ಸದ್ವಿಚಾರ ಸದಾಚಾರ ಸಚ್ಚಿಂತನೆಗಳನ್ನು ಹೊಂದಿ ದೇವರು ಧರ್ಮದಲ್ಲಿ ನಂಬಿಕೆ ಇಟ್ಟು ನಡೆಸುವ ಎಲ್ಲ ಪೂಜೆ ಪುನಸ್ಕಾರ ಧಾರ್ಮಿಕ ಆಚರಣೆಗಳಿಂದ ಜೀವನದಲ್ಲಿ ಸತ್ಫಲಗಳು ಸಿದ್ಧಿ ಫಲಸುತ್ತವೆ ಎಂದು ದೊಡವಾಡ ಹಿರೇಮಠದ ಶ್ರೀ ಜಡಿಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಷ್ಟ ಬೈಲಹೊಂಗಲ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ದೊಡವಾಡ ವಲಯ ಶ್ರೀ ರಾಮಲಿಂಗೇಶ್ವರ ದೇವಸ್ಥಾನ ಕಮೀಟಿಯವರುಗಳ ಸಹಯೋಗದಲ್ಲಿ ಶ್ರೀ ರಾಮಲಿಂಗೇಶ್ವರ ಸಭಾ ಭವನದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ ನಾಯ್ಕ ಮಾತನಾಡಿ ಆಡು ಮುಟ್ಟದ ಸೊಪ್ಪಿಲ್ಲ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮಾಡಿದಿರುವ ಸಮಾಜ ಸೇವಾ ಕಾರ್ಯುಗಳಿಲ್ಲ ಹೀಗಾಗಿ ಸ್ವ ಸಹಾಯ ಸಂಘಗಳ ಮೂಲಕ ಲಕ್ಷಾಂತರ ಜನರನ್ನು ಆರ್ಥಿಕ ಸ್ವಾವಲಂಬಿಗಳನ್ನಾಗಿ ಮಾಡಲಾಗಿದೆ ಕೆರೆ ಅಭಿವೃದ್ಧಿ ಯೋಜನೆಯಡಿ ರಾಜ್ಯಾದ್ಯಂತ ಸಾವಿರಾರು ಕೆರೆಗಳನ್ನು ದತ್ತು ಪಡೆದು ಅಭಿವೃದ್ಧಿ ಪಡಿಸಲಾಗಿದೆ.
ಬಡತನ ಮತ್ತು ದುಶ್ಚಟ ಮುಕ್ತ ಸಮಾಜ ನಿರ್ಮಾಣವೆ ಸಂಘದ ಪರಮೋದ್ದೇಶ ಎಂದು ಹೇಳಿದರು. ಶ್ರೀ ಸಂಗಮೇಶ್ವರ ಪಿಕೆಪಿಎಸ್ ಅಧ್ಯಕ್ಷ ನಿಂಗಪ್ಪ ಚೌಡಣ್ಣವರ ಮಾತನಾಡಿದರು. ದಂಪತಿ ಸಮೇತ ಪೂಜಾ ವೃತಾಚರಣೆಯಲ್ಲಿ ಅನೇಕರು ಪಾಲ್ಗೊಂಡಿದ್ದರು. ಶ್ರೀ ರಾಮಲಿಂಗೇಶ್ವರ ದೇವಸ್ಥಾನ ಕಮೀಟಿ ಅಧ್ಯಕ್ಷ ಮಲ್ಲಪ್ಪ ಅಂದಾನಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು.
ಗ್ರಾಪಂ ಅಧ್ಯಕ್ಷೆ ಸಂಗೀತಾ ಚಂದರಗಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಶೋಭಾ ಮಡಿವಾಳರ ಪ್ರಮುಖರಾದ ಮಲ್ಲಪ್ಪ ಯರಿಕಿತ್ತೂರ, ಬಸವಂತಪ್ಪ ಜಮನೂರ, ಬಸವರಾಜ ಬುಡರಕಟ್ಟಿ, ವಿಜಯಲಕ್ಷ್ಮಿ ಸಂಗೊಳ್ಳಿ, ಸೋಮನಿಂಗಪ್ಪ ಚೌಡಣ್ಣವರ, ಕೃಷಿ ಮೇಲ್ವಿಚಾರಕ ರವಿ. ಆರ್.ಜಿ.ತಾಲೂಕು ಯೋಜನಾಧಿಕಾರಿ ವಿಜಯಕುಮಾರ ಸ್ವಾಗತಿಸಿದರು. ಆರತಿ ಯಲಿಗಾರ ಪ್ರಾರ್ಥಿಸಿದರು. ಪರಶುರಾಮ ಬನಸೋಡೆ ನಿರೂಪಿಸಿದರು. ಬಾಹುಬಲಿ ವಂದಿಸಿದರು ಒಕ್ಕೂಟದ ಸದಸ್ಯರು, ಸೇವಾ ಪ್ರತಿನಿಧಿಗಳು ಮಹಿಳೆಯರು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು ಕಾರ್ಯಕ್ರಮದ ಬಳಿಕ ಅನ್ನು ಸಂತರ್ಪಣೆ ನಡೆಯಿತು.
ದೊಡವಾಡದ ಶ್ರೀ ರಾಮಲಿಂಗೇಶ್ವರ ಸಭಾ ಭವನದಲ್ಲಿ ಶ್ರೀ ಸತ್ಯನಾರಾಯಣ ಪೂಜೆಗೆ ಶ್ರೀ ಜಡಿಸಿದ್ದೇಶ್ವರ ಸ್ವಾಮೀಜಿಗಳು ಮತ್ತು ಜಿಲ್ಲಾ ನಿರ್ದೇಶಕ ಸತೀಶ ನಾಯ್ಕ ಸೇರಿ ಉದ್ಘಾಟಿಸಿದರು.
ವರದಿ: ದುಂಡಪ್ಪ ಹೂಲಿ




