ಮುಂಬೈ: ರೋಹಿತ್ ಶರ್ಮಾ ಬ್ಯಾಟಿಂಗ್ ನಲ್ಲಿ ತಮ್ಮ ಹಳೆಯ ಲಯ ಕಂಡುಕೊಂಡವರಂತೆ ಆಡಿದರು. ಸೂರ್ಯ ಕುಮಾರ್ ಯಾದವ್ ಕೂಡ ಸೂರ್ಯನಂತೆ ಬ್ಯಾಟಿಂಗ್ ನಲ್ಲಿ ಪ್ರಕಾಶಿಸಿದರು. ಇದರ ಪರಿಣಾಮ ಮುಂಬೈ ಇಂಡಿಯನ್ಸ ತಂಡ ಇಲ್ಲಿ ನಡೆದ ಐಪಿಎಲ್ ಪಂದ್ಯಾವಳಿಯ ಚೆನ್ನೈ ಸೂಪರ್ ಕಿಂಗ್ಸ ವಿರುದ್ಧ 9 ವಿಕೆಟ್ ಗಳ ಸುಲಭ ಜಯ ಪಡೆಯಲು ಸಾಧ್ಯವಾಯಿತು.
ಇಲ್ಲಿನ ವಾಂಖೇಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ನಿಗದಿತ 20 ಓವರುಗಳಲ್ಲಿ 5 ವಿಕೆಟ್ ಗೆ 176 ರನ್ ಗಳಿಸಿತು. ಇದಕ್ಕೆ ಪ್ರತಿಯಾಗಿ ಆಡಿದ ಮುಂಬೈ ಇಂಡಿಯನ್ಸ್ ತಂಡ ಕೇವಲ 15.4 ಓವರುಗಳಲ್ಲಿಯೇ ಕೇವಲ 1 ವಿಕೆಟ್ ಕಳೆದುಕೊಂಡು 177 ರನ್ ಗಳಿಸಿ ಸುಲಭವಾಗಿ ಗೆಲುವಿನ ಕೇಕೆ ಹಾಕಿತು.
ಸ್ಕೋರ್ ವಿವರ:
ಚೆನ್ನೈ ಸೂಪರ್ ಕಿಂಗ್ಸ್ 20 ಓವರುಗಳಲ್ಲಿ 5 ವಿಕೆಟ್ ಗೆ 176
ರವೀಂದ್ರ ಜಡೆಜಾ 53 ( 35 ಎಸೆತ, 4 ಬೌಂಡರಿ, 2 ಸಿಕ್ಸರ್), ಶಿವಂ ದುಬೈ 50 ( 32 ಎಸೆತ, 2 ಬೌಂಡರಿ, 4 ಸಿಕ್ಸರ್)
ಮುಂಬೈ ಇಂಡಿಯನ್ಸ್ 15.4 ಓವರುಗಳಲ್ಲಿ 1 ವಿಕೆಟ್ ಗೆ 177
ರೋಹಿತ್ ಶರ್ಮಾ 76 ( 45 ಎಸೆತ, 4 ಬೌಂಡರಿ, 6 ಸಿಕ್ಸರ್ ), ಸೂರ್ಯ ಕುಮಾರ್ ಯಾದವ್ 68 ( 30 ಎಸೆತ, 6 ಬೌಂಡರಿ, 5 ಸಿಕ್ಸರ್)
ಪಂದ್ಯ ಶ್ರೇಷ್ಠ: ರೋಹಿತ್ ಶರ್ಮಾ