Ad imageAd image

ಜೋಳ ಖರೀದಿಗಾಗಿ ರಸ್ತೆ ತಡೆ ಪ್ರಯಾಣಿಕರು ಪರದಾಟ!

Bharath Vaibhav
ಜೋಳ ಖರೀದಿಗಾಗಿ ರಸ್ತೆ ತಡೆ ಪ್ರಯಾಣಿಕರು ಪರದಾಟ!
WhatsApp Group Join Now
Telegram Group Join Now

ಸಿಂಧನೂರು : ನಗರದಲ್ಲಿ ಮೇ 23 ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ರೈತರು ಬೆಳೆದ ಜೋಳವನ್ನು ಖರೀದಿ ಕೇಂದ್ರದಲ್ಲಿ ಖರೀದಿ ಮಾಡಿಲ್ಲವೆಂದು ವಿರೋಧಿಸಿ ರೈತ ಮುಖಂಡ ರಾಜ್ಯ ಘಟಕ ಪ್ರಧಾನ ಕಾರ್ಯದರ್ಶಿ ಅಮೀನ್ ಪಾಶ ದಿದ್ದಗಿ ತಹಸಿಲ್ ಕಛೇರಿ ಮುಖ್ಯ ದ್ವಾರ ಬಂದ್ ಮಾಡಿ ಅನಿರ್ದಿಷ್ಟ ಧರಣಿ ಹಮ್ಮಿಕೊಂಡರು.

ನಂತರ ಅವರು ಮಾತನಾಡಿ ಸಹಕಾರ ಸಂಘದಲ್ಲಿ ನೋಂದಾಣಿ ಮಾಡಿ ಜೋಳ ಖರೀದಿಸಿ ಲಾರಿ ಮೂಲಕ ವಡ್ಡರಟ್ಟಿಯಲ್ಲಿರುವ ಕೇಂದ್ರ ಸರ್ಕಾರದ ಗೋಧಾಮಿಗೆ ಹೋದರೆ ಜೋಳದಲ್ಲಿ ಹುಳುಗಳು ಇವೆ ಎಂದು ಲಾರಿ ವಾಪಾಸ್ ಕಳುಹಿಸಿ ಹಿನ್ನೆಲೆ ಜೋಳ ಖರೀದಿ ಕೇಂದ್ರದಿಂದ ಜೋಳ ಖರೀದಿಯಲ್ಲಿ ರೈತರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಅನೇಕ ಸಾರಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡರು ಕೂಡ ಸ್ಪಂದನೆ ನೀಡುತ್ತಿಲ್ಲ ಜೋಳ ಕೊಯ್ಲಿ ಮಾಡಿ ಸುಮಾರು 5 ತಿಂಗಳ ಆದರೂ ಖರೀದಿ ಕೇಂದ್ರಗಳಲ್ಲಿ ಖರೀದಿ ಮಾಡದೆ ಇದ್ದಲ್ಲಿ ಜೋಳಕ್ಕೆ ಹುಳು ಬೀಳುತ್ತೇವೆ ಮಾರುಕಟ್ಟೆಯಲ್ಲಿ ಕೂಡ ರೈತರ ಜೋಳ ಮಾರಾಟವಾಗುವುದಿಲ್ಲಾ ಎಂದು ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಹಂಚಿನಾಳ. ರೈತ ಮುಖಂಡ ಬಸವರಾಜ್ ಗೊಂಡಿಹಾಳ ಆಕ್ರೋಶ ವ್ಯಕ್ತಪಡಿಸಿದರು.

ಜೋಳ ಖರೀದಿಗಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಗಳು ಹಮ್ಮಿಕೊಂಡಿದ್ದ ಧರಣಿ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಬರದ ಹಿನ್ನೆಲೆ ನೂರಾರು ಸಂಖ್ಯೆಯ ರೈತರು ಮಹಾತ್ಮ ಗಾಂಧಿ ಸರ್ಕಲ್ ನಲ್ಲಿ ದಿಢೀರ್ನೆ ರಸ್ತೆ ತಡೆ ನಡೆಸಿದ ಪರಿಣಾಮ ಪ್ರಯಾಣಿಕರು ಸುಡು ಬಿಸಿಲಿನಲ್ಲಿ ಸಂಕಷ್ಟ ಪಡುವಂತಯ್ತು ಕುಷ್ಟಗಿ ಗಂಗಾವತಿ ರಾಯಚೂರು ರಸ್ತೆಗಳು ಟ್ರಾಫಿಕ್ ಜಾಮ್ ಉಂಟಾಯಿತ್ತು.

ಈ ಸಂದರ್ಭದಲ್ಲಿ ರಾಜ್ಯ ಘಟಕ ಪ್ರಧಾನ ಕಾರ್ಯದರ್ಶಿ ಅಮೀನ್ ಪಾಷಾ ದಿದ್ದಗಿ. ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಹಂಚಿನಾಳ. ಎಂ. ಗಂಗಾಧರ್. ಬಸವರಾಜ ಗೊಂಡಿಹಾಳ. ಚಿಟ್ಟಿಬಾಬು. ಹುಸೇನಪ್ಪ ನಾಯಕ್. ಬಸವರಾಜ್ ಗೌಡ. ನಾಗನಗೌಡ. ರಾಜಶೇಖರ್ ಗೌಡ ಇನ್ನು ಅನೇಕರಿದ್ದರು ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆದಂತೆ ಡಿವೈಎಸ್ಪಿ. ಬಿಎಸ್ ತಳವಾರ್. ಪಿ ಐ. ದುರ್ಗಪ್ಪ. ಸೋಮನಗೌಡ ಹಾಗೂ ಸಿಬ್ಬಂದಿಗಳು ಕ್ರಮ ವಹಿಸಿದ್ದರು.

ವರದಿ : ಬಸವರಾಜ ಬುಕ್ಕನಹಟ್ಟಿ

WhatsApp Group Join Now
Telegram Group Join Now
Share This Article
error: Content is protected !!