ರೋಹಿತ್ ಶರ್ಮಾ ಕಿರಿಯ ಆಟಗಾರನಿಗೆ ಪ್ರೋತ್ಸಾಹ ದಾಯಕ ಮಾತುಗಳನ್ನಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕಳೆದ ರಾತ್ರಿ ಮುಂಬೈ ಇಂಡಿಯನ್ಸ ಹಾಗೂ ರಾಜಸ್ತಾನ ರಾಯಲ್ಸ್ ನಡುವಣ ಪಂದ್ಯ ನಡೆದಿತ್ತು. ರಾಜಸ್ತಾನ ರಾಯಲ್ಸ್ ತಂಡದ ಕಿರಿಯ ಆಟಗಾರ ವೈಭವ ಸೂರ್ಯವಂಶಿ ಸೊನ್ನೆಗೆ ಔಟಾದರು.

ಪಂದ್ಯದ ನಂತರ ಪರಸ್ಪರ ಸೇಕ್ ಹ್ಯಾಂಡ್ ಅಭಿನಂದನೆಗಳನ್ನು ಹಂಚಿಕೊಳ್ಳುವ ಸಂದರ್ಭದಲ್ಲಿ ವೈಭವ್ ಸೂರ್ಯವಂಶಿಯತ್ತ ತೆರಳಿದ ರೋಹಿತ್ ಶರ್ಮಾ ವೈಭವ್ ಗೆ ಪ್ರೋತ್ಸಾದ ದಾಯಕ ಮಾತುಗಳನ್ನಾಡಿದ್ದಾರೆ. ವೈಭವ್ ಇನ್ನು ಕಲಿಯುತ್ತಿದ್ದಾರೆ ಎಂದು ಹೇಳುವ ಮೂಲಕ ಹಾಗೂ ಅವರಿಗೆ ಸೂಕ್ತ ಮಾರ್ಗದರ್ಶನ ನೀಡುವ ಮೂಲಕ ಧೈರ್ಯ ತುಂಬಿದ್ದಾರೆ. ಹೀಗಾಗಿ ರೋಹಿತ್ ಶರ್ಮಾ ಅವರ ಪ್ರೋತ್ಸಾಹದಾಯಕ ಮಾತುಗಳಿಗೆ ಈಗ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.




