ಮಲ್ಲಮ್ಮನ ಬೆಳವಡಿ:ವೀರರಾಣಿ ಬೆಳವಡಿ ಮಲ್ಲಮ್ಮ ಮಹಿಳಾ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಸಮಾಜ ಸೇವಕಿ ಸವಿತಾ ಆರ್ ಪಾಟೀಲರವರಿಗೆ ಇತ್ತೀಚೆಗೆ ಗೋವಾದ ಮಡಗಾವದಲ್ಲಿ ನಡೆದ ರಾಷ್ಟç ಮಟ್ಟದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮಾಜ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕಲಬುರ್ಗಿಯ ಮಲ್ಲಿಕಾರ್ಜುನ ಮುತ್ಯಾ ಸ್ವಾಮಿಜಿ ಹಾಗೂ ಪ್ರತಿಷ್ಠಾನದ ಬಸವ್ವ ಗೋದಳ್ಳಿ, ನೀಲವ್ವ ಕರೀಕಟ್ಟಿ, ಭಾರತಿ ಉಪ್ಪಿನ, ಪಾರ್ವತೆವ್ವ ಹಕ್ಕರಕಿ, ರುದ್ರಮ್ಮ ಕರೀಕಟ್ಟಿ, , ಶೋಭಾ ಕರೀಕಟ್ಟಿ, ಮಲ್ಲಮ್ಮ ಗೋದಳ್ಳಿ, ಶಶಿಕಲಾ ಕರೀಕಟ್ಟಿ, ಪಾರ್ವತಿ ಕರೀಕಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ವರದಿ :ದುಂಡಪ್ಪ ಹೂಲಿ




