ಪಾವಗಡ : ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಬ್ಯಾಡನೂರು ಗ್ರಾಮ ಪಂಚಾಯಿತಿಯ ಈ ಹಿಂದಿನ ಅಧ್ಯಕ್ಷೆ ಶ್ರುತಿ ಅವರು ಮರಣದಿಂದ ತೆರವಾಗಿದ್ದ ಅಧ್ಯಕ್ಷರ ಸ್ಥಾನಕ್ಕೆ ದಿನಾಂಕ. 6/06/25 ಶುಕ್ರವಾರ ಮಧ್ಯಾಹ್ನ 2 ಗಂಟೆಯಲ್ಲಿ ಚುನಾವಣೆ ನಡೆದಿದ್ದು.
ಕಾಂಗ್ರೆಸ್ ಹಾಗೂ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳ ನಡುವೆ ತೀವ್ರ ಹಣಾಹಣಿ ಸೃಷ್ಟಿಯಾಗಿತ್ತು, ಪಂಚಾಯಿತಿ ಕಚೇರಿಯ ಹೊರಭಾಗದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಅಕ್ಕಮ್ಮ ಅವರದ್ದೇ ಜಯ ಎಂದು ಪಿಸು ಪಿಸು ಮಾತುಗಳು ಸಹ ಕೇಳಿ ಬರುತ್ತಿದ್ದವು ಹೊರತು ಚುನಾವಣೆಯಲ್ಲಿ ಈ ಮಾತುಗಳು ನಿಜವಾಗಿಲ್ಲ.
ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಅಕ್ಕಮ್ಮ ಅವರು ಕೇವಲ ಐದು ಮತಗಳನ್ನು ಪಡೆದಿದ್ದು ಸೋಲನ್ನು ಅನುಭವಿಸಿದರು ಜೆಡಿಎಸ್ ಬೆಂಬಲಿತ ಅಭ್ಯರ್ಥಿ ರುಕ್ಮಿಣಿ ಗೋವಿಂದರಾಜು ಅವರು ಎಂಟು ಮತಗಳನ್ನು ಪಡೆದು ಜಯಶೀಲರಾಗಿದ್ದಾರೆ.
ಚುನಾವಣೆಯ ಫಲಿತಾಂಶ ಹೊರಬಂದ ನಂತರ ಬ್ಯಾಡನೂರು ಗ್ರಾಮ ಪಂಚಾಯಿತಿಯ ಹೊರಭಾಗದಲ್ಲಿ ಕೆಲ ಕಾಲ ಬೀಗುವಿನ ವಾತಾವರಣ ಸೃಷ್ಟಿಯಾಗಿತ್ತು,
ನಂತರ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷೆ ರುಕ್ಮಿಣಿ ಗೋವಿಂದರಾಜು ಮಾತನಾಡಿ ನನ್ನ ಆಯ್ಕೆಗೆ ಸಹಕರಿಸಿದ ಸದಸ್ಯರಿಗೆ ಧನ್ಯವಾದಗಳು ಪಂಚಾಯಿತಿಯನ್ನು ಮಾದರಿ ಪಂಚಾಯಿತಿ ಯನ್ನಾಗಿ ಅಭಿವೃದ್ಧಿ ಮಾಡಲು ಪ್ರಯತ್ನಿಸುವೆ ಎಂದರು
ಜೆಡಿಎಸ್ ಪಕ್ಷದ ಗೌರವಾಧ್ಯಕ್ಷ ಗುಂಡಾರ್ಲಹಳ್ಳಿ ಬಲರಾಮರೆಡ್ಡಿ ಮಾತನಾಡಿ ನೂತನ ಗ್ರಾಮ ಅಧ್ಯಕ್ಷೆ ರುಕ್ಮಿಣಿ ಗೋವಿಂದರಾಜು ಅವರಿಗೆ ಅಭಿನಂದನೆ ಸಲ್ಲಿಸಿ ಉತ್ತಮ ರೀತಿಯಲ್ಲಿ ಆಡಳಿತ ನಡೆಸುವಂತೆ ಸಲಹೆ ನೀಡಿದರು, ಪತ್ರಕರ್ತರ ಪ್ರಶ್ನೆಗೆ ಪ್ರತ್ಯುತ್ತರಿಸಿದ ಅವರು ಪಾವಗಡ ತಾಲೂಕಿನಲ್ಲಿ ಜೆಡಿಎಸ್ ಪಕ್ಷ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದು ಪಕ್ಷ ಸೈಲೆಂಟ್ ಆಗಿಲ್ಲ ಕಾರ್ಯಕರ್ತರನ್ನು ಕೂಡಿಸಿಕೊಂಡು ಕೆಲಸ ಮಾಡಲು ಮುಂದಾಗಿದೆ ಎಂದರು
ವಕೀಲರು ಹಾಗೂ ಸದಸ್ಯ , ತಿಪ್ಪೇಸ್ವಾಮಿ ಮಾತನಾಡಿ ನಮ್ಮ ಸಹೋದರಿ ಅಧ್ಯಕ್ಷೆ ರುಕ್ಮಿಣಿ ಗೋವಿಂದರಾಜು ಇವರು ಎಲ್ಲಾ ಗ್ರಾಮ ಪಂಚಾಯಿತಿ ಸದಸ್ಯರು ದೊಂದಿಗೆ ಗ್ರಾಮದ ಜನಗಳಿಂದ ಆಶೀರ್ವಾದದಿಂದ ಜಯ ಸಿಕ್ಕಿದೆ ನಂತರ ನಮ್ಮ ಸಹೋದರಿ ಗ್ರಾಮ ಪಂಚಾಯಿತಿಯಲ್ಲಿ ಅಧಿಕಾರ ವಹಿಸಿಕೊಂಡು ಅಭಿವೃದ್ಧಿ ಕಡೆ ಗಮನವಹಿಸಿ ಅಭಿವೃದ್ಧಿ ಮಾಡ್ತಾರೆಂದು ನನ್ನ ನಂಬಿಕೆ ಇದೆ ಎಂದು ತಿಳಿಸಿರುತ್ತಾರೆ
ಸದಸ್ಯರಾದ, ತ್ರಿವೇಣಿ ಗೋವಿಂದಪ್ಪ ಸವಿತ್ರಮ್ಮ ಶಿವಕುಮಾರ್ ಚಂದ್ರಶೇಖರ್ ಆಚಾರಿ ಶಿಲ್ಪ ಏನ್ ಮಾಜಿ ತಾಪಮಾ ಅಧ್ಯಕ್ಷ ಸದಸ್ಯ ಕೃಷ್ಣ ಬ್ಯಾಡನೂರು ನಿಂಗಣ್ಣ ನಾಗಮಣಿ ಶಿವ ನಾಗೇಂದ್ರಯ್ಯ ನಾಗರಾಜು, ಜೆಡಿಎಸ್ ಪಕ್ಷದ ಮುಖಂಡ ಶಂಕರಪ್ಪ.ರವಿ ಸೇರಿದಂತೆ ಮತ್ತಿತರು ಹಾಜರಿದ್ದರು.
ವರದಿ : ಶಿವಾನಂದ




