ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ 42 ನೇ ಲೀಗ್ ಪಂದ್ಯದಲ್ಲಿ ರಾಜಸ್ತಾನ ರಾಯಲ್ಸ್ ತಂಡವನ್ನು ರೋಚಕ ಹಣಾಹಣಿಯಲ್ಲಿ 11 ರನ್ ಗಳಿಂದ ಸೋಲಿಸಿತು.
ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ನಿಗದಿತ 20 ಓವರುಗಳಲ್ಲಿ 5 ವಿಕೆಟ್ ಗೆ 205 ರನ್ ಗಳಿಸಿತು. ದೊಡ್ಡ ಮೊತ್ತದ ಗೆಲುವಿನ ಗುರಿ ಹೊಂದಿದ್ದ ರಾಜಸ್ತಾನ ರಾಯಲ್ಸ್ ತಂಡವು 9 ವಿಕೆಟ್ ಗೆ 194 ರನ್ ಗಳಿಸಿ 11 ರನ್ ಗಳಿಂದ ಪರಾಭವಗೊಂಡಿತು. ಈ ಗೆಲುವಿನೊಂದಿಗೆ 9 ಪಂದ್ಯಗಳಿಂದ 12 ಅಂಕಗಳಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮೂರನೇ ಸ್ಥಾನ ಪಡೆಯಿತು.
ಸ್ಕೋರ್ ವಿವರ:
ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರುಗಳಲ್ಲಿ 5 ವಿಕೆಟ್ ಗೆ 205
( ವಿರಾಟ್ ಕೊಹ್ಲಿ 70 ( 42 ಎಸೆತ, 8 ಬೌಂಡರಿ, 2 ಸಿಕ್ಸರ್) , ಪೆಡಿಕಲ್ 50 ( 27 ಎಸೆತ, 4 ಬೌಂಡರಿ, 3 ಸಿಕ್ಸರ್)
ಸಂದೀಪ್ ಶರ್ಮಾ 45 ಕ್ಕೆ 2)
ರಾಜಸ್ತಾನ ರಾಯಲ್ಸ್ 20 ಓವರುಗಳಲ್ಲಿ 9 ವಿಕೆಟ್ ಗೆ 194
ಯಶಸ್ವಿ ಜೈಸ್ವಾಲ್ 49 ( 19 ಎಸೆತ, 7 ಬೌಂಡರಿ, 3 ಸಿಕ್ಸರ್), ದ್ರುವ್ ಜುರೆಲ್ 47 ( 34 ಎಸೆತ, 3 ಬೌಂಡರಿ, 3 ಸಿಕ್ಸರ್)
ನಿತೀಶ ರಾಣಾ 28 ( 22 ಎಸೆತ, 3 ಬೌಂಡರಿ, 1 ಸಿಕ್ಸರ್) ಜೋಶ್ ಹೆಜಲ್ ವುಡ್ 33 ಕ್ಕೆ 4)
ಜೋಷ ಹೆಜಲ್ ವುಡ್: ಪಂದ್ಯ ಶ್ರೇಷ್ಠ