ಬೆಂಗಳೂರು: ಅಕ್ಟೋಬರ್.2 ರಂದು ತೆರೆಕಂಡು ದೇಶದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿರುವ ಕನ್ನಡದ ಹೆಮ್ಮೆಯ ಕಾಂತಾರ ಚಾಪ್ಟರ್ ೧ (Kantara chapter 1) ಬಾಕ್ಸ್ ಆಫೀಸ್ ನಲ್ಲಿ (Box office) ಕಮಾಲ್ ಮಾಡಿದೆ. ಕಾಂತಾರ 1 ಈಗಾಗಲೇ ವಿಶ್ವದಾದ್ಯಂತ 500 ಕೋಟಿ ಕಲೆಕ್ಷನ್ ಮಾಡಿದ್ದು ಹೊಸ ಇತಿಹಾಸ ನಿರ್ಮಿಸಿದೆ.
ಈ ಮಧ್ಯೆ ರಿಷಬ್ ಶೆಟ್ಟಿ (Rishab shetty) ಅಮಿತಾಬ್ ಬಚ್ಚನ್ (Amitabh bacchan) ಜೊತೆ ಕಾಣಿಸಿಕೊಂಡಿದ್ದಾರೆ.
ಈ ಮಧ್ಯೆ ರಿಷಬ್ ಶೆಟ್ಟಿ ಭಾರತೀಯ ಚಿತ್ರರಂಗದ ಬಿಗ್ ಬಿ ಎಂದೇ ಕರೆಸಿಕೊಳ್ಳುವ ಅಮಿತಾಭ್ ಬಚ್ಚನ್ (Amitabh Bachchan) ಅವರ ಜೊತೆ ಕಾಣಿಸಿಕೊಂಡಿದ್ದಾರೆ. ಹೌದು ಇಬ್ಬರು ಕಲಾವಿದರು ಒಟ್ಟಿಗೆ ಇರುವ ಫೋಟೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಹಿಂದಿ ಕಿರುತೆರೆಯ ಅತ್ಯಂತ ಜನಪ್ರಿಯ ಕಾರ್ಯಕ್ರಮ, ಬಿಗ್ ಬಿ ಅಮಿತಾಭ್ ಬಚ್ಚನ್ ನಡೆಸಿಕೊಡುವ ಕ್ವಿಝ್ ರಿಯಾಲಿಟಿ ಶೋ ‘ಕೌನ್ ಬನೇಗಾ ಕರೋಡ್‌ಪತಿ’ (Kaun Banega Crorepati) ಶೋ ನಲ್ಲಿ ರಿಷಬ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಸದ್ಯ 17ನೇ ಸೀಸನ್ ನಡೆಯುತ್ತಿದ್ದು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ರಿಷಬ್ ಶೆಟ್ಟಿ ಭಾಗವಹಿಸಿದ್ದಾರೆ ಎನ್ನಲಾಗಿದೆ.




