ಮಂಡ್ಯ : ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ಕಿರುಕುಳವು ರಾಜ್ಯದಲ್ಲಿ ನಿರಂತರವಾಗಿ ನಡೆಯುತ್ತಿದ್ದು, ಇದೀಗ ಸಾಲಗಾರರ ದೌರ್ಜನ್ಯಕ್ಕೆ ಮನನೊಂದು ಒಂದೇ ಕುಟುಂಬ ಮೂವರು ನಾಲೆಗೆ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಜಿಲ್ಲೆಯ ಯರಳ್ಳಿ ಮಾರ್ಗದ ವಿಸಿ ನಾಲೆಗೆ ಹಾರಿ ಮಾಸ್ತಪ್ಪ (65) ಪತ್ನಿ ರತ್ತಮ್ಮ (45) ಪುತ್ರಿ ಲಕ್ಷ್ಮೀ (18) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಿತಿ ಮೀರಿದ ಸಾಲವೇ ಆತ್ಮಹತ್ಯೆಗೆ ಕಾರಣ ಎಂಬ ಶಂಕೆಯೂ ವ್ಯಕ್ತವಾಗಿದ್ದು, ಶ್ರೀರಂಗಪಟ್ಟಣದ ಗಂಜಾಂ ನಿವಾಸಿಯೂ ಆಗಿದ್ದ ಮಾಸ್ತಪ್ಪ ಆಟೋ ಚಾಲಕಾರಿಗದ್ದರು. ಇದೀಗ ಸಾಲದ ಹೊರೆಗೆ ನೊಂದ ಮಾಸ್ತಪ್ಪ ಕುಟುಂಬವು ದಾರುಣ ಅಂತ್ಯಕಂಡಿದೆ.
ಸದ್ಯ ನಾಲೆಯಿಂದ ಇಬ್ಬರ ಮೃತದೇಹ ಹೊರ ತೆಗೆಯಲಾಗಿದ್ದು, ಇನ್ನೊಬ್ಬರ ಶವಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ. ಈ ಕುರಿತು ಮಂಡ್ಯ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




