ಮೊಳಕಾಲ್ಮುರು :ಪಟ್ಟಣದ ತಾಲೂಕು ಆಡಳಿತ ಸೌಧ ಸಭಾಂಗಣದಲ್ಲಿ ಸೋಮವಾರ ಪೊಲೀಸ್ ಇಲಾಖೆಯಿಂದ ಬಕ್ರಿದ್ ಹಬ್ಬದ ಶಾಂತಿ ಸಭೆಯಲ್ಲಿ ನಡೆಯಿತು.
ಮುಸ್ಲಿಂ ಸಮುದಾಯದವರು ಬಕ್ರಿದ್ ಹಬ್ಬವನ್ನು ಸ್ನೇಹ ಸೌಹಾರ್ಧತೆಯಿಂದ ಆಚರಿಸಬೇಕು. ಕಾನೂನು ಉಲ್ಲಂಘನೆ ಕಂಡು ಬಂದಲ್ಲಿ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸಿಪಿಐ ವಸಂತ್ ವಿ.ಅಸೋದೆ ತಿಳಿಸಿದರು.
ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪದ್ಧತಿಯಂತೆ ಮಸೀದಿಗಳಿಗೆ ಸಂಬಂಧಿಸಿದವರು ಈಗಾಗಲೇ ನಿಗಧಿ ಪಡಿಸಿರುವ ಸಮಯಕ್ಕೆ ಸರಿಯಾಗಿ ಮೆರವಣಿಗೆ, ಸಾಮೂಹಿಕ ಪ್ರಾರ್ಥನೆಗಳನ್ನು ಕೈಗೊಳ್ಳುವುದು ಖಡ್ಡಾಯವಾಗಿದೆ. ಈ ಸಂಬಂಧ ಯಾವುದೇ ಗೊಂದಕ್ಕೂ ಅವಕಾಶವಿಲ್ಲ ಎಂದರು.
ಸಭೆಯಲ್ಲಿ ತಹಸೀಲ್ದಾರ್ ಟಿ.ಜಗದೀಶ್, ಪಿಎಸ್‌ಐ ಜಿ.ಪಾಂಡುರಂಗ,ಪಿಎಸ್‌ಐ ಈರೇಶ್, ಶಾಸಕರ ಆಪ್ತ ಸಹಾಯಕ ಶ್ರೀಕಾಂತ್, ಸೈಯದ್ ನಭೀ, ಮಹಮ್ಮದ್ ಗೌಸ್, ದಸ್ತಗಿರಿ ಸಾಬ್, ಆಸೀಫ್, ಸಮೀವುಲ್ಲಾ, ಪೇದೆಗಳಾದ ರಮೇಶ್, ಕೆ.ಪಿ.ಶ್ರೀಧರ್, ಶಿವಾನಂದ ಇದ್ದರು.




