——————————–ನೂತನ ಮುಖ್ಯಾಧಿಕಾರಿ ಸುಂದರ ರುಗ್ಗೆಯವರಿಗೆ ಸ್ವಾಗತ
————————————ಅಧಿಕಾರದ ಚೌಕಟ್ಟಿನಲ್ಲಿ ಅಭಿವೃದ್ಧಿ ಸಾಧಿಸಿದ ಹೆಮ್ಮೆ
ಚಿಕ್ಕೋಡಿ: ತಾಲೂಕಿನ ಸದಲಗಾ ಪುರಸಭೆ ಮುಖ್ಯಾಧಿಕಾರಿ ಶಿವಾನಂದ ಭೋಸಲೆಯವರಿಗೆ ಬೀಳ್ಕೊಡುಗೆ ಹಾಗೂ ನೂತನ ಮುಖ್ಯಾಧಿಕಾರಿ ಸುಂದರ ರುಗ್ಗೆಯವರಿಗೆ ಸ್ವಾಗತ ಸಮಾರಂಭ ಪುರಸಭೆ ಸಿಬ್ಬಂದಿ ಪೌರ ಕಾರ್ಮಿಕರರಿಂದ ನಡೆಯಿತು.

ಪುರಸಭೆ ಕಾರ್ಯಾಲಯದಲ್ಲಿ ನಡೆದ ಸ್ವಾಗತ ಹಾಗು ಬಿಳ್ಕೊಡುವ ಸಮಾರಂಭದ ಪ್ರಾರಂಭದಲ್ಲಿ ಪುರಸಭೆಯ ಸಿಬ್ಬಂದಿಯ ಉಪಸ್ಥಿತಿಯಲ್ಲಿ ಕಿರಿಯ ಅಭಿಯಂತರರಾದ ಜಿ. ಆರ್ ಪತ್ತಾರ ಅವರ ಹಸ್ತದಿಂದ ವರ್ಗಾವಣೆಗೊಂಡ ಶಿವಾನಂದ ಭೋಸಲೆ ಹಾಗೂ ಅಧಿಕಾರ ಸ್ವೀಕರಿಸಿದ ನೂತನ ಮುಖ್ಯಾಧಿಕಾರಿ ಸುಂದರ ರುಗ್ಗೆಯವರಿಗೆ ಶಾಲ, ಶ್ರೀಫಲ್ ಪುಷ್ಪಗುಚ್ಛ ನೀಡಿ ಸನ್ಮಾನಿಸಲಾಯಿತು.
ಈ ಸಂಧರ್ಭದಲ್ಲಿ ಸ್ವಾಗತ ಸ್ವೀಕರಿಸಿ ಮಾತನಾಡಿದ ಶಿವಾನಂದ ಭೋಸಲೆ ಸಾರ್ವಜನಿಕರ ಕುಂದುಕೊರತೆ ಗಮನದಲ್ಲಿಟ್ಟುಕೊಂಡು, ಪುರಸಭೆಯ ಆಡಳಿತ ಮಂಡಳಿ ಯ ಸಹಕಾರ್ಯದೊಂದಿಗೆ ಸದಲಗಾ ಪುರಸಭೆ ವ್ಯಾಪ್ತಿಯಲ್ಲಿ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಅಭಿವೃದ್ಧಿ ಕಾರ್ಯ ನಿರ್ವಹಿಸಿದ ನನಗೆ ಸಮಾಧಾನ ತಂದಿದೆ.
ವಿಶೇಷವೆಂದರೆ ಕೇಂದ್ರ ಬಸ್ ನಿಲ್ದಾಣದಲ್ಲಿಯ ಫೇವರ್ ಬ್ಲಾಕ್ ಹಾಕುವುದು.ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ನದಿ ದಡದಲ್ಲಿಯ ಜಾಕ್ವೆಲ್ ನಲ್ಲಿ ಕೆಟ್ಟು ನಿಂತ ವಿದ್ಯುತ್ ಪಂಪಗಳ ರಿಪೇರಿ ಕಾರ್ಯ, ಪಟ್ಟಣ ಸ್ವಚ್ಛತೆಗೆ ಮಹತ್ವ ನೀಡಿ ಬೇಕಾಗುವ ವಾಹನ, ಜೆಸಿಬಿ ಯಂತ್ರ, ಟ್ರ್ಯಾಕ್ಟರ, ಫಾಂಗಿಂಗ ಮಷಿನ್ ಖರೀದಿ, ಏಕವೀರಿ ಕೆರೆ ಸ್ವಚ್ಛತೆಗೆ ಅನುದಾನ ಸೇರಿ, ಸಕಾಲಕ್ಕೆ ಸಿಬ್ಬಂದಿಯ ಸಂಬಳ ನೀಡುವ ವ್ಯವಸ್ಥೆ ಮಾಡಿದ್ದು ಎರಡು ವರ್ಷಗಳ ಅವಧಿಯಲ್ಲಿ ಸಮಾಧಾನ ತಂದಿದೆ ಎಂದರು.
ಇದೇ ವೇಳೆ ಸಿಬ್ಬಂದಿಗಳಾದ ಸಂಜು ಗುಡೆ , ಐ. ಬಿ. ಶೇಷಮ್ ಮಾತನಾಡಿದರು. ಸಮಾರಂಭ ದಲ್ಲಿ ವಿಜಯ ಕೊಕೆನೆ, ಕೃಷ್ಣಾ ಬಾಗಡಿ, ಎಂ.ಬಿ.ಗೌಂಡಿ, ಜಿ.ಎಸ್. ಕಾಂದೇಕರ್. ಪಿ.ಬಿ.ಗರದಾಳೆ, ನೀರು ಪೂರೈಕೆ, ಸ್ವಚ್ಛತೆಯ ವಿಭಾಗದ ಕಾರ್ಮಿಕರು, ಉಪಸ್ಥಿತರಿದ್ದರು.
ವರದಿ: ಮಹಾವೀರ ಚಿಂಚಣೆ




