ಸಿಂಧನೂರು : ಮಾರ್ಚ್ 8 ರಂದು ಅಂತರಾಷ್ಟ್ರೀಯ ಮಹಿಳಾ ದಿನವೂ ತಮ್ಮ ಹಕ್ಕುಗಳನ್ನು ಸಾಧಿಸಲು ಮಹಿಳೆಯರು ಸುಧೀರ್ಘ ಹೋರಾಟಗಳ ಭವ್ಯವಾದ ಇತಿಹಾಸ ವನ್ನು ಸ್ಮರಿಸಲು ಮತ್ತು ಮಹಿಳೆಯರನ್ನು ಸಂಘಟಿಸಲು ಅವರ ಹಕ್ಕಿಗಳಿಗಾಗಿ ಹೋರಾಡಿ ತಮ್ಮ ಪ್ರಾಣ ತ್ಯಾಗ ಮಾಡಿದ ಹುತಾತ್ಮರಿಗೆ ಗೌರವ ಸಲ್ಲಿಸಲು ಇಡೀ ಜಗತ್ತು 8 ನೇ ಮಾರ್ಚ್ 2025 ರಂದು ಎಲ್ಲಾ ಮಹಿಳೆಯರು ಮತ್ತು ಯುವತಿರಿಗಾಗಿ ಹಕ್ಕುಗಳು ಸಮಾನತೆ ಸಬಲೀಕರಣ ಎಂಬ ವಿಷಯದ ಅಡಿಯಲ್ಲಿ ಮಹಿಳಾ ದಿನಾಚರಣೆಯನ್ನು ಅಂಗವಾಗಿ ಸಿಂಧನೂರು ನಗರದ ಎಪಿಎಂಸಿ ರೈತ ಭವನದಲ್ಲಿ ಆಚರಿಸಲು ಅಖಿಲ ಭಾರತ ಕ್ರಾಂತಿಕಾರಿ ಮಹಿಳಾ ಸಂಘಟನೆ ಎಐಆರ್‌ಡಬ್ಲ್ಯೂಓ ಸಂಘಟನೆ ಕರೆ ನೀಡಿದೆ.

ಅಂದು ಬೆಳಗ್ಗೆ 11 ಗಂಟೆಗೆ ನಡೆಯುವ ಮಹಿಳಾ ದಿನಾಚರಣೆ ಗೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕಾಮ್ರೆಡ್ ಎಂ. ಸೆಲ್ವಿ ತಮಿಳುನಾಡು ದಿನಾಚರಣೆಯಲ್ಲಿ ಭಾಗವಹಿಸಿದ್ದಾರೆ ರಾಯಚೂರು ಜಿಲ್ಲೆಯ ವಿವಿಧ ಮಹಿಳಾ ಸಂಘಟನೆ ಕಾರ್ಯಕರ್ತರು ರೈತ ಕೂಲಿ ಕಾರ್ಮಿಕ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ದಿನಾಚರಣೆಗೆ ಭಾಗವಹಿಸಿ ಎಂದು ರುಕ್ಮಣಿ ಗಜ್ಜಲಗಟ್ಟಿ ರಾಜ್ಯ ಮುಖಂಡರು ಕರೆ ನೀಡಿದ್ದಾರೆ.
ವರದಿ:ಬಸವರಾಜ ಬುಕ್ಜನಹಟ್ಟಿ




