ನವದೆಹಲಿ : ಭಾರತದ ಉಚ್ಚ ನ್ಯಾಯಾಲಯದ 51 ನೇ ನ್ಯಾಯಮೂರ್ತಿಯಾಗಿ ಸಂಜೀವ್ ಕುಮಾರ್ ಪ್ರಮಾಣ ವಚನ ಸ್ವೀಕರಿಸಿದರು.
ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಜೀವ್ ಕುಮಾರ್ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಮಾಣ ವಚನ ಬೋಧಿಸಿದರು.
ನ್ಯಾಯಮೂರ್ತಿ ಚಂದ್ರಚೂಡ್ ನಿವೃತ್ತಿಯಾಗಿದ್ದು, ಭಾನುವಾರ ಅವರ ವೃತ್ತಿ ಜೀವನದ ಕೊನೆಯ ದಿನವಾಗಿತ್ತು. ಮುಂದಿನ ನ್ಯಾಐಮೂರ್ತಿಯಾಗಿ ಸಂಜೀವ್ ಕುಮಾರ್ ಖನ್ನಾ ಅವರ ಹೆಸರನ್ನು ಚಂದ್ರಚೂಡ್ ಶಿಫಾರಸು ಮಾಡಿದ್ದರು.
ಅರವಿಂದ್ ಕೇಜ್ರಿವಾಲ್ ಅವರ ಮದ್ಯನೀತಿ ಹಗರಣ ಸೇರಿದಂತೆ ದೇಶದ ಪ್ರಮುಖ ರಾಜಕೀಯ ವಿಚಾರಣೆಗಳನ್ನು ನಡೆಸಿರುವ ಖನ್ನಾ ಹಿರಿಯ ವಕೀಲರಾಗಿಯೂ ಸೇವೆ ಸಲ್ಲಿಸಿದ್ದರು. 2019 ರಲ್ಲಿ ಸುಪ್ರೀಂ ಕೋರ್ಟ್ ಗೆ ನೇಮಕಗೊಂಡಿದ್ದ ಅವರು 2025 ರ ಮೇ 13 ರವರೆಗೆ ಸೇವೆಯಲ್ಲಿ ಮುಂದುವರೆಯಲಿದ್ದಾರೆ.