Ad imageAd image

ಜಾಗಿರ ವೆಂಕಟಾಪೂರ ಗ್ರಾಮಕ್ಕೆ ರುದ್ರಭೂಮಿ, ಕುಡಿಯುವ ನೀರು ಪೂರೈಕೆ ಶೀಘ್ರ: ಶಾಸಕ ದದ್ದಲ್

Bharath Vaibhav
ಜಾಗಿರ ವೆಂಕಟಾಪೂರ ಗ್ರಾಮಕ್ಕೆ ರುದ್ರಭೂಮಿ, ಕುಡಿಯುವ ನೀರು ಪೂರೈಕೆ ಶೀಘ್ರ: ಶಾಸಕ ದದ್ದಲ್
WhatsApp Group Join Now
Telegram Group Join Now

ರಾಯಚೂರು: ಜಾಗಿರ ವೆಂಕಟಪೂರ ಗ್ರಾಮಕ್ಕೆ ಬಹಳಷ್ಟು ಸ್ಮಶಾನದ (ರುದ್ರಭೂಮಿ )ಸಂಕಷ್ಟ ಇದೆ ಒಂದು ಸ್ಮಶಾನ(ರುದ್ರಭೂಮಿ )ನಿರ್ಮಿಸಿಕೊಡಬೇಕು. ಮತ್ತು ಜಾಗೀರ್ ವೆಂಕಟಾಪುರ ಗ್ರಾಮಕ್ಕೆ ಕುಡಿಯುವ ನೀರಿನ ಬಹಳ ಸಮಸ್ಸೆ ಇದೆ
ಗ್ರಾಮಕ್ಕೆ ವ್ಯವಸ್ಥೆ ಮಾಡಬೇಕೆಂದು ಜಾಗಿರ್ ವೆಂಕಟಪುರ ಗ್ರಾಮದ ಗ್ರಾಮಸ್ಥರು ರಾಯಚೂರು ಗ್ರಾಮಾಂತರ ಶಾಸಕ ಬಸನಗೌಡ ದದ್ದಲ್ ರವರಿಗೆ ಗ್ರಾಮಸ್ಥರು ಸಭೆಯಲ್ಲಿ ತಿಳಿಸಿದರು.

ಶಾಸಕರ ತಮ್ಮ ಬೇಡಿಕೆಗಳನ್ನು ಕೆಲವೇ ದಿನಗಳಲ್ಲಿ ತಾಲೂಕ ಪಂಚಾಯತಿ ಇಓ ಮತ್ತು ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ತಹಸಿಲ್ದಾರರು ಈಗಾಗಲೇ ನಿಮ್ಮ ಗ್ರಾಮ ದಲ್ಲಿ 10ಎಕರೆ ಭೂಮಿಯನ್ನು ಗುರುತಿಸಿದ್ದಾರೆ ಮತ್ತು ರುದ್ರ ಭೂಮಿಗೆ ಪ್ರತ್ತೇಕ ಸ್ಥಳ ಹುಡುಕಿ ಮಾಡಿಕೊಡುತ್ತೇನೊಂದು ಮತ್ತು ತಮ್ಮ ಸಮಸ್ಯೆಗಳನ್ನುಕುಡಿಯುವ ನೀರು ಮತ್ತು ರುದ್ರಭೂಮಿ ಎರಡನ್ನು ಬಗೆಹರಿಸಿಕೊಡುತ್ತೇನೆ ಎಂದು ಸಭೆಯಲ್ಲಿ ಗ್ರಾಮಸ್ಥರಿಗೆ ಭರವಸೆ ನೀಡಿದರು.

ಈ ಸಂಧರ್ಭದಲ್ಲಿ ಬ್ಲಾಕ್ ಅಧ್ಯಕ್ಷರು,ಊರಿನ ಹಿರಿನ ಮುಖಂಡರುಗಳು ಶಂಕ್ರಪ್ಪ ಗೌಡ. ಸುಭಾಷ್ ಗೌಡ. ಚಿನ್ನಾರೆಡ್ಡಿ. ಲಕ್ಷ್ಮಿಕಾಂತ ರೆಡ್ಡಿ. ಮಲ್ಲಿಕಾರ್ಜುನ ನಾಯಕ್. ನರಸಿಂಹ ನಾಯಕ್. ತಿಮ್ಮಪ್ಪ ನಾಯಕ್. ಬಶೀರ್ ಅಹಮದ್ ಬಂದ್ಯಾನವಾಜ್ ಸುತ್ತಮುತ್ತಲಿನ ಗ್ರಾಮಗಳ ಹಿರಿಯ ಮುಖಂಡರುಗಳು, ನಾಮನಿರ್ದೆಶನ ಸದಸ್ಯರುಗಳು ಗ್ರಾ. ಪಂ ಸರ್ವ ಸದಸ್ಯರುಗಳು,ಕಾರ್ಯಕರ್ತರು ಗ್ರಾಮಸ್ಥರು ಉಪಸ್ಥಿತರಿದ್ದರು.

ವರದಿ: ಗಾರಲ ದಿನ್ನಿ ವೀರನ ಗೌಡ

WhatsApp Group Join Now
Telegram Group Join Now
Share This Article
error: Content is protected !!