ಕಂದಗಲ್ಲ : ಜನರಿಗೆ ಅನುಕೊಲ ವಾಗಲೆಂದು ಸರಕಾರ ಏನೆಲ್ಲಾ ಸೌಲಭ್ಯ ಗಳನ್ನು ಒದಗಿಸುತ್ತಿದೆ ಆದರೆ ಕಂದಗಲ್ಲ ಗ್ರಾಮಕ್ಕೆ ಮಾತ್ರ ಸರಕಾರದ ಸೌಲಭ್ಯಗಳು ಗಗನಕುಸುಮ.
ಗ್ರಾಮವನ್ನು ನಗರಗಳಿಗೆ ಸಂಪರ್ಕ ಕಲ್ಪಿಸಲು ಅಂದಾಜು 7 ಕೋಟಿ ರೂ ವೆಚ್ಚದಲ್ಲಿ ಗ್ರಾಮದಿಂದ ಬೆಳಗಾವಿ – ಹೈದ್ರಾಬಾದ್ ರಾಜ್ಯ ಹೆದ್ದಾರಿಗೆ ಸಂಪರ್ಕಿಸುವ 5 ಕೀ ಮೀ ರಸ್ತೆ ನಿರ್ಮಿಸಲಾಗಿದೆ
ಈ ರಸ್ತೆ ಕಂದಗಲ್ಲ ಸೇರಿದಂತೆ ಸೋಮಲಾಪುರ ಮರಟಗೇರಿ ಗೋನಾಳ ಎಸ್ ಕೆ ಒಳಗೊಂಡಂತೆ 25 ಹಳ್ಳಿಗಳಿಗೆ ಈ ರಸ್ತೆ ಅನುಕೊಲವಿದ್ದು ಬಾಗಲಕೋಟ ಬೆಳಗಾವಿ ಹೈದ್ರಾಬಾದ್ ಹಾಗೂ ಮುಂತಾದ ದೊಡ್ಡ ನಗರಗಳಿಗೆ ಹೋಗಿ ಬರಲು ಬಹಳ ಅನುಕೊಲವಾಗಿದೆ.
ಆದರೆ ಈ ರಸ್ತೆಯಲ್ಲಿ ಸಾರಿಗೆ ವ್ಯವಸ್ಥೆ ಇಲ್ಲ ಒಂದು ಬಸ್ಸು ಕೂಡ ಈ ರಸ್ತೆಯ ಮೇಲೆ ಓಡಾಡಲ್ಲ ಯಾಕೆ? ಸರಿಯಾದ ರಸ್ತೆ ಇದ್ದು ಸಾಕಷ್ಟು ಹಳ್ಳಿ ನಗರಗಳ ಪ್ರಯಾಣಿಕರಿಗೆ ಅವಶ್ಯಕತೆ ಇರುವ ರಸ್ತೆಯಲ್ಲಿ ಸಾರಿಗೆ ಇಲ್ಲದಿರುವುದು ಆಶ್ಚರ್ಯ.ಬಸ್ ಸಂಚಾರಕ್ಕೆ ಆಗ್ರಹ =ಈ ರಸ್ತೆಯಲ್ಲಿ ಬಸ್ ಸಂಚಾರ ಆರಂಭಸಬೇಕೆಂದು ಸ್ಥಳೀಯ ಪ್ರಯಾಣಿಕರು ಒತ್ತಾಯಿಸಿದ್ದು ಜಿಲ್ಲಾ ಕೇಂದ್ರ ಬಾಗಲಕೋಟ ಸೇರಿದಂತೆ ಇತರ ನಗರಗಳಿಗೆ ಹೋಗಿ ಬರಲು ಕಂದಗಲ್ಲ ಭಾಗದ ಪ್ರಯಾಣಿಕರಿಗೆ ನೇರವಾದ ಬಸ್ ಸಂಚಾರ ಇಲ್ಲ ಬಾಗಲಕೋಟ ದಿಂದ ಕಂದಗಲ್ಲಿಗೆ ವಸತಿ ಬಸ್ ಪ್ರಾರಂಭಿಸಿದರೆ ಜಿಲ್ಲೆಯ ಗಡಿ ಭಾಗದಲ್ಲಿರುವ ಗ್ರಾಮಸ್ಥರಿಗೆ ಅನುಕೊಲವಾಗಲಿದೆ.
ಸ್ಥಳೀಯ ಜನರು ಬಾಗಲಕೋಟ ಬೆಂಗಳೂರು ಹೈದ್ರಾಬಾದ ಮಂಗಳೂರು ಹಾಗೂ ಮುಂತಾದ ನಗರಗಳಿಗೆ ಹೋಗಿ ಬರುವವರಿಗೆ ವ್ಯವಸ್ಥೆ ಕಲ್ಪಿಸಿದಂತಾಗುತ್ತದೆ.
ಬೆಂಗಳೂರ ಹಾಗೂ ಮಂಗಳೂರುಗೆ ಬಸ್ = ಹುನಗುಂದ ಸಾರಿಗೆ ಘಟಕದಿಂದ ಹುನಗುಂದ -ಬೆಂಗಳೂರು ಹಾಗೂ ಮಂಗಳೂರು ಬಸ್ ಪ್ರಾರಂಭಿಸಿ ಬೆಂಗಳೂರು ಬಸ್ಸು ತುಂಬ ಆದಾಪುರ ಕಂದಗಲ್ಲ ತಾವರಗೇರಾ ಗಂಗಾವತಿ ಮಾರ್ಗವಾಗಿ ಓಡಿಸಿ ಹುನಗುಂದ -ಮಂಗಳೂರು ಬಸ್ಸನ್ನು ತುಂಬ ಅದಾಪುರ ಕಂದಗಲ್ಲ ಮರಟಗೇರಿ ಶಿರಗುಂಪಿ ಕುಷ್ಟಗಿ ಗಜೇಂದ್ರಗಡ ಮಾರ್ಗವಾಗಿ ಓಡಿಸಬೇಕು ಎಂದು ಈ ಭಾಗದ ಅಂದಾಜು 20 ರಿಂದ 25 ಹಳ್ಳಿಯ ಸಾರ್ವಜನಿಕರ ಅಗ್ರಹ. ಈ ಮಾರ್ಗದಲ್ಲಿ ಬಸ್ ಪ್ರಾರಂಭಿಸಿದರೆ ಹೆಚ್ಚಿನ ಹಣ ತೆತ್ತು ಸುತ್ತು ಹಾಕಿ ಹೋಗುವ ಬವಣೆ ತಪ್ಪಲಿದೆ. ಕೀ ಮೀ ಅಂತರ ಕಡಿಮೆಯಾಗಿ ಸಮಯ ಉಳಿತಾಯವಾಗುತ್ತದೆ. ಇದರಿಂದ ಸಾವಿರಾರು ಜನ ಪ್ರಯಾಣಿಕರಿಗೆ ಅನುಕೊಲ ಕಲ್ಪಿಸಿದಂತಾಗುತ್ತದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ವರದಿ ದಾವಲ್ ಶೇಡಂ