Ad imageAd image

ಸಂಗನಹಾಲ ದಲಿತ ಯುವಕ ಯಮನಪ್ಪನ ಕೊಲೆ ಖಂಡಿಸಿ ! ಕೊಪ್ಪಳ ಜಿಲ್ಲಾಡಳಿತ ಕಚೇರಿಯಿಂದ ಸಂಗನಹಾಲು ಚಲೋ !

Bharath Vaibhav
ಸಂಗನಹಾಲ ದಲಿತ ಯುವಕ ಯಮನಪ್ಪನ ಕೊಲೆ ಖಂಡಿಸಿ ! ಕೊಪ್ಪಳ ಜಿಲ್ಲಾಡಳಿತ ಕಚೇರಿಯಿಂದ ಸಂಗನಹಾಲು ಚಲೋ !
WhatsApp Group Join Now
Telegram Group Join Now

ಕೊಪ್ಪಳ  :- ಅಸ್ಪೃಶ್ಯತೆ ಎಂಬುದು ನಾಗರಿಕ ಸಮಾಜದ ಅವಮಾನಕರ ಸಂಗತಿ ಅದಕ್ಕಾಗಿಯೇ ಅದನ್ನು ದೇಶಕ್ಕಂಟಿದ ಕಳಂಕವೆಂದು ಹೇಳಲಾಗುತ್ತದೆ ಮನುಷ್ಯ ತಾರತಮ್ಯದ ಜಾತಿ ವ್ಯವಸ್ಥೆ ನಿರ್ಮಾಣ ಮಾಡಿ ಇಲ್ಲಿ ಶ್ರೇಷ್ಠ ಮತ್ತು ಕನಿಷ್ಠ ಮನೋಭಾವ ಸೃಷ್ಟಿಸಿದ್ದು ಸನಾತನ ವೈದಿಕ ಧರ್ಮ ಮನುಷ್ಯನ ಎದುರು ಮನುಷ್ಯನೇ ಕೀಳು ಎಂದು ಹೇಳುತ್ತದೆ ತಳ ಸಮುದಾಯಗಳನ್ನು ನಿರಂತರವಾಗಿ ಶೋಷಣೆ ಗೊಳಪಡಿಸುತ್ತದೆ.

ಸಂಗನಹಾಲ ಗ್ರಾಮದಲ್ಲೂ ಆದದ್ದು ಅದೇ ಕ್ಷೌರಿಕ ಮತ್ತು ದಲಿತ ಯುವಕನ ಕಟಿಂಗ್ ವಿಚಾರವಾಗಿ ವಾಗ್ವಾದ ನಡೆದು ಜಗಳವಾಡಿ ಕೊಂಡಿದ್ದಾರೆ ಆ ಸಮಯದಲ್ಲಿ ಕ್ಷೌರಿಕ ಮುದುಕಪ್ಪ ತನ್ನ ಕೈಯಲ್ಲಿದ್ದ ಕತ್ತರಿಯಿಂದ ಯಮನಪ್ಪನಿಗೆ ಒಕ್ಕಳ ಭಾಗಕ್ಕೆ ಚುಚ್ಚಿದ್ದಾನೆ ಮರಣಾಂತಿಕ ಹಲ್ಲೆಗೊಳಗಾದ ಯಮನಪ್ಪ ಜೀವ ಕಳೆದುಕೊಂಡಿದ್ದಾನೆ .

ಈ ಪ್ರಕರಣ ಗತಿಸಿ ವ್ಯಾಪಕವಾಗಿ ಸುದ್ದಿ ಆಗುತ್ತಿದ್ದಂತೆ ಶಾಸಕರು. ಸಚಿವರು. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು. ಹತ್ಯೆಯಾದ ಯುವಕನ ಮನೆಗೆ ಭೇಟಿ ನೀಡಿ ಸಾಂತ್ವನ ಮಾತುಗಳನ್ನು ಹೇಳಿ ಅಷ್ಟಿಷ್ಟು ಪರಿಹಾರವನ್ನು ನೀಡಿದ್ದಾರೆ. ನೊಂದ ದಲಿತ ಕುಟುಂಬಗಳಿಗೆ ಸಣ್ಣದೊಂದು ಪರಿಹಾರವನ್ನು ನೀಡಿ ಒಂದೆರಡು ಸಾಂತ್ವನ ಮಾತುಗಳನ್ನು ಹೇಳಿ ಕೈ ತೊಳ್ದುಕೊಳ್ಳುವುದು ಇದು ಪರಿಹಾರ ಅನಿಸುವುದಿಲ್ಲ ಅಸ್ಪೃಶ್ಯತೆಯ ಹೆಸರಿನಲ್ಲಿ ನಡೆಯುವ ದೌರ್ಜನ್ಯ. ಕೊಲೆಗಳು. ತಡೆಯಲು ಸರ್ಕಾರ ಶಾಶ್ವತಾವಾದ ಪರಿಹಾರವನ್ನು ಹುಡುಕ ಬೇಕಾಗಿದೆ.

ಅದಕ್ಕೆ ಸೂಕ್ತವಾದ ಕಾನೂನು ತಿದ್ದುಪಡಿಗಳನ್ನು ಜಾರಿಗೆ ತರುವುದು ಜೊತೆಗೆ ದಲಿತ ರಕ್ಷಣೆಗೆ ಕಾರ್ಯಕ್ರಮಗಳನ್ನು ರೂಪಿಸಬೇಕು. ಕೊಪ್ಪಳ ಜಿಲ್ಲೆಯನ್ನು ದಲಿತರ ಹಾಗೂ ಅಲ್ಪಸಂಖ್ಯಾತರ ದೌರ್ಜನ್ಯ ಪೀಡಿತ ಜಿಲ್ಲೆಯೆಂದು ಘೋಷಿಸಬೇಕು. ಸರ್ಕಾರ ಈ ಸಮುದಾಯಗಳಿಗೆ ಸೂಕ್ತ ರಕ್ಷಣೆ ಒದಗಿಸುವ ವ್ಯವಸ್ಥೆ ಮಾಡಬೇಕು.. ಕಲ್ಯಾಣ ಕರ್ನಾಟಕ ಹೆಸರು ಹಿಂಪಡೆದು ಚಾರಿತ್ರಿಕವಾಗಿ ಸರಿಯಾಗಿರುವ “ಹೈದರಾಬಾದ್ ಕರ್ನಾಟಕ” ಹೆಸರನ್ನು ಪುನರ್ ಘೋಷಣೆಯಾಗಬೇಕು.

ದಲಿತರ ಮೇಲೆ ದೌರ್ಜನ್ಯ ಪ್ರಕಟಣೆಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕವಾದ ನ್ಯಾಯಾಲಯ ವ್ಯವಸ್ಥೆ ಆಗಬೇಕು.. ಅಸ್ಪೃಶ್ಯತೆ ಆಚರಣೆ ಪ್ರಕರಣಗಳು ಜೀವಂತವಿದ್ದರೆ ಅದಕ್ಕೆ ಆ ಜಿಲ್ಲೆಯ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ಹೊಣೆಗಾರಿಕೆನ್ನಾಗಿ ಮಾಡಬೇಕು..ದಲಿತರ ಮೇಲೆ ಹಲ್ಲೆ ನಡೆದಾಗ ಹಲ್ಲೆಗೆ ಒಳಗಾದವರ ಮೇಲೆ ಪ್ರತಿ ದೂರು (ಕೌಂಟರ್ ಕೇಸ್) ದಾಖಲಿಸುವ ಪ್ರವೃತ್ತಿ ನಿಲ್ಲಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು. ಈ ಒಂದು ಸೌಹಾರ್ದ ಸಮಾವೇಶಕ್ಕೆ –
ಅನೇಕ ಸಹಭಾಗಿ ಸಂಘಟನೆ – ಸಂಸ್ಥೆಗಳು ಈ ಸಂಗನ ನಾಲ ಚಲೋ ಸೌಹಾರ್ದ ಸಮಾವೇಶಕ್ಕೆ ಬೆಂಬಲ ನೀಡಿದವು..

ವರದಿ :- ಬಸವರಾಜ ಬುಕ್ಕನಹಟ್ಟಿ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!