ಕುಂಭಮೇಳವು ವಿಶ್ವದ ಅತಿದೊಡ್ಡ ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ಜನವರಿ 13 ರಿಂದ ಪ್ರಯಾಗ್ ರಾಜ್‌ನಲ್ಲಿ ಆರಂಭವಾದ ಈ ಅದ್ದೂರಿ ಆಚರಣೆಗೆ ಅಪಾರ ಸಂಖ್ಯೆಯ ಭಕ್ತರು, ಸಾಧುಗಳು ಮತ್ತು ಅಘೋರರು ಪಾಲ್ಗೊಂಡಿದ್ದಾರೆ.
ಕುಂಭಮೇಳ ಪ್ರಾರಂಭವಾಗಿರುವ ದಿನದಿಂದಲೂ ಹಲವಾರು ಸುದ್ದಿಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ನೆಟಿಜನ್‌ಗಳ ಮನವನ್ನು ಸೆಳೆಯುವ ಒಂದು ನಿರ್ದಿಷ್ಟ ಕಥೆಯೆಂದರೆ ಅಘೋರಿ
ಮತ್ತು ರಷ್ಯಾದ ಮಹಿಳೆಯ ಪ್ರೇಮಕಥೆ… ಇತ್ತೀಚೆಗಷ್ಟೇ ಮಹಾ ಕುಂಭಮೇಳಕ್ಕೆ ಬಂದಿದ್ದ ಜೋಡಿಯ ವಿಡಿಯೋ ವೈರಲ್ ಆಗುತ್ತಿದೆ. ಅಘೋರಿ, ರಷ್ಯಾದ ಮಹಿಳೆಯ ಪ್ರೇಮಕಥೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗಿದೆ. ಈ ರಷ್ಯಾದ ಮಹಿಳ ಅಘೋರಿಯನ್ನು ಪ್ರೀತಿಸಿ ಭಾರತದಲ್ಲಿ ನೆಲೆಸಲು ತನ್ನ ದೇಶವನ್ನು ತೊರೆದಿದ್ದಾಳೆ ಎನ್ನಲಾಗಿದೆ.
ಈ ಅಘೋರಿ-ರಷನ್ ಪ್ರೇಮಕಥೆ ಜನರ ಗಮನ ಸೆಳೆಯುತ್ತಿದೆ. ವಿವರಗಳ ಪ್ರಕಾರ. ಭಾರತಕ್ಕೆ ಬಂದ ಈ ರಷ್ಯಾದ ಮಹಿಳ ಅಘೋರಿ ಬಾಬಾನನ್ನು ಪ್ರೀತಿಸುತ್ತಿದ್ದಳು. ಅವಳು ತನ್ನ ದೇಶವಾದ ರಷ್ಯಾವನ್ನು ತೊರೆದಳು, ಅಘೋರಿ ಬಾಬಾನನ್ನು ಮದುವೆಯಾಗಿ ಭಾರತದಲ್ಲಿ ನೆಲೆಸಿದಳು. ಈಗ ಆಕೆ ಅಘೋರಿ ಬಾಬಾನನ್ನು ತನ್ನ ಪತಿ ಎಂದು ಘೋಷಿಸುತ್ತಿದ್ದಾಳೆ.