
ಧುರಂದರ್-೨ ಚಿತ್ರದ ಹವಾ ಇಂದು ಜಗತ್ತಿನಾದ್ಯಂತ ಇದ್ದು, ಧುರಂದರ್-೨ ಗಳಿಕೆ ದಾಖಲೆಯನ್ನೇ ಮಾಡಿದೆ. ಏತನ್ಮಧ್ಯೆ ಈಚೆಗೆ ಧುರಂದರ್-೨ ಕುರಿತು ರಮ್ಯ ತಮ್ಮ ಅಭಿಪ್ರಾಯ ಹಾಗೂ ಟೀಕೆಗಳನ್ನು ಕೂಡ ಮಾಡಿದ್ದರು.
ಇದೀಗ ಮತ್ತೋರ್ವ ನಟಿ, ಮಾಡೆಲ್ ರೀಟಾ ಪಡ್ಡಾ ಕೂಡ ಧುರಂದರ್-೨ ಚಿತ್ರದ ಬಗ್ಗೆ ಟೀಕೆಗಳನ್ನು ಮಾಡಿ ಸೋಸಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ಹಂಚಿಕೊAಡಿದ್ದರು.
ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಿನ ಹಿಂಬಾಲಕರನ್ನು ಹೊಂದಿರುವ ರೀಟಾ ಪಡ್ಡಾ ಚಿತ್ರದ ಕುರಿತು ಟೀಕೆಗಳನ್ನು ಮಾಡಿ ಸಾಕಷ್ಟು ವಿರೋಧ ಕಮೆಂಟ್ಗಳನ್ನು ಎದುರಿಸಿದ್ದಾರೆ. ಆದಾಗ್ಯೂ ಧುರಂದರ್-೨ ಕುರಿತು ಟೀಕೆಗಳನ್ನು ಮಾಡಿರುವ ರೀಟಾ ಪಡ್ಡಾ ದಿನ ಬೆಳಗಾಗುವುದರಲ್ಲಿ ಹೆಡ್ಲೈನ್ ಆಗಿದ್ದಾರೆ.
ಯಾರು ಈ ರೀಟಾ ಪಡ್ಡಾ?: ಸೈಯ್ಯಾರಾ ಬಾಲಿವಡ್ ಚಿತ್ರದಲ್ಲಿ ನಟಿಸಿರುವ ಹಿರೋಯಿನ್ ಅನೀತ್ ಪಡ್ಡಾ ಅವರ ಸಹೋದರಿಯೇ ಈ ರೀಟಾ ಪಡ್ಡಾ.




