Ad imageAd image

ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ 2.5 ಲಕ್ಷ ರೂ. ಪರಿಹಾರ, ಹೊಸ ಮನೆ : ಸಚಿವ ಕೃಷ್ಣ ಬೈರೇಗೌಡ

Bharath Vaibhav
ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ 2.5 ಲಕ್ಷ ರೂ. ಪರಿಹಾರ, ಹೊಸ ಮನೆ : ಸಚಿವ ಕೃಷ್ಣ ಬೈರೇಗೌಡ
krishna byre gowda
WhatsApp Group Join Now
Telegram Group Join Now

ಮಡಿಕೇರಿ: ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ 2.5 ಲಕ್ಷ ರೂಪಾಯಿ ಪರಿಹಾರ ಹಾಗೂ ಹೊಸ ಮನೆ ಕಟ್ಟಿಸಿ ಕೊಡುತ್ತೇವೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನದಿಗಳ ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ 2.5 ಲಕ್ಷ ರೂ.ಪರಿಹಾರ ಹಾಗೂ ಹೊಸ ಮನೆ ನಿರ್ಮಿಸಿ ಕೊಡುವ ಬಗ್ಗೆ ಶೀಘ್ರವೇ ಆದೇಶ ಹೊರಡಿಸಲಾಗುವುದು ಎಂದು ತಿಳಿಸಿದ್ದಾರೆ.

ಕೇರಳದ ವಯನಾಡುನಲ್ಲಿ ನಡೆದ ಘಟನೆ ಬಗ್ಗೆ ಮಾತನಾಡಿ, ನಮ್ಮ ರಾಜ್ಯದಲ್ಲಿಯೂ ಆಗಬಹುದು. ಪರಿಸರದ ಮೇಲಿನ ಹಾನಿ ಗಮನಿಸದೆ ಸಿಕ್ಕಸಿಕ್ಕ ಕಡೆ ರಸ್ತೆ ನಿರ್ಮಿಸುತ್ತಿದ್ದೇವೆ. ಮರಗಳನ್ನು ಕಡಿಯುತ್ತಿದ್ದೇವೆ. ನಮ್ಮ ಕಾಲಿಗೆ ನಾವೇ ಕೊಡಲಿ ಹಾಕಿದ್ದೇವೆ. ಇದೆಲ್ಲದರ ಪ್ರತಿಫಲವೇ ವಯನಾಡಿನಲ್ಲಿ ಆಗಿದೆ ಎಂದು ಹೇಳಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!