Ad imageAd image

ಸೈದಾಪುರ ರೈಲ್ವೆ ಗೇಟ್ ಹತ್ತಿರ ಮುಖ್ಯ ರಸ್ತೆಯಲ್ಲಿ ಬಾರ್ ಮತ್ತು ರೆಸ್ಟೋರೆಂಟ್‌ಗೆ ಅನುಮತಿ ನೀಡದಂತೆ ಮನವಿ

Bharath Vaibhav
ಸೈದಾಪುರ ರೈಲ್ವೆ ಗೇಟ್ ಹತ್ತಿರ ಮುಖ್ಯ ರಸ್ತೆಯಲ್ಲಿ ಬಾರ್ ಮತ್ತು ರೆಸ್ಟೋರೆಂಟ್‌ಗೆ ಅನುಮತಿ ನೀಡದಂತೆ ಮನವಿ
WhatsApp Group Join Now
Telegram Group Join Now

ಗುರುಮಾಠಕಲ್ : ಯಾದಗಿರಿ ತಾಲೂಕಿನ ಸೈದಾಪುರ ರೈಲ್ವೆ ಗೇಟ್ ಹತ್ತಿರ ಮುಖ್ಯ ರಸ್ತೆಯಲ್ಲಿ ಬಾರ್ ಮತ್ತು ರೆಸ್ಟೋರೆಂಟ್‌ಗೆ ಅನುಮತಿ ನೀಡದಂತೆ ಮನವಿ.

ಗುರುಮಾಠಕಲ್ | ಸೈದಾಪುರ ಪೇಟೆ ಸುತ್ತಮುತ್ತಲಿನ ನಿವಾಸಿಗಳು ಹಾಗೂ ಸಾಮಾಜಿಕ ಸಂಘಟನೆಗಳ ಪ್ರತಿನಿಧಿಗಳಾಗಿ ಈ ಮೂಲಕ ತಮ್ಮ ಬಳಿ ಮನವಿ ಮಾಡಬೇಕೆಂಬುದು ನಮ್ಮ ಆಶಯವಾಗಿದೆ.

ಯಾದಗಿರಿ ತಾಲೂಕಿನ ಸೈದಾಪುರ ರೈಲ್ವೆ ಗೇಟ್ ಹತ್ತಿರದ ಮುಖ್ಯ ರಸ್ತೆಯ ಬದಿಯಲ್ಲಿ ಬಾರ್ ಮತ್ತು ರೆಸ್ಟೋರೆಂಟ್‌ಗೆ ಅನುಮತಿ ನೀಡಲಾಗುತ್ತಿದೆ ಎಂಬ ಮಾಹಿತಿ ನಮಗೆ ಲಭಿಸಿದೆ. ಈ ಪ್ರದೇಶದಲ್ಲಿ ಸುತ್ತಲೂ ನಿವಾಸಗಳು, ಶಾಲೆಗಳು, ಹಾಗೂ ರೈಲ್ವೆ ಹಳ್ಳಿ ಇದ್ದು, ಇಲ್ಲಿನ ಸಾರ್ವಜನಿಕರಿಗೆ ಇದರಿಂದ ಬಹಳಷ್ಟು ತೊಂದರೆಗಳು ಉಂಟಾಗುವ ಸಾಧ್ಯತೆ ಇದೆ. ಕುಡಿತದ ಕಾಟ, ಗಲಾಟೆ, ಮಹಿಳೆಯರ ಭದ್ರತೆಗೆ ಅಪಾಯ ಮತ್ತು ಅವಘಡಗಳು ಸಂಭವಿಸುವ ಆತಂಕವಿದೆ.

ಈ ಪ್ರದೇಶವು ಬಾರ್ ಮತ್ತು ರೆಸ್ಟೋರೆಂಟ್ ನಡೆಸಲು ಸೂಕ್ತವಲ್ಲ ಎಂಬುದು ನಮ್ಮ ನಂಬಿಕೆ. ಇದಲ್ಲದೆ, ಈಗಾಗಲೇ ಯಾದಗಿರಿ ಬಸವೇಶ್ವರ ವೃತ್ತದ ಬಳಿ ವಿಜಯಲಕ್ಷ್ಮೀ ಬಾರ್ ಹಾಗೂ ರೇಣುಕಾ ಬಾರ್ ಇವೆ. ಇವುಗಳನ್ನು ಕೂಡ ಸುಮಾರು 5–6 ಕಿಲೋಮೀಟರ್ ದೂರದ ಪ್ರತ್ಯೇಕ ವಾಣಿಜ್ಯ ಪ್ರದೇಶಕ್ಕೆ ಸ್ಥಳಾಂತರಗೊಳಿಸುವಂತೆ ಮನವಿ ಮಾಡುತ್ತೇವೆ.

ಇದಕ್ಕೆ ತಕ್ಕ ಕ್ರಮ ಕೈಗೊಳ್ಳದಿದ್ದಲ್ಲಿ, ನಾವು ಇಡೀ ಸಾರ್ವಜನಿಕರೊಂದಿಗೆ ಉಗ್ರ ಹೋರಾಟವನ್ನು ಆರಂಭಿಸುವ ದಾರಿ ಹೊರಟ್ಟಬೇಕಾಗುತ್ತದೆ ಎಂಬುದಾಗಿ ಮುನ್ಸೂಚನೆ ನೀಡುತ್ತೇವೆ.

ಈ ಮನವಿಗೆ ಸೂಕ್ತವಾದ ಸ್ಪಂದನೆ ನೀಡಲಾಗುತ್ತದೆ ಎಂಬ ನಂಬಿಕೆಯೊಂದಿಗೆ,

ಜಿಲ್ಲಾ ಅಧ್ಯಕ್ಷರು – ಮಾದಿಗ ದಂಡೋರ MRPS, ಯಾದಗಿರಿ ಜಿಲ್ಲಾ ಉಪಾಧ್ಯಕ್ಷರು – ಮಲ್ಲು ದೊಡ್ಮನಿ (ಬೆಳಗೇರಾ) ಜಿಲ್ಲಾ ಕಾರ್ಯಧ್ಯಕ್ಷರು – ದೇವುಲಿಂಗೇರಿ ಸದಸ್ಯರು: ಸಿದ್ದಪ್ಪ ದೊಡ್ಡಮನಿ, ಮಲ್ಲಿಕಾರ್ಜುನ ಕತ್ತಿ, ಲಕ್ಷ್ಮಣ ಬಂದಳ್ಳಿ, ತಿಮ್ಮಣ್ಣ ಹಳಗೇರಾ, ಶಿವಶಂಕರ್ ದೊಡ್ಮನಿ, ವಿಲ್ಸನ್ ಹಾಲಗೇರಾ

ವರದಿ : ರವಿ ಬುರನೋಳ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!