————————————–ಅಪಾಯದ ಅಂಚಿನಲ್ಲಿ ಚಿಕ್ಕಹಟ್ಟಿಹೊಳೆ ವೀರಭದ್ರೇಶ್ವರ ದೇವಸ್ಥಾನ…!
ಖಾನಾಪುರ : ಕಿತ್ತೂರು ಕರ್ನಾಟಕದ ಜೀವನದಿ ಮಲಪ್ರಭಾ ನದಿಯು ಉಕ್ಕಿ ಹರಿಯುತ್ತಿದ್ದು ಪಶ್ಚಿಮ ಘಟ್ಟಗಳಲ್ಲಿ ಧಾರಾಕಾರ ಮಳೆಯಿಂದಾಗಿ ಖಾನಾಪುರ ತಾಲ್ಲೂಕಿನ ಕೊನೆ ಗಡಿ ಗ್ರಾಮ ಹಾಗೂ ಕರ್ನಾಟಕ ಸರ್ಕಾರದ ಪ್ರಭಾವಿ ಸಚಿವರು ಲಕ್ಸ್ಮಿ ಹೆಬ್ಬಾಳ್ಕರ್ ರವರ ಹುಟ್ಟೂರು ಚಿಕ್ಕ ಹಟ್ಟಿ ಹೊಳೆಯ ಬ್ರಿಡ್ಜ್ ಮುಳುಗಡೆಯಾಗಿ ಮಲಪ್ರಭಾ ನದಿಯ ಹರಿವಿನ ತೀವ್ರತೆಯು ತುಂಬಾನೇ ಜಾಸ್ತಿಯಾಗಿದೆ.

ಇನ್ನೊಂದು ಕಡೆ ಮಲಪ್ರಭಾ ನದಿಯ ತೀವ್ರತೆಗೆ ಎಡ ದಂಡೆಯಲ್ಲಿರುವ ಐತಿಹಾಸಿಕ ವೀರಭದ್ರೇಶ್ವರನ ದೇವಸ್ಥಾನ ವು ನದಿಗೆ ಸೂಕ್ತ ತಡೆಗೋಡೆ ಇಲ್ಲದ ಕಾರಣ ಅಪಾಯದ ಅಂಚಿನಲ್ಲಿದ್ದು ಕೊಚ್ಚಿ ಹೋಗುವ ಆತಂಕ ಎದುರಾಗಿದೆ. ಇನ್ನೊಂದು ಕಡೆ ಬ್ರಿಡ್ಜ್ ಸಮೀಪ ಎಡದಂಡೆಯಲ್ಲೇ ಇರುವ ವಿದ್ಯುತ್ ಪರಿವರ್ತಕ ಹಾಗೂ ವಿದ್ಯುತ್ ಕಂಬಗಳು ಇನ್ನೇನು ಕೆಲವೇ ದಿನಗಳಲ್ಲಿ ನದಿಗೆ ಬೀಳುವ ಪರಿಸ್ಥಿತಿ ಎದುರಾಗಿದೆ.

ಇಷ್ಟಾದರೂ ಸಹ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈ ಬಗ್ಗೆ ಮುನ್ನೆಚ್ಚರಿಕೆ ಕ್ರಮ ವಹಿಸದೇ ಇರುವುದು ತುಂಬಾ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಆದ್ದರಿಂದ ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ಭೇಟಿಕೊಟ್ಟು ಸಮಗ್ರವಾಗಿ ವರದಿ ತಯಾರಿಸಿ ಸ್ಥಳೀಯರ ಅಭಿಪ್ರಾಯ ಸಂಗ್ರಹ ಮಾಡಿ ಬೆಳಕು ಚೆಲ್ಲುವ ಕೆಲಸ ಮಾಡಿದ್ದಾರೆ.
ವರದಿ: ಬಸವರಾಜು




