Ad imageAd image

ಸಾಂಬಾರ್ ಮೈಮೇಲೆ ಬಿದ್ದು ಬಾಲಕಿ ಸಾವು

Bharath Vaibhav
ಸಾಂಬಾರ್ ಮೈಮೇಲೆ ಬಿದ್ದು ಬಾಲಕಿ ಸಾವು
WhatsApp Group Join Now
Telegram Group Join Now

ಹಾವೇರಿ: ಬಾಲಕಿಯೊಬ್ಬಳು ಸಾಂಬಾರ್‌ ಮೈ ಮೇಲೆ ಬಿದ್ದು ಗಾಯಗೊಂಡು ಸಾವಿಗೀಡಾಗಿರುವ ಘಟನೆ ಹಾವೇರಿ ನಡೆದಿದೆ.

ಮದುವೆಗೆ ಹೋಗಿದ್ದಾಗ ನಡೆದ ಘಟನೆಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ರಾಮಪುರ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದ್ದು, ಮೃತ ಬಾಲಕಿಯನ್ನು ರುಕ್ಸಾನಾ ಬಾನು ಶೇಖ್ ಸನದಿ ಎಂದು ಗುರುತಿಸಲಾಗಿದೆ.

ಪೋಷಕರ ಜೊತೆಗೆ ಬಾಲಕಿ ಸಂಬಂಧಿಕರ ಮದುವೆಗೆ ಹೋಗಿದ್ದಾಗ ಆಕೆಯ ಮೈ ಮೇಲೆ ಬಿಸಿ ಸಾಂಬಾರ್ ಬಿದ್ದಿದೆ. ತಕ್ಷಣವೇ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಅಲ್ಲದೇ, ಚಿಕಿತ್ಸೆ ನೀಡಿ 2 ದಿನಗಳ ನಂತರ ಡಿಸ್ಚಾರ್ಜ್‌ ಕೂಡ ಮಾಡಲಾಗಿತ್ತು.

ಮತ್ತೆ ಶುರುವಾಗಿದ್ದ ಗುಳ್ಳೆಚಿಕಿತ್ಸೆಯ ನಂತರ ಸ್ವಲ್ಪ ಸುಧಾರಿಸಿಕೊಂಡಿದ್ದ ಬಾಲಕಿ ಮೈ ಮೇಲೆ ಮತ್ತೆ 2 ದಿನದ ನಂತರ ಅಂದರೆ ಇಂದು ಗುಳ್ಳೆಗಳು ಕಾಣಿಸಿಕೊಂಡಿತ್ತು.

ಇದನ್ನ ನೋಡಿದ ಪೋಷಕರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದ್ರೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಬಾಲಕಿ ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!