Ad imageAd image

ಸರಳ ವಿವಾಹವಾದ ದಂಪತಿಗಳಿಗೆ 50,000 ರೂ. ಪ್ರೋತ್ಸಾಹಧನ

Bharath Vaibhav
ಸರಳ ವಿವಾಹವಾದ ದಂಪತಿಗಳಿಗೆ 50,000 ರೂ. ಪ್ರೋತ್ಸಾಹಧನ
WhatsApp Group Join Now
Telegram Group Join Now

ಬೆಂಗಳೂರು : ರಾಜ್ಯ ಸರ್ಕಾರವು ಸರಳ ವಿವಾಹವಾಗುವ ದಂಪತಿಗಳಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮದುವೆಯಾಗುವ ಪರಿಶಿಷ್ಟ ಜಾತಿಯ ದಂಪತಿಗಳಿಗೆ 50,000 ರೂ. ಪ್ರೋತ್ಸಾಹಧನ ನೀಡಲಾಗುತ್ತಿದೆ.

ನೋಂದಾಯಿತ ಸಂಘ-ಸಂಸ್ಥೆಗಳು, ಧಾರ್ಮಿಕ ಸಂಸ್ಥೆಗಳು ವ್ಯವಸ್ಥೆ ಮಾಡುವ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ವಿವಾಹವಾಗುವ ಪರಿಶಿಷ್ಟ ಜಾತಿಯ ದಂಪತಿಗಳಿಗೆ ʼಸರಳ ವಿವಾಹ ಪ್ರೋತ್ಸಾಹಧನʼ ಯೋಜನೆಯಡಿ ಆರ್ಥಿಕ ನೆರವು ನೀಡಲಾಗುತ್ತದೆ.

ಅರ್ಹ ದಂಪತಿಗಳು ಪ್ರೋತ್ಸಾಹಧನಕ್ಕಾಗಿ ಅರ್ಜಿ ಸಲ್ಲಿಸಲು ಈ ಲಿಂಕ್‌ ಕ್ಲಿಕ್‌ ಮಾಡಿ : https://swdservices.karnataka.gov.in/swincentve/HAhome.aspx

ಸರಳವಾಗಿ ವಿವಾಹವಾದ ದಂಪತಿಗಳಿಗೆ ರೂ. 50,000/- ಸಾವಿರ ಪ್ರೋತ್ಸಾಹಧನ, ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಏರ್ಪಡಿಸುವ ಆಯೋಜಕರುಗಳಿಗೆ ಪ್ರೋತ್ಸಾಹಧನ ಹಾಗೂ ವಿವಾಹದ ಖರ್ಚು-ವೆಚ್ಚಗಳಿಗಾಗಿ ಪ್ರತಿ ಜೋಡಿಗೆ ರೂ. 2,000/- ಸಾವಿರಗಳನ್ನು ನೀಡಲಾಗುವುದು.

ವಿಶೇಷ ಸೂಚನೆ : ಸರಳ ವಿವಾಹವಾದ ಒಂದು ವರ್ಷದೊಳಗೆ ಅಗತ್ಯ ದಾಖಲಾತಿಗಳೊಂದಿಗೆ ದಂಪತಿಗಳು ಅರ್ಜಿ ಸಲ್ಲಿಸುವುದು.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!