————————————–ದಿಟ್ಟ ಹೋರಾಟ ತೋರಿದರೂ ನಿರಾಸೆಯಿಂದ ನಿರ್ಗಮಿಸಿದ ಗುಜರಾತ್ ಟೈಟನ್ಸ್
————————————–ಪಂದ್ಯ ಶ್ರೇಷ್ಠ: ರೋಹಿತ್ ಶರ್ಮಾ
ಚಂದಿಗಢ: ಐಪಿಎಲ್ ಪಂದ್ಯಾವಳಿಯುದ್ದಕ್ಕೂ ಏರಿಳಿತ ಕಂಡು ನಿರ್ಣಾಯಕ ಘಟ್ಟದಲ್ಲಿ ಬಲಿಷ್ಠವಾಗಿ ಎದುರಾಳಿ ತಂಡಗಳಿಗೆ ತಿರುಗೇಟು ನೀಡಿದ ಮುಂಬೈ ಇಂಡಿಯನ್ಸ್ ಫೈನಲ್ ಪ್ರವೇಶಕ್ಕೆ ಮತ್ತೊಂದು ಹೆಜ್ಜೆ ಮುಂದೂಡಿ ಇಟ್ಟಿದೆ.
ಇಲ್ಲಿನ ಮಹಾರಾಜಾ ಯದುವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ನಡೆದ ಎಲಿಮಿನೇಟರ್ ಪಂದ್ಯದಲ್ಲಿ 20 ರನ್ ಗಳಿಂದ ಗೆದ್ದು ಬೀಗಿದೆ. ಇದರೊಂದಿಗೆ ಮುಂಬೈ ಇಂಡಿಯನ್ಸ್ ಈಗ ಮತ್ತೊಂದು ಫೈನಲ್ ಎಲಿಮಿನೇಟರ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದ್ದು, ಆ ಪಂದ್ಯದಲ್ಲಿ ಗೆದ್ದ ತಂಡ ಫೈನಲ್ ತಲುಪಲಿದೆ. ಅಂದರೆ ಆ ಪಂದ್ಯ ಎರಡನೇ ಸೆಮಿಫೈನಲ್ ಇದ್ದಂತೆ. ಈಗಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕ್ವಾಲಿಪಾಯರ್-1 ರಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿ ಫೈನಲ್ ಹೋಗಿ ಅರಾಮವಾಗಿ ಕೂತಿದೆ.

——-ಸಾಯಿ ಸುದರ್ಶನ್ ವ್ಯರ್ಥ ಹೋರಾಟ
ಇನ್ನು ಪಂದ್ಯಾವಳಿಯುದ್ದಕ್ಕೂ ಉತ್ತಮ ಸಾಧನೆ ತೋರಿದ ಮತ್ತೊಂದು ತಂಡವೆಂದರೆ ಗುಜರಾತ್ ಟೈಟನ್ಸ್. ಆದರೆ ಎಲಿಮಿನೇಟರ್ ಪಂದ್ಯದಲ್ಲಿ ಅದು ನಿರಾಶೆ ಅನುಭವಿಸಿ ಕಪ್ ಕೈಬಟ್ಟು ನಿರ್ಗಮಿಸಿದೆ. ಆದರೆ ಆ ತಂಡ ತೋರಿದ ಪ್ರದರ್ಶನ ಮಾತ್ರ ಕ್ರಿಕೆಟ್ ಅಭಿಮಾನಿಗಳ ಮನ ಗೆದ್ದಿದೆ.
ಕಳೆದ ರಾತ್ರಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ 20 ಓವರುಗಳಲ್ಲಿ 5 ವಿಕೆಟ್ ಗೆ 228 ರನ್ ಗಳ ವಿಶಾಲ ಮೊತ್ತ ಕಲೆ ಹಾಕಿತು. ದೊಡ್ಡ ಮೊತ್ತ ಬೆನ್ನಟ್ಟಿದ ಗುಜರಾತ್ ಟೈಟನ್ಸ್ 6 ವಿಕೆಟ್ ಗೆ 208 ರನ್ ಗಳಿಸಿ 20 ರನ್ ಗಳಿಂದ ಸೋಲೊಪ್ಪಿಕೊಂಡಿತು
ಸ್ಕೋರ್ ವಿವರ:
ಮುಂಬೈ ಇಂಡಿಯನ್ಸ್ 20 ಓವರುಗಳಲ್ಲಿ 5 ವಿಕೆಟ್ ಗೆ 228
ರೋಹಿತ್ ಶರ್ಮಾ 81 ( 50 ಎಸೆತ, 9 ಬೌಂಡರಿ, 4 ಸಿಕ್ಸರ್, ಬ್ರಿಸ್ಟೋವ್ 47 ( 22 ಎಸೆತ, 4 ಬೌಂಡರಿ, 3 ಸಿಕ್ಸರ್)
ಸೂರ್ಯಕುಮಾರ್ ಯಾದವ್ 33 ( 20 ಎಸೆತ, 1 ಬೌಂಡರಿ, 3 ಸಿಕ್ಸರ್) ತಿಲಕ್ ವರ್ಮಾ 25 ( 11 ಎಸೆತ, 3 ಸಿಕ್ಸರ್)
ಸಾಯಿ ಕಿಶೋರ್ 42 ಕ್ಕೆ 2, ಪ್ರಸಿದ್ದ 53 ಕ್ಕೆ 2
ಗುಜರಾತ್ ಟೈಟನ್ಸ್ 20 ಓವರುಗಳಲ್ಲಿ 6 ವಿಕೆಟ್ ಗೆ 208
ಸಾಯಿ ಸುದರ್ಶನ್ 80 (49 ಎಸೆತ, 10 ಬೌಂಡರಿ, 1 ಸಿಕ್ಸರ್, ವಾಷಿಂಗ್ಟನ್ ಸುಂದರ್ 48 ( 24 ಎಸೆತ, 5 ಬೌಂಡರಿ, 3 ಸಿಕ್ಸರ್, ಟ್ರೆಂಟ್ ಬೋಲ್ಟ್ 56 ಕ್ಕೆ 2, ಜಸ್ಪ್ರಿತ್ ಬೂಮ್ರಾ 27 ಕ್ಕೆ 1




