ಚೆನ್ನೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸತತ ಎರಡನೇ ಗೆ;ಲುವು ಸಂಪಾದಿಸಿ ಟೂರ್ನಿಯಲ್ಲಿ ಉತ್ತಮ ಆರಂಭ ಕಂಡಿದೆ.
ಇಲ್ಲಿನ ಎಂ. ಚಿದಂಬಂರಮ್ ಕ್ರೀಡಾಂಗಣದಲ್ಲಿ ಅದು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 50 ರನ್ ಗಳಿಂದ ಮಣಿಸಿತು. ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿಗಧಿತ 20 ಓವರುಗಳಲ್ಲಿ 7 ವಿಕೆಟ್ ಗೆ 196 ರನ್ ಗಳಿಸಿತು. ಗೆಲ್ಲಲು 197 ರನ್ ಗಳ ಗುರಿಯೊಂದಿಗೆ ಬ್ಯಾಟ್ ಮಾಡಲು ಇಳಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ 8 ವಿಕೆಟ್ ಗೆ 146 ರನ್ ಗಳಿಸಲು ಮಾತ್ರ ಸಾಧ್ಯವಾಯಿತು.
ಹಿರಿಯ ಆಟಗಾರ ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕೊನೆಯಲ್ಲಿ ತಮ್ಮ ತಂಡವನ್ನು ಗೆಲ್ಲಿಸಲು ಮಾಡಿದ ಯತ್ನ ಕೈಗೂಡಲಿಲ್ಲ. ಧೋನಿ ಕೇವಲ 16 ಎಸೆತಗಳಲ್ಲಿ 3 ಬೌಂಡರಿ 2 ಸಿಕ್ಸರ್ ನೆರವಿನಿಂದ 30 ರನ್ ಚಚ್ಚಿ ಅಜೇಯರಾಗಿ ಉಳಿದರು. ಅವರ ಯತ್ನ ಫಲ ಕೊಡಲಿಲ್ಲ. ಆದರೆ 42 ನೇ ವಯಸ್ಸಿನಲ್ಲಿಯೂ ಅವರು ನೀಡಿದ ಪ್ರದರ್ಶನ ಗಮನ ಸೆಳೆಯಿತು. ಬ್ಯಾಟಿಂಗ್ ನಲ್ಲಿ ಮಾತ್ರವಲ್ಲದೇ ಮಿಂಚಿನ ವಿಕೆಟ್ ಕೀಪಿಂಗ್ ಕೂಡ ಮಾಡಿ ಅವರ ಆಟ ಈಗಲೂ ಕುಂದಿಲ್ಲ ಎಂಬ ಸಂದೇಶ ಸಾರಿದರು.
ಇದಕ್ಕೆ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಾಯಕ ಪಾಟೀದಾರ ಅವರ ಬಿರುಸಿನ ಅರ್ಧ ಶತಕದ ನೆರವಿನಿಂದ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿತು. ಪಾಟೀದಾರ 32 ಎಸೆತಗಳಲ್ಲಿ 4 ಬೌಂಡರಿ 3 ಸಿಕ್ಸರ್ ನೆರವಿನಿಂದ 51 ರನ್ ಗಳಿಸಿ ತಂಡಕ್ಕೆ ನೆರವಾದರು.
ಸ್ಕೋರ್ ವಿವರ:
ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರುಗಳಲ್ಲಿ 7 ವಿಕೆಟ್ ಗೆ 196 ರನ್
ಪಾಟೀದಾರ 51, 32 ಎಸೆತ, 4 ಬೌಂಡರಿ 3 ಸಿಕ್ಸರ್, ದೇವದತ್ತ ಪೆಡಿಕಲ್ 27, 14 ಎಸೆತ, 2 ಬೌಂಡರಿ, 2 ಸಿಕ್ಸರ್,
ಪಿಲ್ ಸಾಲ್ಟ್ 32, 16 ಎಸೆತ, 5 ಬೌಂಡರಿ, 1 ಸಿಕ್ಸರ್, ಟಿಮ್ ಡೆವಿಡ್ 22, 8 ಎಸೆತ, 1 ಬೌಂಡರಿ, 3 ಸಿಕ್ಸರ್)
ನೂರ್ ಅಹ್ಮದ 36 ಕ್ಕೆ 3
ಚೆನ್ನೈ ಸೂಪರ್ ಕಿಂಗ್ಸ್ ತಂಡ 8 ವಿಕೆಟ್ ಗೆ 146
ಧೋನಿ 30, 16 ಎಸೆತ, 3 ಬೌಂಡರಿ 2 ಸಿಕ್ಸರ್, ರಚಿನ್ ರವೀಂದ್ರ 41, 31 ಎಸೆತ, 5 ಬೌಂಡರಿ,
ಜೋಷ್ ಹೆಜಲ್ ವುಡ್ 21 ಕ್ಕೆ 3. ಪಂದ್ಯ ಶ್ರೆಷ್ಠ: ರಜತ್ ಪಾಟಿದಾರ