ಚಿಕ್ಕೋಡಿ :-ಪಟ್ಟಣದ ವ್ಯಾಪ್ತಿಯಲ್ಲಿ ಆರೋಗ್ಯ್ ಸಂರಕ್ಷಣೆ ಕುರಿತು ಸಾರ್ವಜನಿಕ ದೂರು ಬಂದ ಹಿನ್ನೆಲೆ ಅಜಿನೋಮೊಟೊ ಮಾರಾಟ ಮಾಡುತ್ತಿರುವ ಅಂಗಡಿ ಮೇಲೆ ಮುಖ್ಯಾಧಿಕಾರಿ ಶ್ರೀ ಮಹಾಂತೇಶ ನಿಡವಣಿ ನಿರ್ದೇಶನದಂತೆ ದಾಳಿ ಮಾಡಿ ಅಜಿನೋಮೊಟೊ ವಶಪಡಿಸಿಕೊಂಡು ಎಚ್ಚರಿಕೆ ನೀಡಲಾಯಿತು.
ಚಿಕ್ಕೋಡಿ ನಗರದ ವಿವಿಧಡೆ ಅಂಗಡಿಗಳಲ್ಲಿ ಮಾರಾಟ ಮಾಡುತಿದ್ದ ಅಜಿನೊಮೊಟೊ ಟೆಸ್ಟಿಂಗ್ ಪೌಡರ್ ವನ್ನು ಪುರಸಭೆ ಅಧಿಕಾರಿಗಳ ನೇತೃತ್ವದಲ್ಲಿ ದಾಳಿ ಮಾಡಲಾಯಿತು.ಅಂಗಡಿಯಲ್ಲಿ 10 ರಿಂದ 15 kg ಯಷ್ಟು ಅಜಿನೊಮೊಟೊ ಟೆಸ್ಟಿಂಗ್ ಪೌಡರ್ ವನ್ನು ವಶಪಡಿಸಿಕೊಂಡರು.ಹೋಟೆಲಗಳು ಚೈನೀಸ್ ಫುಡ್‌ಗಳಲ್ಲಿ ರುಚಿ ವರ್ಧನೆಗಾಗಿ ಅಜಿನೊಮೊಟೊ ರಾಸಾಯನಿಕ ಬಳಸುವುದನ್ನು ನಿಷೇಧಿಸಲು ಸರಕಾರ ಮುಂದಾಗಿದೆ.
ಟೇಸ್ಟಿಂಗ್ ಪೌಡರ್ ಎಂದೇ ಹೆಸರಾದ ಅಜಿನೊಮೊಟೊಗೆ ಮೊನೊಸೋಡಿಯಂ ಗ್ಲುಟಮೇಟ್ (ಎಂಎಸ್‌ಜಿ) ಎಂಬ ರಾಸಾಯನಿಕ ಹೆಸರಿದೆ. ಇದನ್ನು ಕೆಲವು ಹೋಟೆಲ್‌ಗಳಲ್ಲಿ ಆಹಾರದ ರುಚಿ ಹೆಚ್ಚಿಸಲು ಬಳಸಲಾಗುತ್ತಿದೆ.
ಇದು ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟು ಮಾಡುವುದರಿಂದ ಅದನ್ನು ನಿಷೇಧಿಸಲಾಗಿದೆ ಗೋಬಿ ಮಂಚೂರಿ, ಫ್ರೈಡ್ ರೈಸ್, ಸಾಲಾಡ್ ಡ್ರೆಸ್ಸಿಂಗ್, ಸಾಸ್, ಸೂಪ್ ಸೇರಿದಂತೆ ನಾನಾ ರೀತಿಯ ಜಂಕ್ ಫುಡ್‌ಗಳಲ್ಲಿ ಹೆಚ್ಚಾಗಿ ಬಳಸುವ ಈ ರಾಸಾಯನಿಕ ಪದಾರ್ಥ ಆರೋಗ್ಯಕ್ಕೆ ಅತ್ಯಂತ ಹಾನಿಕಾರಕ ಯಂದು ಅಧಿಕಾರಿಗಳು ತಿಳಿಸಿದರು.
ಬೈಕ್ ಪುರ ಸಭೆ ಚೀಪ್ ಆಫೀಸರ್ ಮಾಂತೇಶ್ ನಿಡವಣಿ.ಈ ಸಂದರ್ಭದಲ್ಲಿ ಪ್ರಭಾರಿ ಆರೋಗ್ಯ ನೀರಿಕ್ಷಕ ಆರ್ ಎಮ್ ಚಿನ್ನಗುಂಡಿ ಹಾಗೂ ಪುರಸಭೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು
ವರದಿ :-ರಾಜು ಮುಂಡೆ