ಸಿಂಧನೂರು: ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪುಣ್ಯತಿಥಿ ದಿನವಾದ ಶುಕ್ರವಾರ ನಗರಾಧ್ಯಂತ ಏಕತೆಗಾಗಿ ಓಟ ನಡೆಯಿತು. ಈ ಓಟಕ್ಕೆ ಮಾಜಿ ಸಂಸದ ಕೆ.ವಿರುಪಾಕ್ಷಪ್ಪ. ಬಸವರಾಜ ನಾಡಗೌಡ. ಸೋಮನಗೌಡ ಬಾದರ್ಲಿ ಚಾಲನೆ ನೀಡಿ ಮಾತನಾಡಿದ ಅವರು “ಏಕತೆಗಾಗಿ ಓಟ” ಎಂಬುವುದು ಭಾರತದ ಏಕತೆ ಮತ್ತು ಸಮಗ್ರತೆಯನ್ನು ಸಂಕೇತವಾಗಿಟ್ಟುಕೊಂಡು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದ ಅಂಗವಾಗಿ ಸಿಂಧನೂರು ಉಪ ವಿಭಾಗ ಆಯೋಜಿಸಲಾದ ಒಂದು ವಾರ್ಷಿಕ ಓಟದ ಕಾರ್ಯಕ್ರಮ ಇದರ ಮುಖ್ಯ ಉದ್ದೇಶ ಸರ್ದಾರ್ ಪಾಟೀಲ್ ಅವರ ಕೊಡುಗೆಯನ್ನು ಸ್ಮರಿಸುವುದಲ್ಲದೆ ರಾಷ್ಟ್ರೀಯ ಏಕತೆ ಸಮುದಾಯದ ನಿಶ್ಚಿತಾರ್ಥ ಮತ್ತು ಆರೋಗ್ಯಕರ ಜೀವನ ಶೈಲಿಯನ್ನು ಉತ್ತೇಜಿಸುವ ಮತ್ತು ಸರ್ದಾರ್ ಪಾಟೀಲ್ ಅವರ ಪರಂಪರೆಯನ್ನು ಗೌರವಿಸುವುದು ಹಾಗೂ ನಾಗರಿಕರ ಸುರಕ್ಷತೆ ಹಾಗೂ ಜವಾಬ್ದಾರಿಗಳ ಕುರಿತು ಅರಿವು ಮೂಡಿಸುವದು ಅಂದರು.
ಈ ಸಂದರ್ಭದಲ್ಲಿ ಡಿವೈಎಸ್ಪಿ ಚಂದ್ರಶೇಖರ್ ಜಿ. ಪಿ.ಐ. ವೀರರೆಡ್ಡಿ. ಪೊಲೀಸ್ ಸಿಬ್ಬಂದಿಗಳು ಇದ್ದರೆ
ವರದಿ: ಬಸವರಾಜ ಬುಕ್ಕನಹಟ್ಟಿ




