ಅಥಣಿ : ರಸ್ತೆ ಅಪಘಾತದಲ್ಲಿ ಗ್ರಾಮ ಪಂಚಾಯತ್ ಪಿ ಡಿ ಓ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಅನಂತಪುರ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಅನಂತಪುರ ಗ್ರಾಮದಿಂದ ತಾಂವಶಿ ಮಾರ್ಗವಾಗಿ ಸಾಗುವ ವೇಳೆ ಮಂಗಳವಾರ ಸಾಯಂಕಾಲ 5:30 ರ ಸುಮಾರಿಗೆ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ನಾಗನೂರ ಪಿ ಎ ಗ್ರಾಮದ ಅಶೋಕ ಸನದಿ (48) ಮೃತ ಪಟ್ಟಿದ್ದಾರೆ. ಇವರು ಅಥಣಿ ತಾಲೂಕಿನ ಜಂಬಗಿ, ಸಂಬರಗಿ, ಖಾನಾಪುರ ತಾಲೂಕು, ಮತ್ತೆ ಮುಂಬಡ್ತಿ ಯಾಗಿ ಮತ್ತೆ ಅಥಣಿ ತಾಲೂಕಿನ ಮುರಗುಂಡಿ ಗ್ರಾಮ ಪಂಚಾಯತ್ ದಲ್ಲಿ ಪಿ ಡಿ ಓ ಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಅವರಿಗೆ ಅಪಾರ ಬಂಧು ಬಳಗ ಇದ್ದು ಅಶೋಕ ಸನದಿ ಅವರ ಆತ್ಮಕ್ಕೆ ಶಾಂತಿ ಸಿಕ್ಕು, ಅವರ ಪರಿವಾರಕ್ಕೆ ತುಂಬಲಾರದ ದುಃಖವನ್ನು ಭರಿಸಲು ಭಗವಂತ ಶಕ್ತಿ ಕೊಡಲಿ ಎಂದು ಬೇಡಿಕೊಳ್ಳೋಣ.
ರಸ್ತೆ ಅಪಘಾತ: ಪಿ.ಡಿ.ಓ ಸಾವು




