ನಿಪ್ಪಾಣಿ : ಭೋಜ ಗ್ರಾಮದ ಕಲ್ಪವೃಕ್ಷ ಕೋ ಆಪ್ ಕ್ರೆಡಿಟ್ ಸೊಸೈಟಿಯ ಸನ್ 2026 ರಿಂದ 2031ರ ವರೆಗಿನ ಪಂಚವಾರ್ಷಿಕ ಚುನಾವಣೆ ಅತ್ಯಂತ ಶಾಂತಿ ಹಾಗೂ ಸೌಹಾರ್ದಯುತವಾಗಿ ನಡೆದಿದ್ದು ಚುನಾವಣೆಯಲ್ಲಿಯ ಒಟ್ಟು 15 ಸ್ಥಾನಗಳಿಗೆ ಸ್ಪರ್ಧಿಸಿದ್ದ ಎಲ್ಲ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಚುನಾವಣಾ ಅಧಿಕಾರಿ ಹರೀಶ ಕಾಂಬಳೆ ತಿಳಿಸಿದರು. ಬುಧವಾರ ಸಂಘದ ಕಾರ್ಯಾಲಯದಲ್ಲಿ ಸಹಕಾರಿ ಸಂಘಗಳ ಪ್ರಥಮ ದರ್ಜೆ ಸಹಾಯಕರಾದ ಹಾಗೂ ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ವರು ಅವಿರೋಧವಾಗಿ ವಾದ ನಿರ್ದೇಶಕರ ಹೆಸರುಗಳನ್ನು ಘೋಷಿಸಿದರು.
ಅವಿರೋಧವಾಗಿ ಆಯ್ಕೆಯಾದವರಲ್ಲಿ ರಮಿತ ಸದಲಗೆ, ರಮೇಶ್ ಪಾಟೀಲ, ನೇಮಗೌಡ ಪಾಟೀಲ, ಅಶೋಕ ಅಪ್ಪಾಸಾಬ ಪಾಟೀಲ, ರವೀಂದ್ರ ರೂಗೆ, ರಾಜಗೌಡ ಪಾಟೀಲ ಐತವಾಡೆ,ಅಶೋಕ ಕುರುಂದವಾಡೆ,ದಾದಾಸಾಬ ಪಾಟೀಲ, ಸೌ ವಿಜಯಾ ಪಾಟೀಲ, ಸೌ.ಪದ್ಮಶ್ರೀ ಟಾಕಳೆ, ಶರಾಫತ್ ದುಧಗಾವೆ,ಅನಿಲ ಕುಮಾರ ಪಾಟೀಲ, ಹಾಗೂ ವಸಂತ ವಡ್ಡರ ಸೇರಿದ್ದಾರೆ. ಪ್ರಸಕ್ತ ಚುನಾವಣೆಯಲ್ಲಿ ನೂತನ ನಾಲ್ವರು ಸಂಚಾಲಕರಿಗೆ ಅವಕಾಶ ನೀಡಿದ್ದು ವಿಶೇಷವಾಗಿತ್ತು .ಈ ಸಂದರ್ಭದಲ್ಲಿ ಸಂಘದ ವತಿಯಿಂದ ಶಾಲ ಶ್ರೀಫಲ ನೀಡಿ ಅವರನ್ನು ಸನ್ಮಾನಿಸಲಾಯಿತು.
ಇದೇ ವೇಳೆಗೆ ನೂತನ ನಿರ್ದೇಶಕರಿಂದ ಹಾಗೂ ಚುನಾವಣೆ ಅಧಿಕಾರಿಗಳ ನೇತೃತ್ವದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸಂದೀಪ ಪಾಟೀಲ ಅವರನ್ನು ಅವಿರೋಧವಾಗಿ ಆಯ್ಕೆಮಾಡ ಲಾಗಿದ್ದು ಸಂಸ್ಥೆಯ ಮೇಲಿನ ವಿಶ್ವಾಸ ಹಾಗೂ ಪ್ರಗತಿಗೆ ಪಾತ್ರವಾಗಿದೆ. ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದರು. ಹಾಗೂ ನೂತನ ಅಧ್ಯಕ್ಷ ಸಂಚಾಲಕರಿಗೆ ಪ್ರಮಾಣ ಪತ್ರ ನೀಡಿ ಸಂಘದ ಏಳಿಗೆಗಾಗಿ ಶ್ರಮಿಸಿ ಹಾಗೂ ಸಂಘದ ಆರ್ಥಿಕತೆಯನ್ನು ಶಿಖರ ಮಟ್ಟಕ್ಕೇರಿಸಿ ಎಂದು ಹಾರೈಸಿದರು.
ಸಮಾರಂಭದಲ್ಲಿ ಅಧ್ಯಕ್ಷ ಸಂದೀಪ್ ಪಾಟೀಲ್ ಮಾತನಾಡಿ ಕಳೆದ ಮೂರು ದಶಕಗಳಿಂದ ಮಿತ ಖರ್ಚು ಪಾರದರ್ಶಕ ಆಡಳಿತದೊಂದಿಗೆ ರೈತರಿಗೆ ಸ್ಥಾಪನೆಯಾದ ತಮ್ಮ ಸಂಸ್ಥೆ ಆರ್ಥಿಕ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದ್ದು ಒಂದು ಕೋಟಿ ರೂಪಾಯಿಗೂ ಅಧಿಕ ಲಾಭಗಳಿಸುತ್ತಿದೆ ಸದಸ್ಯರಿಗೆ 25 ರಷ್ಟು ಲಾಭಾಂಶ ನೀಡುವ ಜಿಲ್ಲೆಯಲ್ಲಿಯ ಏಕೈಕ ಸಂಸ್ಥೆ ತಮ್ಮದಾಗಿರುವುದಾಗಿ ತಿಳಿಸಿದರು. ಸಭೆಯಲ್ಲಿ ಸಂಘದ ಸರ್ವ ಸಂಚಾಲಕರು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ವರದಿ : ಮಹಾವೀರ ಚಿಂಚಣೆ




