂದು ತೀರ್ಮಾನಿಸಿ ನಿರ್ಮಾಣ ಮಾಡಿ ಜಾನುರ್ಗಳು ಕುಡಿಯಲು ನೀರಿನ ತೊಟ್ಟಿಯಲ್ಲಿ ಪಕ್ಕದಲ್ಲಿರುವ ನಲ್ಲಿಯಿಂದ ಕೊಡಗಳ ಮೂಲಕ ನೀರನ್ನು ಹಾಕುವ ವ್ಯವಸ್ಥೆ ಮಾಡಿ ಜಾನುವಾರುಗಳಿಗೆ ನೀರು ಕುಡಿಯಲು ವ್ಯವಸ್ಥೆ ಮಾಡಿದ್ದಾರೆ ಈ ಕೆಲಸಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದ್ದು ಪ್ರತಿನಿತ್ಯ ಜಾನುವಾರುಗಳು ಆ ತೊಟ್ಟಿಯಿಂದ ನೀರು ಕುಡಿದು ಹೋಗುತ್ತವೆ
ಯಾರ ಸಹಾಯವೂ ಇಲ್ಲದೆ ಸ್ನೇಹಿತರ ಬಳಗದಿಂದ ಇಂತಹ ಒಂದು ಕಾರ್ಯ ಜನರ ಮೆಚ್ಚುಗೆಗೆ ಪಾತ್ರವಾಗಿದೆ