ಅಥಣಿ:ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅಥಣಿ ತಾಲೂಕಾ ಸಂಚಾಲಕರು, ದಲಿತ ಸಮುದಾಯದ ಮುಖಂಡರಾದ ರವಿ ಕಾಂಬಳೆ ಅವರ ಮಾಲೀಕತ್ವದಲ್ಲಿನ ಜತ್ತ ರಸ್ತೆಯಲ್ಲಿ ಪ್ರಾರಂಭಿಸಲಾದ ನೂತನ ಆರ್.ಕೆ. ಎಂಟರ್‌ಪ್ರೈಸೀಸ್ ಅನ್ನು ಕಾಂಗ್ರೆಸ್ ಯುವ ಮುಖಂಡರಾದ ಚಿದಾನಂದ ಲ. ಸವದಿ ಅವರು ನ. 30ರಂದು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಚಿದಾನಂದ ಸವದಿ ಅವರು, ರವಿ ಕಾಂಬಳೆ ಅವರು ಸರಳ ಹಾಗೂ ಸ್ನೇಹ ಜೀವಿ ವ್ಯಕ್ತಿಯಾಗಿದ್ದಾರೆ. ಬದುಕಿನಲ್ಲಿ ತುಂಬಾ ಶ್ರಮಪಟ್ಟು ಮೇಲೆ ಬಂದಿದ್ದಾರೆ. ಇವರು ನೂತನವಾಗಿ ಪ್ರಾರಂಭಿಸಿರುವ ಉದ್ಯಮವು ಯಶಸ್ವಿಯಾಗಿ ಮುನ್ನಡೆಯಲಿ ಎಂದು ಶುಭ ಹಾರೈಸುತ್ತೇನೆ.

ಲಿಖಿತ ಪರೀಕ್ಷೆ ಕರಪತ್ರ ಬಿಡುಗಡೆ:ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ರಿ) ಅಥಣಿ ಘಟಕದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ 69ನೇ ಪರಿನಿರ್ವಾಣ ದಿನದ ಪ್ರಯುಕ್ತ 4ನೇ ವರ್ಷ ಅಥಣಿಯಲ್ಲಿ ದಿ. 28-12-2025ರಂದು ಹಮ್ಮಿಕೊಂಡಿರುವ ರಾಜ್ಯಮಟ್ಟದ ಲಿಖಿತ ಪರೀಕ್ಷೆಯ ಕಾರ್ಯಕ್ರಮದ ಕುರಿತ ಕರಪತ್ರಗಳನ್ನು ಬಿಡುಗಡೆಯನ್ನು ಪೀಪಲ್ ಎಜುಕೇಶನ್ ಸೊಸೈಟಿ ಆಫ್ ಇಂಡಿಯಾ ಕಾರ್ಯದರ್ಶಿ ಹಾಗೂ ಉದ್ಯಮಿ, ಗೂಗವಾಡದ ಬುದ್ಧ ವಿಹಾರ ಟ್ರಸ್ಟ್ ಕಮಿಟಿ ಅಧ್ಯಕ್ಷ ಸಿ.ಆರ್. ಸಾಂಗ್ಲಿಕರ್ ಅವರು ಕರಪತ್ರ ಬಿಡುಗಡೆ
ಮಾಡಿದರು.
ವಿದ್ಯಾರ್ಥಿಗಳಿಗೆ ವಿವಿಧ ವಿಷಯಗಳ ಮೇಲೆ ಸಂತ್ರಾಮ ಪದವಿ ಪೂರ್ವ ಕಾಲೇಜು, ಜತ್ತ ರೋಡ್ ಅಥಣಿಯಲ್ಲಿ ಡಿ. 28ರಂದು ಲಿಖಿತ ಪರೀಕ್ಷೆ ನಡೆಸಲಾಗುತ್ತಿದೆ. ಡಿ. 25ರಂದು ಹೆಸರು ನೋಂದಾಯಿಸಲು ಕೊನೆಯ ದಿನವಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸಿ ಟಾಪ್ ಮೂರು ಸ್ಥಾನ ಗಳಿಸುವ ವಿದ್ಯಾರ್ಥಿಗಳಿಗೆ ನಗದು ಬಹುಮಾನದೊಂದಿಗೆ ಗೌರವ ಪುರಸ್ಕಾರ ನೀಡಲಾಗುವುದು ಎಂದು ಸಂಘಟಕರು ತಿಳಿಸಿದರು

ಈ ಸಂದರ್ಭದಲ್ಲಿ ರಾಜು ಫರ್ನಾಕರ, ಮಚೇಂದ್ರ ಖಾಂಡೇಕರ್, ಭರತ ಮಾನೆ, ಸುನಿಲ ವಾಘಮೋರೆ, ಪಾಂಡು ಕಾಂಬಳೆ, ಅಶೋಕ ಚೌಗಲಾ, ಮಹಾಂತೇಶ ಬಾಡಗಿ, ಸಂಜಯ ಕಾಂಬಳೆ, ಚಂದ್ರಕಾಂತ ಬನ್ಸೋಡೆ, ಸುಭಾಸ ಕಾಂಬಳೆ, ಮಹಾಂತೇಶ ಬನ್ಸೋಡೆ, ಅಥಣಿಯ ಕೃಪಾ ಆರೋಗ್ಯ ಮತ್ತು ಸಮಾಜ ಸೇವಾ ಸಂಸ್ಥೆಯ ಸಂಸ್ಥಾಪಕರಾದ ನಿಜಪ್ಪಾ ಹಿರೇಮನಿ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.
ವರದಿ : ರಾಜು ವಾಘಮಾರೆ




