ಅಥಣಿ: ದೇಶದ ಸಂವಿಧಾನವನ್ನು ನಾಶ ಮಾಡುವುದೇ ಬಿಜೆಪಿ ಮತ್ತು ಆರ್ ಎಸ್ ಎಸ್ ಅಜೆಂಡ ನಾ ಎಂದು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಪರಿಶಿಷ್ಟ ಜಾತಿಯ ಮಾಧ್ಯಮ ಪ್ರತಿನಿಧಿ ರಾವಸಾಬ ಐಹೊಳೆ ಹೇಳಿದರು. ಅವರು ಅಥಣಿ ಪಟ್ಟಣದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ
ಆರ್ ಎಸ್ ಎಸ್ ಮುಖಂಡರಾದ ಮೋಹನ್ ಭಾಗವತ್ ರವರು ಭಾಷಣ ಮಾಡುವಾಗ ರಾಮ ಮಂದಿರ ಪ್ರತಿಷ್ಠಾಪನ ದಿನವನ್ನು ಭಾರತದ ಹಿಂದುಗಳಾದ ನಾವು ನಿಜವಾಗಿ ಸ್ವತಂತ್ರ ದಿನವನ್ನಾಗಿ ಆಚರಿಸಬೇಕು ಎಂದು ಹೇಳಿಕೆಯನ್ನು ನೀಡಿದ್ದಾರೆ. ಇವರನ್ನು ದೇಶದಲ್ಲಿರುವ ಪ್ರತಿಯೊಬ್ಬ ನಾಗರಿಕರು, ವಿದ್ಯಾವಂತ ಯುವಕರು, ಮತ್ತು ಸಂವಿಧಾನದ ಮೇಲೆ ನಂಬಿಕೆ ಇಟ್ಟುಕೊಂಡಿರುವ ಪ್ರತಿಯೊಬ್ಬ ಪ್ರಜೆಯೂ ಸಹ ಇಂತಹ ಕೋಮುವಾದ ವ್ಯಕ್ತಿತ್ವ ಹೊಂದಿರುವಂತಹ ಮೋಹನ್ ಭಾಗವತ್ ಅವರನ್ನು ದೇಶದ್ರೋಹಿ, ಇಂತಹ ಮನುವಾದ ಮನಸ್ಥಿತಿಯವರನ್ನು ದೇಶದಿಂದ ಗಡಿಪಾರು ಮಾಡಬೇಕಾಗಿದೆ. ಇಂತಹ ಆರ್ ಎಸ್ ಎಸ್ ಮುಖಂಡರು ನಮ್ಮ ದೇಶದಲ್ಲಿ ಸ್ವತಂತ್ರ ಪೂರ್ವದಿಂದಲೂ ಜಾತಿ ಜಾತಿಗಳ ನಡುವೆ, ಧರ್ಮ ಧರ್ಮಗಳ ನಡುವೆ, ಹಾಗೂ ದೇಶ ದೇಶಗಳ ನಡುವೆ ಕೋಮುವಾದಿ ಹೇಳಿಕೆಗಳನ್ನು ನೀಡುತ್ತಾ, ದೇಶದ ಸಮಾಜದಲ್ಲಿ ಶಾಂತಿಯನ್ನು ಅದಿಗೆಡಿಸುತ್ತಾ ಜನರ ಜನರ ನಡುವೆ ಕೋಮು ಕಿಚ್ಚು ಗಳನ್ನು ಎಬ್ಬಿಸುತ್ತಿದ್ದರು. ಮೋಹನ್ ಭಾಗವತರಾಂತಹ ಮತ್ತು ಮನುವಾದ ಮನಸ್ಥಿತಿಯನ್ನು ಹೊಂದಿರುವಂತಹ ನಾಯಕರುಗಳು ಬ್ರಿಟಿಷರ ಗುಲಾಮರಾಗಿ ಇವರು ನೀಡುತ್ತಿರುವ ಸಲಹೆಗಳಿಂದ ಅಂದು ಸ್ವತಂತ್ರ ಪೂರ್ವದಲ್ಲಿ ಸ್ವತಂತ್ರ ಹೋರಾಟಗಾರರು ಬ್ರಿಟಿಷರ ಗುಂಡಿನ ದಾಳಿಗೆ ಬಲಿಯಾಗಿ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಸ್ವತಂತ್ರ ಪೂರ್ವದಲ್ಲಿ ಇದ್ದಂತಹ ಮನುವಾದ ಮನಸ್ಥಿತಿಯು ನಮ್ಮ ದೇಶದ ಜನರು ಬ್ರಿಟಿಷರಿಂದ ಸ್ವತಂತ್ರವನ್ನು ಪಡೆದುಕೊಂಡಿದ್ದರು ಇಂದಿಗೂ ಮನವಾದ ಮನಸ್ಥಿತಿಯುಳ್ಳ ವ್ಯಕ್ತಿಗಳು ಮತ್ತು ನಾಯಕರುಗಳು ಹುಟ್ಟಿಕೊಂಡು ಪದೇ ಪದೇ ಜಾತಿ ಧರ್ಮಗಳು ಮತ್ತು ದೇಶದ ವಿರುದ್ಧ ಹೇಳಿಕೆಗಳನ್ನು ನೀಡುತ್ತಾ ನಮ್ಮ ದೇಶದ ಸಂವಿಧಾನವನ್ನು ಹಾಳು ಮಾಡುವಂತಹ ಮನವಾದ ಮನಸ್ಥಿತಿಗಳು ಮೋಹನ್ ಭಾಗವತ್ತರ ಅಂತ ಹೇಳಿಕೆಗಳನ್ನು ನೀಡುತ್ತಾ ಬರುತ್ತಾರೆ, ಜಾತಿ ಜಾತಿಗಳ ನಡುವೆ ದ್ವೇಷ ಅರ್ಪಿಸುತ್ತಾರೆ, ಧರ್ಮ ಧರ್ಮಗಳ ನಡುವೆ ಬೇದಬಾವನ್ನು ಹುಟ್ಟಿಸಿ ತಮ್ಮ ಗುಲಾಮರನ್ನಾಗಿ ಮಾಡಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಾರೆ, ಪ್ರಜಾ ಪ್ರಭುತ್ವದ ಮೇಲೆ ನಂಬಿಕೆ ಇಲ್ಲದ ರೀತಿಯಲ್ಲಿ ಹಿಟ್ಲರ್ ಮನಸ್ಥಿತಿಯನ್ನು ತೋರಿಸುತ್ತಾ, ದೇಶದ ಹಿಂದುಗಳಲ್ಲಿ ಮತ್ತು ದೇಶದಲ್ಲಿರುವ ಬೇರೆ ಧರ್ಮಗಳ ನಡುವೆ ವಿಷ ಬೀಜವನ್ನು ಬಿತ್ತುತ್ತಾ ತಮ್ಮ ಲಾಭವನ್ನು ಪಡೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ, ಇದಕ್ಕೆ ಕುಮ್ಮ ಕೊಡುವಂತಹ ನಾಯಕರುಗಳೇ ಬಿಜೆಪಿ ನಾಯಕರುಗಳು ಎಂದು ಹೇಳಬೇಕಾಗಿದೆ.
ನಾವು ಗಮನಿಸಬಹುದು ಅನಂತ್ ಕುಮಾರ್ ಹೆಗಡೆಯಂತಹ ನಾಯಕ ನಾವು ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಮತ್ತು 400 ಸ್ಥಾನಮಾನಗಳು ಪಡೆದರೆ ದೇಶದ ಸಂವಿಧಾನವನ್ನು ಬದಲಾಯಿಸುತ್ತೇವೆ ಎಂಬ ದೇಶದ್ರೋಹಿ ಹೇಳಿಕೆಯನ್ನು ನೀಡುವುದು, ವಿರೋಧ ಪಕ್ಷ ನಾಯಕರಾದ ಆರ್ ಅಶೋಕ್ ಅವರು, ಬಿಜೆಪಿಯ ರಾಜ್ಯಾಧ್ಯಕ್ಷರಾದ, ವಿಜೇಂದ್ರ ಅವರು, ಸಿಟಿ ರವಿ, ಪ್ರಹ್ಲಾದ ಜೋಶಿ, ಪ್ರತಾಪ್ ಸಿಂಹ, ಛಲವಾದಿ ನಾರಾಯಣಸ್ವಾಮಿ, ಈ ರೀತಿ ಸಾಕಷ್ಟು ಬಿಜೆಪಿ ನಾಯಕರುಗಳು ದೇಶದ ಹಿಂದೂ ಧರ್ಮದ ಹೆಸರಿನಲ್ಲಿ ಬೇರೆ ಧರ್ಮವನ್ನು ದ್ವೇಷಿಸುವ ಭಾವನೆಗಳನ್ನು ಬೆಳೆಸುವ ಪ್ರಯತ್ನವನ್ನು ಮಾಡುತ್ತಲೇ ಬರುತ್ತಿದ್ದಾರೆ, ಬಿಜೆಪಿ ನಾಯಕರುಗಳು ಮತ್ತು ಆರ್ ಎಸ್ ಎಸ್ ಮುಖಂಡರುಗಳು ದೇಶದಲ್ಲಿ ಯಾವತ್ತಿಗೂ ದೇಶದ ಸಂವಿಧಾನವನ್ನು ಗೌರವಿಸುವುದಿಲ್ಲ, ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಟ್ಟುಕೊಳ್ಳುವುದಿಲ್ಲ, ದೇಶದಲ್ಲಿರುವ ಹಿಂದುಗಳಲ್ಲಿರುವ ಜಾತಿ ವ್ಯವಸ್ಥೆ, ಶೋಷಣೆ, ದೌರ್ಜನ್ಯ, ಅತ್ಯಾಚಾರ, ಅಸಮಾನತೆ, ಇಂತಹ ವಿಚಾರಗಳ ಬಗ್ಗೆ ಯಾವತ್ತೂ ಮೋಹನ್ ಭಾಗವತ್ ಆಗಲಿ ಅಥವಾ ಬಿಜೆಪಿ ನಾಯಕರುಗಳು ದೇಶದಲ್ಲಿ ಸುಧಾರಣೆ ಮಾಡುವ ಪ್ರಯತ್ನ ಮಾಡುವುದಿಲ್ಲ,ಧರ್ಮ ಧರ್ಮಗಳನ್ನು ಪ್ರೀತಿಸುವ ಭಾವನೆಗಳನ್ನು ಜನರಲ್ಲಿ ಬೆಳೆಸುವಂತಹ ಪ್ರಯತ್ನ ಮಾಡುವುದಿಲ್ಲ, ಜಾತಿ ಜಾತಿಗಳ ನಡುವೆ ಸಮಾನತೆ ಮತ್ತು ಸಾಮಾಜಿಕ ನ್ಯಾಯವನ್ನು ಕೊಡಿಸುವುದಿಲ್ಲ, ದೇಶವನ್ನು ಅಭಿವೃದ್ಧಿಪಥದಲ್ಲಿ ಸಾಗುವುದಕ್ಕೆ ದೇಶದ ಉದ್ದಕ್ಕೂ ಜನರಲ್ಲಿ ಕ್ರಿಯಾಶೀಲತೆ ಮತ್ತು ಅಭಿವೃದ್ಧಿಯಾಗುವಂತಹ ಯೋಜನೆಗಳ ಬಗ್ಗೆ ಯಾವತ್ತು ಪ್ರಚಾರ ಮಾಡುವುದಿಲ್ಲ, ಒಂದು ಸ್ಪಷ್ಟವಾಗಿ ನಾವು ದೇಶದ ಜನರು ಮತ್ತು ರಾಜ್ಯ ಜನರು ಗಮನಿಸಬೇಕಾಗಿದೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟಿರುವಂತಹ ನಾಯಕರುಗಳು ಯಾವತ್ತಿಗೂ ಜಾತಿ ಜಾತಿಗಳ ನಡುವೆ, ಧರ್ಮ ಧರ್ಮಗಳ ನಡುವೆ, ದೇಶ ದೇಶಗಳ ನಡುವೆ ದ್ವೇಷ ಹಚ್ಚುವ ಭಾಷಣಗಳನ್ನು ಮಾಡುವುದಿಲ್ಲ, ಮತ್ತು ಕೋಮು ಗಲಭೆಗಳನ್ನು ಹುಟ್ಟಿಸುವ ಹೇಳಿಕೆಗಳನ್ನು ಕೊಡುವುದಿಲ್ಲ ಯಾಕಂದ್ರೆ ಇಂಥ ನಾಯಕರುಗಳಿಗೆ ಯಾವತ್ತೂ ದೇಶದ ಸಂವಿಧಾನದ ಮೇಲೆ ನಂಬಿಕೆ ಇಲ್ಲ ಅಂತ ನಾವು ಅರ್ಥ ಮಾಡಿಕೊಳ್ಳಲೇಬೇಕು. ಮೋಹನ್ ಭಾಗವತ್ ರಂತಹ ನಾಯಕರುಗಳು ದೇಶದ್ರೋಹಿ ಹೇಳಿಕೆಗಳನ್ನು ನೀಡುವಾಗ ನಾವು ದೇಶದ ಪ್ರಜೆಗಳಾಗಿ ಛೀಮಾರಿಯಾಗಬೇಕು ಎಂದು ನಾವು ಇವರ ಭಾಷಣಗಳಿಗೆ ಬಲಿಯಾಗದೆ ಸಮಾಜದಲ್ಲಿ ಸಮಾನತೆ, ಶಾಂತಿ, ಮತ್ತು ಸೌಹಾರ್ದತೆ ಬೆಳೆಸುವ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೇಳುತ್ತೇನೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಅಶೋಕ್ ಮಾನೆ ಮಲ್ಲಿಕಾರ್ಜುನ್ ದಳವಾಯಿ ಮುಂತಾದವರು ಉಪಸ್ಥಿತರಿದ್ದರು




