Ad imageAd image

ಸಜ್ಜಲಶ್ರೀ ಶಿಕ್ಷಣ ಸಂಸ್ಥೆಯ ಸ್ನೇಹ ಸಮ್ಮೇಳನ ಕಾರ್ಯಕ್ರಮ

Bharath Vaibhav
ಸಜ್ಜಲಶ್ರೀ ಶಿಕ್ಷಣ ಸಂಸ್ಥೆಯ ಸ್ನೇಹ ಸಮ್ಮೇಳನ ಕಾರ್ಯಕ್ರಮ
WhatsApp Group Join Now
Telegram Group Join Now

ಇಲಕಲ್   ಸಜ್ಜಲಶ್ರೀ ಶಿಕ್ಷಣ ಸಂಸ್ಥೆಯ ಸ್ನೇಹ ಸಮ್ಮೇಳನದ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟನೆ ಮಾಡುತ್ತಿರುವ ಸಜ್ಜಲಗುಡ್ಡ -ಕಂಬಳಿಹಾಳದ ಪರಮ ಪೂಜ್ಯ ದೊಡ್ಡಬಸವಾರ್ಯ ತಾತನವರು. ಹಾಗೂ ಗಣ್ಯ ಮಾನ್ಯರು.

ಕಂದಗಲ್ಲ : ಪುರಾಣ ಪ್ರವಚನ ಪುಣ್ಯಕಥೆಗಳು ಮನುಷ್ಯನ ಜೀವನಕ್ಕೆ ದಾರಿದೀಪಗಳಾದರೆ ಶಾಲೆಯಲ್ಲಿ ನೆಡೆಯುವ ಶೈಕ್ಷಣಿಕ, ಸಾoಸ್ಕೃತಿಕ, ಕ್ರೀಡೆಗಳು, ಶಿಕ್ಷಣ, ಸೇರಿದಂತೆ ಪ್ರತಿಯೊಂದು ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ದಾರಿದೀಪಗಳು ಎಂದು ಸಜ್ಜಲಶ್ರೀ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ 33 ನೇ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ 7 ಮತ್ತು 10 ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ಪಂಪಣ್ಣ ಸಜ್ಜನ ಮಾತನಾಡಿದರು.

ಸುಕ್ಷೇತ್ರ ಸಜ್ಜಲಗುಡ್ಡ -ಕಂಬಳಿಹಾಳದ ಪರಮಪೂಜ್ಯಶ್ರೀ ದೊಡ್ಡಬಸವಾರ್ಯ ತಾತನವರು ದಿವ್ಯ ಸಾನಿಧ್ಯ ವಹಿಸಿ ಕಾರ್ಯಕ್ರಮ ಉದ್ಘಾಟನೆ ಮಾಡಿದರು.ಮು ಅತಿಥಿಗಳಾಗಿ ಸದಾಶಿವ ಗುಡಗುಂಟಿ ಕ್ಷೇತ್ರ ಸಮನ್ವಯಧಿಕಾರಿಗಳು, ವಿನೋದ ಭೋವಿ ಬಿ ಆರ್ ಪಿ ಹುನಗುಂದ,ಎ ಎಚ್ ಗೌಡರ ,ಶಿಕ್ಷಣ ಸಂಯೋಜಕರು ಕರಡಿ ವಲಯ, ವಿನಾಯಕ ಸಬರದ, ಸಿ ಆರ್ ಪಿ ಕಂದಗಲ್ಲ,ಶಾಂತಕುಮಾರ ಕುಟಗಮರಿ ಸಿ ಆರ್ ಪಿ ನಂದವಾಡಗಿ ಡಿ ಎಸ್ ಹುಜರತಿ ಕಾರ್ಯದರ್ಶಿಗಳು, ಹಾಗೂ ಎಸ್ ಡಿ ಎಂ ಸಿ ಸದಸ್ಯರಾದ ಮಹಾಂತೇಶ ಕಡಿವಾಲ ಬಸೆಟ್ಟೆಪ್ಪ ಸಜ್ಜನ, ಶೇಖಯ್ಯ್ ಗುರುವಿನಮಠ,ಡಿ ಎಸ್ ಸಿಂಪಿ,ಎಂ ಎಸ್ ಕಡಿವಾಲ,ಎಸ್ ಟಿ ತೋಟದಸ್ವಾಮೀಮಠ, ವೀರೇಶ ಚ ಶಿಂಪಿ,, ಕೆ ಎಚ್ ಕರಡಿ,, ಎಸ್ ಬಿ ಕಾಳಿಪ್ರಸಾದ, ಶೇಖರಪ್ಪ ಕಡಿವಾಲ, ಬೋರಮ್ಮ ಕರಕಂಠಿ, ಅಥಿತಿಗಳಾಗಿ ಆಗಮಿಸಿದ್ದರು.

ಈ ಸಂಧರ್ಭದಲ್ಲಿ ಈ ಶಾಲೆಯಲ್ಲಿ ಕಲಿತು ಪದವಿಧರರಾಗಿ ಉನ್ನತ ಹುದ್ದಯಲ್ಲಿ ಸೇವೆ ಸಲ್ಲಿಸುತ್ತಿರುವ ಜಾವಿದ ಬಾಗವಾನ ದಾನಿಗಳಾದ ವೆಂಕಟೇಶ ಭೋವಿ, , ಎಸ್ ಎಸ್ ಎಲ್ ಸಿ ಯಲ್ಲಿ ಶಾಲೆಗೆ ಪ್ರಥಮ ಸ್ಥಾನ ಗಳಿಸಿದ ಶಶಿಕುಮಾರ ಯರದಾಳ, ವಸತಿ ಶಾಲೆಗಳಿಗೆ ಆಯ್ಕೆಯಾದ ಕಿರಣ ಹರಣಶಿಕಾರಿ ರುಕ್ಷಾನ ಬೇಗಂ ಬಲಕುಂದಿ,ರಿಯಾಜ್ ಮುಲ್ಲಾ,ಯಲ್ಲಾಲಿಂಗ ಛಲವಾದಿ,ಅಪ್ಸನಾ ಕುದರಿ,ಅಮಿರಹಮ್ಜ ಬಲಕುಂದಿ,ನೂತನ ಪಿ ಎಲ್ ಡಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾದ ರುದ್ರಪ್ಪ ಶೀಲವಂತರ, ಹಾಗೂ ಶಿಕ್ಷಕರಾದ ಆರ್ ಬಿ ತಳ್ಳಿಕೇರಿ, ಎಂ ಜಿ ಪುರದನ್ನವರ ಜಿ ಜಿ ಮೇಟಿ, ಗುಂಡನಗೌಡ ಬ್ಯಾಲಿಹಾಳ, ಇವರುಗಳನ್ನು ಸನ್ಮಾನಿಸಲಾಯಿತು.

ಪ್ರೌಢಶಾಲೆ ಮು, ಗು, ಡಿ ಎಸ್ ಮಲ್ಲಾಪುರ ಸ್ವಾಗತಿಸಿದರು,ಪ್ರಾಥಮಿಕ ಶಾಲೆ ಮು, ಗು, ಎಸ್ ಎ ಉಪನಾಳ ವರದಿ ವಾಚನ ಮಂಡಿಸಿದರು,ಶಿಕ್ಷಕಿಯರಾದ ಎನ್ ಎಸ್ ಕಡಿವಾಲ ಪುಷ್ಟ ವಿತರಣೆ ಕಾರ್ಯಕ್ರಮ ನೆಡೆಸಿಕೊಟ್ಟರು, ಎ ಎಸ್ ಹುನಗುಂದ ಸನ್ಮಾನ ಕಾರ್ಯಕ್ರಮ ನೆಡೆಸಿದರು ದೇವಮ್ಮ ಓಲೇಕಾರ ಪ್ರಶಸ್ತಿ ವಿತರಣೆ ನೆಡೆಸಿಕೊಟ್ಟರು ನಂತರ ಸಹ ಶಿಕ್ಷಕರಾದ ಸಿ ವಾಯ ಭಜಂತ್ರಿ ಯವರು ಸಾoಸ್ಕೃತಿಕ ಕಾರ್ಯಕ್ರಮ ನೆಡೆಸಿಕೊಟ್ಟರು, ಎ ಡಿ ದೋಟಿಹಾಳ ನಿರೂಪಿಸಿದರು, ಬಿ ಎಸ್ ಮಸ್ಕಿಮಠ್ ವಂದಿಸಿದರು, ಶಾಲೆಯ ಎಲ್ಲ ಗುರುಗಳು, ಬಿಸಿ ಊಟದ ಸಿಬ್ಬಂದಿಯವರು, ಪಾಲಕರು, ಸಾರ್ವಜನಿಕರು, ಭಾಗವಹಿಸಿದ್ದರು.

ವರದಿ : ದಾವಲ್ ಶೇಡಂ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!