ಕಾಗವಾಡ :ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ ಬೆಂಗಳೂರು ಇವರ ವತಿಯಿಂದ ದಿನಾಂಕ 14ನೇ ನವೆಂಬರ 2025ರಂದು ಜರುಗಿದ 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರಂಭದಲ್ಲಿ ಜ್ಞಾನ ಗುರುದೇವ ಆಶ್ರಮ ಕಾಗವಾಡ ಯತೀಶ್ವರಾನಂದ ಮಹಾಸ್ವಾಮಿಜಿ
ಕಲ್ಲಪ್ಪಣ್ಣಾ ಪಾ ಮಗೆಣ್ಣವರ, ಹಾಗೂ ಸಿರುಗುಪ್ಪಿ ಶುಗರ್ ಚೇರಮನ ಹಾಗೂ ಕರ್ನಾಟಕ ರಾಜ್ಯ ವಿಧಾನ ಸಭಾ ಮಾಜಿ ಸದಸ್ಯರು ಇವರಿಗೆ ಕರ್ನಾಟಕ ರಾಜ್ಯದ ಸನ್ಮಾನ್ಯ ಮುಖ್ಯಮಂತ್ರಿಗಳು “ಸಹಕಾರ ರತ್ನ” ಪ್ರಶಸ್ತಿಯನ್ನು ನೀಡಿ ಗೌರವಿಸಿರುತ್ತಾರೆ.

ಆದ್ದರಿಂದ, ದಿನಾಂಕ 19ನೇ ನವೆಂಬರ 2025 ಬುಧವಾರ ರಂದು ಶ್ರೀ.ಕಲ್ಲಪ್ಪಣ್ಣಾ ಪಾ ಮಗೆಣ್ಣವರ, ಚೇರಮನ ಹಾಗೂ ಮಾಜಿ ಶಾಸಕ ಇವರಿಗೆ ಕಾರ್ಖಾನೆಯ ಆಡಳಿತ ಕಛೇರಿಯ ಆವರಣಲ್ಲಿ ಸತ್ಕಾರ ಸಮಾರಂಭವನ್ನು ಆಯೋಜಿಸಲಾಗಿದೆ. ಸದರಿ ಸತ್ಕಾರ ಸಮಾರಂಭ ಕಾರ್ಯಕ್ರಮದಲ್ಲಿ ತಾವೆಲ್ಲರೂ ಭಾಗವಹಿಸಿ ಶೋಭೆ ತಂದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರು ಕಾರ್ಯನಿರ್ವಹಣೆ ಹಾಗೂ ಕಾರ್ಖಾನೆಯ ವ್ಯವಸ್ಥಾಪಕರು ಅರುಣ ಬಿ. ಫರಾಂಡೆ ಮಹಾವೀರ ಸುಗ್ಗನ್ನರ್ ಕೃಷಿ ಅಧಿಕಾರಿ ಮಹಾವೀರ ಬಿರನಾಳೆ ವಿರೇಂದ್ರ ಜಾಡರ್ ಸುಭಾಷ್ ಕಟಾರೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ:ಚಂದ್ರಕಾಂತ ಕಾಂಬಳೆ




