Ad imageAd image

ಸಂಜಯ ಪಾಟೀಲ ಹೇಳಿಕೆ ಸ್ತ್ರೀ ಕುಲಕ್ಕೇ ಅವಮಾನ – ಮ್ಯಾಗೋಟಿ

Bharath Vaibhav
ಸಂಜಯ ಪಾಟೀಲ ಹೇಳಿಕೆ ಸ್ತ್ರೀ ಕುಲಕ್ಕೇ ಅವಮಾನ – ಮ್ಯಾಗೋಟಿ
WhatsApp Group Join Now
Telegram Group Join Now

ಬೆಳಗಾವಿ: ಮಾಜಿ ಶಾಸಕ ಸಂಜಯ ಪಾಟೀಲ ಬಿಜೆಪಿ ಸಭೆಯಲ್ಲಿ, ಸಚಿವೆ ಲಕ್ಷ್ಮೀ ಹೆಬ್ಬಾಳಕರ ಬಗ್ಗೆ ತೀರಾ ಕೀಳು ಮಟ್ಟದ ಶಬ್ದಗಳಿಂದ ನಿಂದಿಸಿರುವುದನ್ನು ಬೆಳಗಾವಿ ಜಿಲ್ಲಾ ಕೆಡಿಪಿ ಸದಸ್ಯ ಬಸವರಾಜ ಮ್ಯಾಗೋಟಿ ತೀವ್ರವಾಗಿ ಖಂಡಿಸಿದ್ದಾರೆ.
ಸಂಜಯ ಪಾಟೀಲ ಇಡೀ ಸ್ತ್ರೀ ಕುಲವನ್ನೇ ಅವಹೇಳನ ಮಾಡಿದ್ದಾರೆ, ಅದೂ ಮಾಜಿ ಮುಖ್ಯಮಂತ್ರಿ, ಮಾಜಿ ಮಂತ್ರಿ, ಮಾಜಿ ಶಾಸಕ, ಹಾಲಿ ಸಂಸದೆ ಮತ್ತು ಇನ್ನೂ ಆನೇಕ ಗಣ್ಯರು ಭಾಗವಹಿಸಿದ ಸಭೆಯಲ್ಲಿ ಈ ಉದ್ಧಟತನವನ್ನು ಪ್ರದರ್ಶನ ಮಾಡಿದ್ದಾರೆ. ಆತನ ಈ ಅಸಭ್ಯ ವರ್ತನೆಯಿಂದ ವೇದಿಕೆಯ ಮೇಲೆ ಕುಳಿತ ವ್ಯಕ್ತಿಗಳಿಗೆ ಮುಜುಗರ ಆಗಲಿಲ್ಲವೇ? ಆತನ ಮಾತುಗಳಿಗೆ ಇವರೆಲ್ಲಾ ನಗ್ತಾ ಇರೋದು ಕಂಡು ಬಂತು. ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ಮ್ಯಾಗೋಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನಮ್ಮ ದೇಶದ ಪರಂಪರೆಯ ಪ್ರಕಾರ ಸ್ತ್ರೀ ಕುಲವನ್ನು ಭಾರತ ಮಾತೆಗೆ ಹೋಲಿಸುತ್ತೇವೆ. “ಭಾರತ ಮಾತಾ ಕಿ ಜೈ” ಅನ್ನುವ ಸಂಸ್ಕೃತಿ ನಮ್ಮದು. ತಾಯಿಯಾಗಿ, ಸಹೋದರಿಯಾಗಿ ಇಡೀ ತನ್ನ ಕುಟುಂಬವನ್ನು ಮಡಿಲಲ್ಲಿ ಇಟ್ಟುಕೊಂಡು ಜೋಪಾನ ಮಾಡುತ್ತಿರುವ ಮಹಿಳೆಯನ್ನು ಇವರು ನಿಂದಿಸುತ್ತಿದ್ದಾರೆ. ಜನರು ಈಗಾಗಲೆ ಇವರಿಗೆ ತಕ್ಕ ಪಾಠ ಕಲಿಸಿದರೂ ಕೂಡ ಈತ ತನ್ನ ಚಾಳಿ ಬಿಟ್ಟಿಲ್ಲ. ಬಿಜೆಪಿ ಅಭ್ಯರ್ಥಿಗೆ ಹಾಗೂ ಹಾಲಿ ಸಂಸದರಿಗೆ ನಾಚಿಕೆಯಾಗಬೇಕು. ಇವನಿಂದ ನೀವು ಇದೇ ತರಹ ಭಾಷಣ ಮಾಡಿಸ್ತಾ ಹೋದರೆ ಯಾವ ಮಹಿಳೆಯರ ಮತವೂ ನಿಮಗೆ ಸಿಗುವುದಿಲ್ಲ. ಮಾತನಾಡುವಾಗ ಅದು ಯಾವ ರೀತಿಯಾದ ತಿರುವು ಪಡೆಯುತ್ತದೆ ಎಂಬುದನ್ನು ಅರಿತುಕೊಂಡೆ ಮಾತನಾಡಬೇಕು. ನರವಿಲ್ಲದ ನಾಲಿಗೆ ಎಂದು ಉದ್ದುದ್ದ ಬಿಡಬಾರದು. ಮಾತುಗಳ ಮೇಲೆ ಹಿಡಿತವಿರಲಿ. ಇದು ನಿಮಗೆ ಎಚ್ಚರಿಕೆ ಎನ್ನುವುದನ್ನು ತಿಳಿದಿರಿ ಎಂದು ಮ್ಯಾಗೋಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವರದಿ ಪ್ರತೀಕ ಚಿಟಗಿ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!