ಚಿಂಚೋಳಿ: ಚಿಂಚೋಳಿ ಪಟ್ಟಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಆರ್ ಎಸ್ ಎಸ್ ವತಿಯಿಂದ ವೈಜನಾಥ ಪಾಟೀಲ್ ಸ್ಮಾರಕ ದಿಂದ ಚಿಂಚೋಳಿ ಪ್ರಮುಖ ಬೀದಿಯಲ್ಲಿ ಸ್ವಯಂ ಸೇವಕರ ಪಥ ಸಂಚನವನ್ನು ನಡೆಯಲಾಯಿತು ಶತಮಾನೋತ್ಸವದ ಪ್ರಯುಕ್ತ ಚಿಂಚೋಳಿ ಶಾಸಕರಾದ ಅವಿನಾಶ್ ಜಾಧವ್ ಅನೇಕ ಕಾರ್ಯಕರ್ತರು ಚಿಕ್ಕ ಚಿಕ್ಕ ಮಕ್ಕಳು ಸಮವಸ್ತ್ರ ಧರಿಸಿ ಕೈಯಲ್ಲಿ ಲಾಟಿಗಳ ಹಿಡಿದುಕೊಂಡು ಜೈ ಗೋಸ್ ಹಾಕುವುದರ ಮೂಲಕ ಪಥ ಸಂಚಲನವನ್ನು ನಡೆಸಿದರು.

ಸ್ವಯಂ ಸೇವಕರಿಗೆ ಹೂವು.ರಂಗೋಲಿ ಹಾಕುವುದರ ಮೂಲಕ ಸರ್ವರಿಗೂ ಸ್ವಾಗತ ಕೋರಿದರು ಚಿಂಚೋಳಿ ಪಟ್ಟಣದಲ್ಲಿ ಆರ್ ಎಸ್ ಎಸ್ ಪಥ ಸಂಚಲನ ವಿಜಯದಶಮಿ ಹಾಗೂ ರಾಷ್ಟ್ರಿಯ ಸ್ವಯಂ ಶತಮಾನೋತ್ಸವ ಪ್ರಯುಕ್ತ ಪಥ ಸಂಚಲನವು ಬೀದಿಗಳಲ್ಲಿ ಭಾರತ ಮಾತೆಯ ಭಾವಚಿತ್ರದೊಂದಿಗೆ ಭವ್ಯ ಮೆರವಣಿಗೆ ಮತ್ತು ಸ್ವಯಂ ಸೇವಕರಿಂದ ಆಕರ್ಷಕ ಪಥ ಸಂಚಲನ ಮಾಡಿ ನಂತರ ದಿ.ವೈಜನಾಥ ಪಾಟೀಲ್ ಸ್ಮಾರಕ ಆವರಣದಲ್ಲಿ ಮುಕ್ತಾಯಗೊಳಿಸಲಾಯಿತು. ಪ್ರಮುಖ ಮುಖಂಡರು ಈ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿ ಸ್ವಯಂ ಸೇವಕರಿಗೆ ಗೌರವ ಸಲ್ಲಿಸಿದರು.
ವರದಿ: ಸುನಿಲ್ ಸಲಗರ




