Ad imageAd image

ಡೆಂಗ್ಯು ಶಂಕೆ, ಜ್ವರದಿಂದ ಬಳಲುತ್ತಿದ್ದ ರಿಪ್ಪನ್‌ಪೇಟೆಯ ಮಹಿಳೆ, ಶಿರಾಳಕೊಪ್ಪದ 9 ತಿಂಗಳ ಮಗು ಸಾವು

Bharath Vaibhav
ಡೆಂಗ್ಯು ಶಂಕೆ, ಜ್ವರದಿಂದ ಬಳಲುತ್ತಿದ್ದ ರಿಪ್ಪನ್‌ಪೇಟೆಯ ಮಹಿಳೆ, ಶಿರಾಳಕೊಪ್ಪದ 9 ತಿಂಗಳ ಮಗು ಸಾವು
WhatsApp Group Join Now
Telegram Group Join Now

ಡೆಂಗ್ಯು ಶಂಕೆ, ಜ್ವರದಿಂದ ಬಳಲುತ್ತಿದ್ದ ರಿಪ್ಪನ್‌ಪೇಟೆಯ ಮಹಿಳೆ, ಶಿರಾಳಕೊಪ್ಪದ 9 ತಿಂಗಳ ಮಗು ಸಾವು

July 10, 2024

ಡೆಂಗ್ಯು ಶಂಕೆ, ಜ್ವರದಿಂದ ಬಳಲುತ್ತಿದ್ದ ರಿಪ್ಪನ್‌ಪೇಟೆಯ ಮಹಿಳೆ, ಶಿರಾಳಕೊಪ್ಪದ 9 ತಿಂಗಳ ಮಗು ಸಾವು

SHIVAMOGGA NEWS | 10 JULY 2024

SHIMOGA : ಶಂಕಿತ ಡೆಂಗ್ಯುಗೆ (Dengue Suspect) ಜಿಲ್ಲೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಡೆಂಗ್ಯುಗೆ ಬಲಿಯಾದವರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. ಇದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.

ರಿಪ್ಪನ್‌ಪೇಟೆಯ ಮಹಿಳೆ ಸಾವು

ಶಂಕಿತ ಡೆಂಗೆಗೆ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ನಿವಾಸಿ ರಶ್ಮಿ ಆರ್. ನಾಯಕ್ (42) . ಮಂಗಳವಾರ ಮೃತಪಟ್ಟಿದ್ದಾರೆ. ಕಳೆದ 15 ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದರು. ಆಸ್ಪತ್ರೆಯಲ್ಲಿ ದಾಖಲಾಗಿದ್ದ ರಶ್ಮಿ ಆರ್‌.ನಾಯಕ್‌ ಅವರು ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.

ಮೃತ 9 ತಿಂಗಳ ಮಗುವಿಗೆ ಡೆಂಗ್ಯು ಶಂಕೆ

ಶಿರಾಳಕೊಪ್ಪ ಪಟ್ಟಣದ ಕಾನುಕೇರಿಯ 9 ತಿಂಗಳ ಮಗು ಶಂಕಿತ ಡೆಂಗೆ ಜ್ವರದಿಂದ ಮೃತಪಟ್ಟಿದೆ. ಮಗುವಿಗೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಶಾಸಕ ಬಿ.ವೈ.ವಿಜಯೇಂದ್ರ ಅವರು ಶಿರಾಳಕೊಪ್ಪದಲ್ಲಿ ಮಗುವಿನ ಮನೆಗೆ ತೆರಳಿ ಕುಟುಂಬದವರಿಗೆ ಸಾಂತ್ವನ ಹೇಳಿದರು.

ಜಿಲ್ಲೆಯಲ್ಲಿ ಮುಂದುವರೆದ ಡೆಂಗ್ಯು ಭೀತಿ

ಶಿವಮೊಗ್ಗ ಜಿಲ್ಲೆಯಲ್ಲಿ ಡೆಂಗ್ಯು ಭೀತಿ ಆವರಿಸಿದೆ. ಈವರೆಗೂ ಜಿಲ್ಲೆಯಲ್ಲಿ ಪತ್ತೆಯಾದ ಒಟ್ಟು ಡೆಂಗ್ಯು ಪ್ರಕರಣಗಳ ಸಂಖ್ಯೆ 308. ಸದ್ಯ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಸಕ್ರಿಯ ಪ್ರಕರಣಗಳು 14 ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿಸಲಾಗಿದೆ.

ವರದಿ: ಮಂಜುನಾಥ ರಜಪೂತ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!