Ad imageAd image

SAD NEWS : ಕಾಂಗ್ರೆಸ್ ಶಾಸಕ ಹೆಚ್.ವೈ. ಮೇಟಿ ಇನ್ನಿಲ್ಲ 

Bharath Vaibhav
SAD NEWS : ಕಾಂಗ್ರೆಸ್ ಶಾಸಕ ಹೆಚ್.ವೈ. ಮೇಟಿ ಇನ್ನಿಲ್ಲ 
WhatsApp Group Join Now
Telegram Group Join Now

ಬೆಂಗಳೂರು : ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಹೆಚ್.ವೈ. ಮೇಟಿ (79) ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಅನಾರೋಗ್ಯದ ಹಿನ್ನೆಲೆಯಲ್ಲಿ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇದೀಗ ನಿಧನರಾಗಿದ್ದಾರೆ.

ಅನಾರೋಗ್ಯದಿಂದ ಬೆಂಗಳೂರಿನ ಕಾಸಿಗೆ ಆಸ್ಪತ್ರೆಯಲ್ಲಿ ಎಚ್ ವೈ ಮೇಟಿ ದಾಖಲಾಗಿದ್ದರು, ಚಿಕಿತ್ಸೆಫಲಕಾರಿಯಾಗದೆ ಶಾಸಕ ಎಚ್ ವೈ ಮೇಟಿ ನಿಧನರಾಗಿದ್ದಾರೆ.

ಕಳೆದ ಕೆಲವು ದಿನಗಳ ಹಿಂದೆ ಸಿಎಂ ಸಿದ್ದರಾಮಯ್ಯ ಅವರು ಕೂಡ ಶಾಸಕ ಎಚ್ ವೈ ಮೇಟಿ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದರು.

ಹುಲ್ಲಪ್ಪ ಯಮನಪ್ಪ ಮೇಟಿ ಒಬ್ಬ ಭಾರತೀಯ ರಾಜಕಾರಣಿ. ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸದಸ್ಯರು , 14 ನೇ ಕರ್ನಾಟಕ ವಿಧಾನಸಭೆಯ ಸದಸ್ಯರು ಮತ್ತು ಸಿದ್ದರಾಮಯ್ಯ ಸಂಪುಟದಲ್ಲಿ ಮಾಜಿ ಸಚಿವರು . 2013 ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ , ಮೇಟಿ ಬಾಗಲಕೋಟೆ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದರು, 2018 ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ, ಅವರು ಬಿಜೆಪಿಯ ವೀರಭದ್ರಯ್ಯ ಚರಂತಿಮಠ ವಿರುದ್ಧ 15,934 ಮತಗಳ ಅಂತರದಿಂದ ಸೋತರು. ಅದಕ್ಕೂ ಮೊದಲು, ಅವರು 1989 ರಿಂದ 1999 ರವರೆಗೆ ಮತ್ತು 2004 ರಿಂದ 2007 ರವರೆಗೆ ಗುಳೇದಗುಡ್ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದರು

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!