Ad imageAd image

ಹೆಗ್ಗನಹಳ್ಳಿ ವಾರ್ಡಿನಲ್ಲಿ ಸ್ಲಂ ಬೋರ್ಡ್ ವತಿಯಿಂದ ಹಕ್ಕು ಪ್ರಮಾಣ ಪತ್ರ ವಿತರಿಸಿದ : ಶಾಸಕ ಎಸ್ ಮುನಿರಾಜು”

Bharath Vaibhav
ಹೆಗ್ಗನಹಳ್ಳಿ ವಾರ್ಡಿನಲ್ಲಿ ಸ್ಲಂ ಬೋರ್ಡ್ ವತಿಯಿಂದ ಹಕ್ಕು ಪ್ರಮಾಣ ಪತ್ರ ವಿತರಿಸಿದ : ಶಾಸಕ ಎಸ್ ಮುನಿರಾಜು”
WhatsApp Group Join Now
Telegram Group Join Now

ಬೆಂಗಳೂರು : ಕ್ಷೇತ್ರದ ಹೆಗ್ಗನಹಳ್ಳಿ ವಾರ್ಡಿನ ಶಿವಾನಂದ ನಗರದಲ್ಲಿ ನಾಲ್ಕೂವರೆ ದಶಕಗಳಿಂದ ವಾಸವಾಗಿರುವ ನಿವಾಸಿಗಳಿಗೆ ಹಕ್ಕುಪತ್ರ ಇಲ್ಲದೇ ದೊಡ್ಡ ಚಿಂತೆಯಾಯಿತು.ಆದರೆ ಸ್ಲಂ ಬೋರ್ಡ್ ನಿಂದ ಹೆಗ್ಗನಹಳ್ಳಿ ವಾರ್ಡಿನ ಬಿಬಿಎಂಪಿ ಕಚೇರಿ ಆವರಣದಲ್ಲಿ ಶಾಸಕ ಎಸ್ ಮುನಿರಾಜು ಹಾಗೂ ಮಾಜಿ ಪಾಲಿಕೆ ಸದಸ್ಯ ಹಾಗೂ ತೋಟಗಾರಿಕೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಎಚ್ ಎನ್ ಗಂಗಾಧರ್, ಮಾಜಿ ಪಾಲಿಕೆ ಸದಸ್ಯೆ ಶ್ರೀಮತಿ ಭಾಗ್ಯಮ್ಮ ಅವರ ಪತಿ ಬಿಜೆಪಿ ಹಿರಿಯ ನಾಯಕ ಕೃಷ್ಣಯ್ಯ, ಹೆಗ್ಗನಹಳ್ಳಿ ವಾರ್ಡಿನ ಬಿಜೆಪಿ ಅಧ್ಯಕ್ಷ ಸಪ್ತಗಿರಿ ಮಂಜುನಾಥ್, ಸಪ್ತಗಿರಿ ಆನಂದ್, ಹೆಗ್ಗನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಸ್ವಾಮಿ, ವಾರ್ಡ ಮಾಜಿ ಅಧ್ಯಕ್ಷ ಬಸವರಾಜ್, ಸ್ಲಂ ಬೋರ್ಡ್ ಎಇಇ ಉಷಾಕಿರಣ್ ಮತ್ತು ರಕ್ಷಿತ್ ಇವರುಗಳ ಸಮ್ಮುಖದಲ್ಲಿ ಶಾಸಕ ಎಸ್ ಮುನಿರಾಜು ಅವರು ಹಕ್ಕು ಪ್ರಮಾಣ ಪತ್ರ ವಿತರಿಸಿದರು.

ನಂತರ ಮಾತನಾಡಿದ ಅವರು ಬಡವರಿಗೆ ಮನೆ ಕಟ್ಟಲು ಸ್ಲಂ ಬೋರ್ಡ್ ವತಿಯಿಂದ ಏಳು ಲಕ್ಷ ಸಬ್ಸಿಡಿ ಮತ್ತು ಬಿಬಿಎಂಪಿಯಿಂದ ಒಂಟಿ ಮನೆ ಯೋಜನೆ ಅಡಿಯಲ್ಲಿ ಐದು ಲಕ್ಷ ನೀಡುತ್ತಾರೆ. ಅದಲ್ಲದೆ ಹಕ್ಕು ಪ್ರಮಾಣ ಸಂಭಂದಿಸಿದಂತೆ ಏನೇ ಸಮಸ್ಯೆಗಳಿದ್ದರೆ ನನಗೆ ನೇರವಾಗಿ ಸಂಪರ್ಕಸಿರಿ ಮತ್ತು ಹಕ್ಕು ಪಾತ್ರಕ್ಕಾಗಿ ಮಧ್ಯವರ್ತಿಗಳಿಗೆ ಹಣ ಕೊಡುವ ಅಗತ್ಯವಿಲ್ಲ ಹಣ ಕಟ್ಟಲು ಆಗದೆ ಇದ್ದವರಿಗೆ ನಾವೇ ಹಣ ಕೊಟ್ಟು ಹಕ್ಕು ಪತ್ರ ಮಾಡಿಸುತ್ತೇನೆ. ಇನ್ನೂ ಉಳಿದ ನಿವಾಸಿಗಳಿಗೆ ಹಕ್ಕುಪತ್ರ ಹಂತ ಹಂತವಾಗಿ ಕೊಡಲು ಕ್ರಮ ತೆಗೆದು ಕೊಳ್ಳುತ್ತೇವೆ ಹಾಗೆ ಈ ಕಾರ್ಯ ನಿರಂತರ ಪ್ರಕ್ರಿಯಲ್ಲಿ ಇರುತ್ತದೆ ಎಂದು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ರಾಜಗೋಪಾಲನಗರ ವಾರ್ಡಿನ ಬಿಜೆಪಿ ಮಾಜಿ ಅಧ್ಯಕ್ಷ ನಾಗೇಶ್, ದಿನೇಶ್, ಕಂಪ್ಯೂಟರ್ ವಿಜಯ ಕುಮಾರ್, ಪುಟ್ಟಸ್ವಾಮಿ, ಶಿವಲಿಂಗಯ್ಯ, ಮುನಿರಾಜು, ವೆಂಕಟೇಶ್ ಸೇರಿದಂತೆ ನಿವಾಸಿಗಳು ಬಿಬಿಎಂಪಿ ಸಿಬ್ಬಂದಿ ವೃಂದದವರು, ಸಮಸ್ತ ನಾಗರಿಕ ಬಂಧು ಭಗನಿಯರು ಇದ್ದರು.

ವರದಿ : ಅಯ್ಯಣ್ಣ ಮಾಸ್ಟರ್ 

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!