Ad imageAd image

ರಾಜ್ಯದಲ್ಲಿ ಅನೇಕ ಆತ್ಮಹತ್ಯೆಗಳು ನಡೆಯುತ್ತಿದ್ದರು ಸರ್ಕಾರ ಕಣ್ಮುಚ್ಚಿ ಕುಂತಿದೆ: ಸಾಬಪ್ಪ ಆರೋಪ.

Bharath Vaibhav
ರಾಜ್ಯದಲ್ಲಿ ಅನೇಕ ಆತ್ಮಹತ್ಯೆಗಳು ನಡೆಯುತ್ತಿದ್ದರು ಸರ್ಕಾರ ಕಣ್ಮುಚ್ಚಿ ಕುಂತಿದೆ: ಸಾಬಪ್ಪ ಆರೋಪ.
WhatsApp Group Join Now
Telegram Group Join Now

ಸೇಡಂ: ಕಲ್ಬುರ್ಗಿ ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡ ಅರಿವು ಗ್ರಂಥಾಲಯದಲ್ಲಿ ಪಾಲಾಕಿಯವರ ಘಟನೆ ಆತ್ಮಹತ್ಯೆಯಲ್ಲ ಅದು ಸರಕಾರಿ ಪ್ರಯೋಜಿತ ಕೊಲೆ ಎಂದು ಆರೋಪ ಮಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕ ಕಾರ್ಯಾಧ್ಯಕ್ಷರಾದ ಸಾಬಪ್ಪ ಪ್ರಕಟಣೆಯನ್ನು ಸಿಬಿಐ ತನಿಖೆಗೆ ವಹಿಸುವಂತೆ ಆಗ್ರಹಿಸಿದರು.

ಮಂಗಳವಾರ ಪತ್ರಿಕಾ ಪ್ರಕಟಣೆ ಹೊರಡಿಸಿದ ಅವರು ದೀಪಾವಳಿ ಬರಲಿದೆ ಕರ್ನಾಟಕದಲ್ಲಿ ಬೆಳಕು ಮೂಡಲಿದೆ ಎಂದು ನಾವೆಲ್ಲ ತಿಳಿದುಕೊಂಡಿದ್ದೆವು ಆದರೆ ಕರ್ನಾಟಕವನ್ನು ಬೆಳಕಿಸುವ ದೀಪಗಳು ಗ್ರಂಥಾಲಯಗಳು ಜ್ಞಾನ ಭಂಡಾರಗಳು ಇವತ್ತು ಆತ್ಮಹತ್ಯೆಯ ಭಂಡಾರಗಳಾಗಿವೆ ಎಂದು ದೂರಿದರು ಕಲ್ಬುರ್ಗಿ ಜಿಲ್ಲೆಯಲ್ಲಿ ನೌಕರ ನ್ಯಾಯಕ್ಕಾಗಿ ಮುಸ್ತರ ನಡೆಸುತ್ತಿದ್ದಾರೆ ಘಟನೆಯನ್ನು ಮುಚ್ಚಿ ಹಾಕುವ ಪ್ರಯತ್ನಗಳು ನಡೆಯುತ್ತಿವೆ. ಎಸ್ಐಟಿ ಆಯೋಗ ರಚಿಸಿರುವ ಸಾಧ್ಯತೆ ಇದೆ.

ಕರೂರಿನಲ್ಲಿ ಸುಮಾರು 50 ಜನ ಸತ್ತಿದರು ಅಲ್ಲಿ ಎಸ್ಐಟಿ ಮಾಡಿ ಆ ಸರಕಾರ ಮುಚ್ಚಿ ಹಾಕಿರುವ ಪ್ರಯತ್ನ ಮಾಡಿತ್ತು ಆದರೆ ಸುಪ್ರೀಂ ಕೋರ್ಟ್ ಸಿಬಿಐ ತನಿಖೆಗೆ ನೀಡಿದೆ ಈ ಆತ್ಮಹತ್ಯ ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡಬೇಕೆಂದು ಒತ್ತಾಯಿಸಿದ್ದರು.

ವೇತನ ಸಿಗದೇ ಗ್ರಂಥ ಪಾಲಕರ ಆತ್ಮಹತ್ಯೆ, ಬಿಲ್ ಪಾವತಿ ಆಗದೆ ಗುತ್ತಿಗೆದಾರ ಆತ್ಮಹತ್ಯ, ವರ್ಗಾವಣೆ ಕಮಿಷನ್ ದಂಧೆಯಲ್ಲಿ ಪೋಲಿಸ್ ಅಧಿಕಾರಿಗಳು, ನಿಗಮದಲ್ಲಿ ಸರಕಾರ ಸಾಲ ಸಿಗದೇ ಮೈಕ್ರೋ ಫೈನಾನ್ಸ್ ಕಿರುಕುಳದಲ್ಲಿ ಬಡವರ ಆತ್ಮಹತ್ಯೆ, ಅತಿವೃಷ್ಟಿಯಿಂದ ಬೆಳೆಹಾನಿ ಪರಿಹಾರ ಸಿಗದೇ ಮೂರುನೂರಕ್ಕೂ ಹೆಚ್ಚು ರೈತರು ಆತ್ಮಹತ್ಯೆಗಳಾಗಿದ್ದು ಯಾವುದೇ ರೀತಿಯ ಕ್ರಮ ಕೈಗೊಳ್ಳಲು ಮುಂದಾಗುತ್ತಿಲ್ಲ ಇದು ಮಾನವೀಯತೆ ಮರೆತಿರುವ ಸರಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವರದಿ : ವೆಂಕಟಪ್ಪ ಕೆ ಸುಗ್ಗಾಲ್.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!