ಚೇಳೂರು :ತಾಲ್ಲೂಕಿನ ಮದೀನಾ ಮಸೀದಿಯಲ್ಲಿ 30ದಿನಗಳ ಕಾಲ ಉಪವಾಸದ ಪ್ರಯುಕ್ತ ಸೇಹರಿ ಕೂಟವನ್ನು ಎಲ್ಲಾ ನೌಜವಾನರ ಬಳಗದಿಂದ ಏರ್ಪಡಿಸಲಾಗಿದ್ದು, ಸೇಹರಿ ಕೂಟಕ್ಕಾಗಿ ಎಲ್ಲಾ ಮುಸ್ಲಿಂ ಬಾಂಧವರು ಸೇಹರಿಯನ್ನು ಮಾಡುತ್ತಾರೆ, ದಿನೇ -ದಿನೇ ಬಿಸಿ ಮುದ್ದೆ,ಪಲ್ಯ, ಚಿಕನ್ ಬಿರಿಯಾನಿ,ಚಪಾತಿ,ರಕ -ರಕದ ಆಹಾರದ ತಿಂಡಿಯ ಪದಾರ್ಥಗಳನ್ನು ತಯಾರಿಸುತ್ತಾರೆ, ಅಲ್ಲದೇ ಇದೇ ರೀತಿ ವರ್ಷ -ವರ್ಷವು ಸೇಹರಿ ಕೂಟವನ್ನು ಮುಂದುವರಿಯಲಿ ಎಂದು ಆ ದೇವರಲ್ಲಿ ಪ್ರಾರ್ಥನೆ ಮಾಡಿದರು.

ಈ ಸಂದರ್ಭದಲ್ಲಿ ಮದೀನಾ ಮಸೀದಿಯ ಅಧ್ಯಕ್ಷರಾದ ಅಲೀಂ ಭಾಷಾ, ನಯಾಜ್ ಮೆಕ್ಯಾನಿಕ್, ಖಾದರ್ ವಲಿ, ಸಾದಿಕ್ ಸೈಬರ್, ನವಾಜ್, ಮಾಭಾಷಾ, ಶಬ್ಬೀರ್, ಇನ್ನು ಮಸೀದಿಯ ಸಿಬ್ಬಂದಿಗಳು ಹಾಗೂ ಹಿರಿಯರು ಹಾಜರಿದ್ದರು.
ವರದಿ : ಯಾರಬ್. ಎಂ




