ಅಥಣಿ : ರೋಟರಿ ಸಂಸ್ಥೆ ಆಯೋಜಿಸಿದ್ದ ಜಿ.ಎಮ್ ಗಾಳಿಪಟ ಉತ್ಸವದಲ್ಲಿ ಯುವಕ. ಯುವತಿಯರು ಮಕ್ಕಳು ಉತ್ಸಾಹದಿಂದ ಪಾಲ್ಗೊಳ್ಳುವ ಮೂಲಕ ಗಾಳಿಪಟ ಉತ್ಸವಕ್ಕೆ ವಿಶೇಷ ಮೆರಗು ನೀಡಿದರು.
ಪಟ ಪಟ ಗಾಳಿಪಟ ಎನ್ನುವಂತೆ ಭೋಜರಾಜ ಕ್ರೀಡಾಂಗದಲ್ಲಿ ಆಯೋಜಿಸಿದ ವಿವಿಧ ರೀತಿಯ ಗಾಳಿಪಟಗಳು ಬಾನೆತ್ತರದಲ್ಲಿ ಎಲ್ಲಿ ನೋಡಿದಲ್ಲೆಡೆ ಗಾಳಿಪಟಗಳ ಹಾರಾಟ ನೋಡುಗರ ಕಣ್ಣನ ಸೆಳೆಯಿತು.
ಗಣರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ಗಾಳಿಪಟ ಉತ್ಸವದಲ್ಲಿ ಪಟ, ಪಟ, ಗಾಳಿಪಟ ಎಲ್ಲಿ ನೋಡಿದಲ್ಲಿ ಗಾಳಿಪಟ ಪಾರಿಸುತ್ತಿರುವ ನೂರಾರು ಸಂಖ್ಯೆಯಲ್ಲಿದ್ದ ಯುವಕರು, ಬಾಲಕರು ಬಾನೆತ್ತರಕ್ಕೆ ತಮ್ಮ ತಮ್ಮ ಗಾಳಿಪಟಗಳನ್ನು ಹಾರಿಸಿ ಸಂತೋಷ ಪಟ್ಟಿದ್ದಷ್ಟೇ ಅಲ್ಲ ಕುಣಿದು ಕುಪ್ಪಳಿಸಿದರು.

ಗಾಳಿಪಟ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ರೋಟರಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಗಜಾನನ ಮಂಗಸೂಳಿ, ಗಾಳಿಪಟದಂತಹ ವಿಶೇಷ ಕಾರ್ಯಕ್ರಮವನ್ನು ಆಥಣಿಯ ಜನತೆಗೆ ಇದೇ ಪ್ರಥಮ ಬಾರಿಗೆ ರೋಟರಿ ಸಂಸ್ಥೆಯ ಮೂಲಕ ಕೊಡಮಾಡಲಾಗಿದೆ ಎಂದ ಅವರು ಸಾವಿರಕ್ಕೂ ಹೆಚ್ಚು ಜನ ಈ ಗಾಳಿಪಟ ಉತ್ಸವದಲ್ಲಿ ಪಾಲ್ಗೊಂಡಿರುವುದು ನಮ್ಮ ಉತ್ಸಾಹ ಹೆಚ್ಚಿಸಿದೆ ಎಂದರು.
ಗಾಳಿಪಟ ಉತ್ಸವದ ಯಶಸ್ಸಿಗೆ ಪುರಸಭಾ ಸದಸ್ಯ ರಾವಸಾಹೇಬ ಐಹೊಳೆಯವರ ಆರ್.ಎನ್.ಎ ಸಂಸ್ಥೆ ಸಹಕಾರ ನೀಡಿದೆ ಜೊತೆಗೆ ಜಿ.ಎಮ್ ಗ್ರುಪ್, ಇನ್ನರ ಫೀಲ್ ಸಂಸ್ಥೆಯೂ ಕೂಡ ಸಹಕಾರ ನೀಡಿದೆ ಎಂದ ಅವರು ರೋಟರಿ ಸಂಸ್ಥೆಯ ಮೂಲಕ ಆಥಣಿಯಲ್ಲಿ ಅನೇಕ ರಚನಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ರೋಟರಿ ಸಂಸ್ಥೆ ಅಥಣೆ ಜನರ ಮನ ಗೆದ್ದಿದೆ ಎಂದರು.
ರೋಟರಿ ಸಂಸ್ಥೆಯ ಇವೆಂಟ್ ಚೇರ್ಮನ್ ಆರುಣ ಯಲಗುದ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ರೋಟರಿ ಸಂಸ್ಥೆಯ ಆರುಣ ಸೌದಾಗರ, ಡಾ.ಪಿ.ಪಿ.ಮೀರಜ, ಅನೀಲ ದೇಶಪಾಂಡೆ, ಶ್ರೀಕಾಂತ ಅಥಣಿ, ಡಾ.ಆನಂದ ಕುಲಕರ್ಣಿ, ಡಿ.ಡಿ.ಮೇಕನಮರಡಿ, ಶೈಲೇಶ ಜಾಧವ, ಡಾ.ಸಂಕ್ರಟ್ಟಿ, ಡಾ.ಮೇತ್ರಿ ಡಾ. ಆನಂದ ಗುಂಜಿಗಾಂವಿ, ಇನ್ನರ ದ್ವೀಲ ಅಧ್ಯಕ್ಷೆ ತೃಪ್ತಿ ಕುಲಕರ್ಣಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ: ರಾಜು ವಾಘಮಾರೆ.




