13 ಬಾರಿ ತಲೆ ಪೆಟ್ಟು ತಿಂದಿದ್ದ ಯುವ ಆಟಗಾರ
ವಿಲ್ ಪುಕೋವ್ಸ್ಕಿ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 36 ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ 57 ಇನ್ನಿಂಗ್ಸ್‌ಗಳಲ್ಲಿ ಬ್ಯಾಟ್ ಬೀಸಿರುವ ಅವರು ಒಟ್ಟು 2350 ರನ್ ಗಳಿಸಿದ್ದಾರೆ. ಈ ವೇಳೆ ಅವರ ಬ್ಯಾಟ್ನಿಂದ 1 ದ್ವಿಶತಕ ಹಾಗೂ 7 ಶತಕಗಳು ಮತ್ತು 9 ಅರ್ಧಶತಕಗಳು ಮೂಡಿಬಂದಿವೆ. ಇನ್ನು 2021 ರಲ್ಲಿ ಭಾರತದ ಟೆಸ್ಟ್ ಪಂದ್ಯದೊಂದಿಗೆ ಅಂತಾರಾಷ್ಟ್ರೀಯ ಕೆರಿಯರ್ ಆರಂಭಿಸಿದ್ದ ಪುಕೋವ್ಸ್ಕಿ ಮೊದಲ ಪಂದ್ಯದಲ್ಲಿ 72 ರನ್ ಬಾರಿಸಿ ಮಿಂಚಿದ್ದರು. ಆ ಬಳಿಕ ಗಾಯದ ಕಾರಣ ಹೊರಗುಳಿದ ಯಂಗ್ ಬ್ಯಾಟರ್ ಇದೀಗ ಕ್ರಿಕೆಟ್ ಕೆರಿಯರ್ ಅಂತ್ಯಗೊಳಿಸುವ ಸುದ್ದಿಯೊಂದಿಗೆ ಮರಳಿದ್ದಾರೆ.
ಆಸ್ಟ್ರೇಲಿಯಾ ತಂಡದ ವಿಲ್ ಪುಕೋವ್ಸ್ಕಿ (Will Pucovski )ಎಲ್ಲಾ ಮಾದರಿಯ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ್ದಾರೆ. ಅದು ಸಹ ತಮ್ಮ 27ನೇ ವಯಸ್ಸಿನಲ್ಲಿ ಎಂಬುದೇ ಅಚ್ಚರಿ. 2021 ರಲ್ಲಿ ಆಸ್ಟ್ರೇಲಿಯಾ ಪರ ಚೊಚ್ಚಲ ಟೆಸ್ಟ್ ಪಂದ್ಯವಾಡಿದ್ದ ಪುಕೋವ್ಸ್ಕಿ ಅವರನ್ನು ಮುಂದಿನ ರಿಕಿ ಪಾಂಟಿಂಗ್ ಎಂದು ಬಣ್ಣಿಸಲಾಗಿತ್ತು.
ಅದರಲ್ಲೂ ಹದಿಹರೆಯದ ವಿಲ್ ಪುಕೋವ್ಸ್ಕಿ ಅವರ ಪುಲ್ ಶಾಟ್ ಎಲ್ಲರ ಗಮನ ಸೆಳೆದಿದ್ದವು. ಆಕ್ರಮಣಕಾರಿ ಬ್ಯಾಟಿಂಗ್ನೊಂದಿಗೆ ಸಂಚಲನ ಸೃಷ್ಟಿಸಿದ್ದ ಪುಕೋವ್ಸ್ಕಿ ಇದೀಗ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ. ಇದಕ್ಕೆ ಮುಖ್ಯ ಕಾರಣ ಅವರ ತಲೆಗೆ 13 ಬಾರಿ ಚೆಂಡು ಬಡಿದಿರುವುದು.
ವಿಲ್ ಪುಕೋವ್ಸ್ಕಿ ಅವರ ವೃತ್ತಿಜೀವನದಲ್ಲಿ ತಲೆಗೆ ಒಟ್ಟು 13 ಬಾರಿ ಚೆಂಡು ಬಡಿದಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಕೆರಿಯರ್ ಆರಂಭಿಸುವ ಮುನ್ನವೇ 9 ಬಾರಿ ಇಂತಹದೊಂದು ಆಘಾತ ಎದುರಿಸಿದ್ದರು. 2024 ರಲ್ಲಿ ದೇಶೀಯ ಪಂದ್ಯದಲ್ಲಿ ರೈಲಿ ಮೆರೆಡಿತ್ ಎಸೆದ ಚೆಂಡು ಅವರ ತಲೆಗೆ ಬಡಿದಿತ್ತು. ಈ ಪಂದ್ಯದ ನಂತರ, ಕ್ರಿಕೆಟ್ ಆಸ್ಟ್ರೇಲಿಯಾ ವೈದ್ಯಕೀಯ ಸಮಿತಿಯು ಅವರ ಭವಿಷ್ಯವನ್ನು ಕಾಪಾಡಿಕೊಳ್ಳಲು ವೃತ್ತಿಜೀವನಕ್ಕೆ ವಿದಾಯ ಹೇಳಬೇಕೆಂದು ಶಿಫಾರಸು ಮಾಡಿದೆ.