22 ಲಕ್ಷ ರೂಪಾಯಿ ಶಾಲೆ ಕೊಠಡಿ ನಿರ್ಮಾಣ ಕಾಮಗಾರಿಗೆ ಚಾಲನೆ

Bharath Vaibhav
22 ಲಕ್ಷ ರೂಪಾಯಿ ಶಾಲೆ ಕೊಠಡಿ ನಿರ್ಮಾಣ ಕಾಮಗಾರಿಗೆ ಚಾಲನೆ
WhatsApp Group Join Now
Telegram Group Join Now

ನಿಪ್ಪಾಣಿ : ಮತ ಕ್ಷೇತ್ರದಲ್ಲಿಯ ಕನ್ನಡ ಶಾಲೆಗಳ ಅಭಿವೃದ್ಧಿಗಾಗಿ ಶಾಸ ಕರಾದ ಶಶಿಕಲಾ ಜೊಲ್ಲೆ ಹಾಗೂ ಮಾಜಿ ಸಂಸದ ಅನ್ನಾಸಾಹೇಬ ಜೊಲ್ಲೆಯವರು ಒತ್ತು ನೀಡಿದ್ದು ಕನ್ನಡ ಶಾಲೆಗಳ ಸ್ಥಿತಿಗತಿ ಗಮಣಿಸಿ ಹೊಸ ಕಟ್ಟಡಗಳಿಗೆ ಅನುದಾನ ಮಂಜೂರು ಮಾಡಿರುವುದಾಗಿ ಹಾಲಸಿದ್ದನಾಥ ಸಕ್ಕರೆ ಕಾರ್ಖಾನೆಯ ಉಪಾಧ್ಯಕ್ಷ ಪವನ ಪಾಟೀಲ ತಿಳಿಸಿದರು. ಅವರು ನಿಪ್ಪಾಣಿ ತಾಲೂಕಿನ ಕಾರದಗಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಗೆ ತಾಲೂಕ ಪಂಚಾಯಿತಿ ವಿಶೇಷ ಅನುದಾನದಡಿ 22 ಲಕ್ಷ ರೂಪಾಯಿ ಮಂಜೂರಾಗಿದ್ದು ವರ್ಗ ಕೋಣೆ ಹಾಗೂ ಶೌಚಾಲಯ ನಿರ್ಮಾಣಕ್ಕೆ ಚಾಲನೆ ನೀಡಿ ಮಾತನಾಡಿದರು. ಪ್ರಾರಂಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ವೈಶಾಲಿ ಖರಾಡೆ ಸುಷ್ಮಾ ಗವಳಿ ಎಸ ಡಿಎಂಸಿ ಉಪಾಧ್ಯಕ್ಷ ಸುಜಾತ ಪಡಲಾಳೆ ಪೂಜೆ ಕಾರ್ಯಕ್ರಮ ನೆರವೇರಿಸಿದರು.

ಈ ಸಂದರ್ಭದಲ್ಲಿ ಹಾಲಶುಗರ ನಿರ್ದೇಶಕ ಶರದ್ ಜಂಗಟೆ, ಜಯಕುಮಾರ ಖೋತ,ಯೂನುಷ ಮುಲ್ಲಾನಿ SDMC ಅಧ್ಯಕ್ಷ ಜಿನ್ನಪ್ಪಾ ಗಾವಡೆ ಬಾಳಾಸಾಹೇಬ ನವನಾಳೆ ಶ್ರಿಫಲ್ ಅರ್ಪಿಸಿದರು. ಭೂಮಿ ಪೂಜೆ ಸಮಾರಂಭದಲ್ಲಿ ದೇವಪ್ಪ ದೇವಕಾತೆ ಗ್ರಾಮ ಪಂಚಾಯಿತಿ ಸದಸ್ಯ ಸುಕುಮಾರ ಮಾಳಿ ಸೋಮನಾಥ ಗಾವಡೇ ಸೂರಜ್ ಮಾಳಿ ದನಪಾಲ್ ಚೌಹಾನ್ ಬಾಬಾಸಾಹೇಬ ಖರಾಡೆ,ವೀರೇಂದ್ರ ಖೋತ ,ದಾದಾ ನರಗಟ್ಟಿ ಸೋಮನಾಥ್ ಗಾವಡಿ ಯಶವಂತ ಗಾವಡೇ ರವೀಂದ್ರ ಐಹೊಳೆ ಸೇರಿದಂತೆ ಎಸ ಡಿಎಂಸಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವರದಿ: ಮಹಾವೀರ ಚಿಂಚಣೆ 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!