Ad imageAd image

ಗರ್ಭಿಣಿ ತಾಯಿ ಮಗುವಿನ ಜೀವ ಉಳಿಸಿದ ಪತ್ರಕರ್ತ ಸಚಿನ ಸಾಲಿಮಠ

Bharath Vaibhav
ಗರ್ಭಿಣಿ ತಾಯಿ ಮಗುವಿನ ಜೀವ ಉಳಿಸಿದ ಪತ್ರಕರ್ತ ಸಚಿನ ಸಾಲಿಮಠ
WhatsApp Group Join Now
Telegram Group Join Now

ಇಲಕಲ್ಲ : 03 ಮಾ. ನಗರದ ಖಾಸಗಿ ಆಸ್ಪತ್ರೆ ಒಂದರಲ್ಲಿ ಕುಷ್ಟಗಿ ನಗರದಿಂದ ಗರ್ಭಿಣಿ ತಾಯಿಯೊಬ್ಬರು ಆಸ್ಪತ್ರೆಗೆ ದಾಖಲಾಗಿದ್ದರು, ಪ್ರಸವ ವೇದನೆಯಿಂದ ಬಳಲುತ್ತಿದ್ದ ಗರ್ಭಿಣಿ ತಾಯಿ ಹೆರಿಗೆ ಶಸ್ತ್ರಚಿಕಿತ್ಸೆ ತುರ್ತಾಗಿ O+ ರಕ್ತಬೇಕಾಗಿತ್ತು, ಕುಟುಂಬಸ್ಥರು ರಕ್ತ ಕ್ಕಾಗಿ ಬ್ಲಡ್ ಬ್ಯಾಂಕ್ ಹೋದಾಗ ೦+ ರಕ್ತವು ಸಿಕ್ಕಿರುವುದಿಲ್ಲ ಕಾರಣ ಕುಟುಂಬಸ್ಥರಯ ದಾರಿದೋಚದಂತಾಗಿ ತಕ್ಷಣ ಇಳಕಲ್ಲ ರಕ್ತದಾನಿಗಳಿಗಳನ್ನು ಸಂಪರ್ಕಿಸಲು ಪ್ರಾರಂಭಸಿದರು. ತಡರಾತ್ರಿ 12:20 ನಿಮಿಷಗಳಾದರೂ ರಕ್ತ ಸಿಗದ ಕಾರಣ ಈ ವಿಷಯ ತಿಳಿದು ನಗರದ ಪತ್ರಕರ್ತ ಯುವಕ ಮಿತ್ರ ಸಚಿನ ಸಾಲಿಮಠ ಸ್ಥಳಕ್ಕೆ ಧಾವಿಸಿ ಸರಿಯಾದ ಸಮಯಕ್ಕೆ ರತ್ತದಾನ ಮಾಡಿ ಗರ್ಭಿಣಿ ತಾಯಿ ಮತ್ತು ಮಗುವಿನ ಜೀವ ಉಳಿಸಿದಂತೆ ಆಗಿದೆ.

ಈ ಕುರಿತು ಮಾತನಾಡಿದ ಪತ್ರಕರ್ತ ಸಚಿನ ಸಾಲಿಮಠ ಇಂದು ನನ್ನ ಸಹೋದರ ಸಮಾನರಾದ ಸಮಾಜ ಸೇವಕರಾದ ಅಶೋಕ ಚಲವಾದಿ ಮತ್ತು ಸವಿತಾ ಚಲವಾದಿ ದಂಪತಿಗಳಿಗ ೧೭ ನೇ ವಿವಾಹ ವಾರ್ಷಿಕೋತ್ಸವದಂದು ಮುಂಜಾನೆ ಸ್ವಯಂಪ್ರೇರಿತ ವಾಗಿ ಮಾಡಲು ಇಚ್ಚಿಸಿದ್ದೆ ಕಕಾತಾಳಿಯವಂತೆ ತುರ್ತು ರಕ್ತ ಬೇಕೆಂದು ಸ್ನೇಹಿತ ಪವನ ಪವಾರ ಕರೇ ಮಾಡಿದಾಗ ಪುಣ್ಯದ ಕಾರ್ಯ ಎಂದು ರತ್ತದಾನ ಮಾಡಿದ್ದೆನೆ. ಸದ್ಯ ಮಗು ಮತ್ತು ತಾಯಿ ಆರೋಗ್ಯದಿಂದ ಇರುವುದು ನನಗೆ ಖುಷಿ ತಂದಿದೆ ಎಂದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!