ಹುಮನಾಬಾದ: ತಾಲೂಕಿನ ಮದರಗಾಂವ ಗ್ರಾಮ ಪಂಚಾಯತಿನ ಹಿಂದಿನ ಅಧ್ಯಕ್ಷರು ಮರಣ ಹೊಂದಿದ್ದರಿಂದ ಅಧ್ಯಕ್ಷ ಸ್ಥಾನ ತೆರವಾಗಿತ್ತು. ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ಚುನಾವಣೆ ಜರುಗಿತ್ತು.ಸಂಗಮ್ಮ ಮಾರುತಿ ಅವರು ಒಬ್ಬರೇ ನಾಮಪತ್ರ ಸಲ್ಲಿಸಿದರಿಂದ ಅಧ್ಯಕ್ಷರಾಗಿ ಸಂಗಮ್ಮ ಅವರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾಧಿಕಾರಿಗಳು ತಾಲ್ಲೂಕು ಪಂಚಾಯತ ಇಒ ದೀಪಿಕಾ ನಾಯ್ಕರ ತಿಳಿಸಿದರು.
ಬಳಿಕ ನೂತನ ಅಧ್ಯಕ್ಷೆ ಸಂಗಮ್ಮ ಅವರಿಗೆ ಗ್ರಾಮದ ಗಣ್ಯರಿಂದ ಸನ್ಮಾನಿಸಿ ಗೌರವಿಸಲಾಯಿತು.ಅಲ್ಲದೆ ಪಟಾಕಿ ಸಿಡಿಸಿ ಸಂಭ್ರಮೀಸಲಾಯಿತು.
ಮಾಜಿ ಜಿಲ್ಲಾ ಪಂಚಾಯತ ಉಪಾಧ್ಯಕ್ಷ ರಾಜಶೇಖರ ಪಾಟೀಲ ಮದರಗಾಂವ ಮತ್ತು ರಾಜೀವ ಗಾಂಧೀಜಿ ವಸತಿ ನಿಗಮದ ಮಾಜಿ ನಿರ್ದೇಶಕ ಮಲ್ಲಿಕಾರ್ಜುನ ಮಹೇಂದ್ರಕರ ನೂತನ ಅಧ್ಯಕ್ಷರಿಗೆ ಶುಭ ಹಾರೈಸಿದ್ದು .
ಈ ಸಂದರ್ಭದಲ್ಲಿ ಈಶ್ವರ ಚಿದ್ರಿ,ಚಂದ್ರಶೇಖರ ಪಾಟೀಲಬಸವರಾಜ ದುಬಲಗುಂಡಿ,ಪ್ರಕಾಶ ಕಪ್ಪರಗಾವ ಅನಿಲ ಕಬಿರಾಬಾದೆ,ಶಿವರಾಜ,ದಯಾನಂದ ಸುನಿಲ ಸೇರಿ ಅನೇಕರು ಇದ್ದರು.
ವರದಿ:ಸಜೀಶ ಲಂಬುನೋರ